AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಿಮಾಲಯ ಟ್ರೆಕ್ಕಿಂಗ್ ವೇಳೆ ಪ್ರವಾಸಿಗರಿಗೆ ಸ್ವಚ್ಛತೆಯ ಪಾಠ ಮಾಡಿದ ರಷ್ಯನ್ ಮಹಿಳೆ

ಕಸದ ಹಾಕಬಾರದೆಂಬ ಬಗ್ಗೆ ಯಾವ ಜಾಗೃತಿ, ಯಾವ ಅಭಿಮಾನ ಮಾಡಿದ್ರು ಭಾರತದ ಜನ ಬದಾಲಾಗುವಂತೆ ಕಾಣುತ್ತಿಲ್ಲ. ವಿದೇಶಿಗರು ಈ ಬಗ್ಗೆ ಪಾಠ ಮಾಡುವ ಹಂತಕ್ಕೆ ಬಂದು ತಲುಪಿದ್ದೇವೆ. ವಿದೇಶಿಗರೊಬ್ಬರು ಹಿಮಾಲಯ ಟ್ರೆಕ್ಕಿಂಗ್ ವೇಳೆ ಸ್ವಚ್ಛತೆ ಪಾಠ ಮಾಡಿದ್ದಾರೆ. ರಷ್ಯನ್ ಮಹಿಳೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ಹಿಮಾಲಯ ಟ್ರೆಕ್ಕಿಂಗ್ ವೇಳೆ ಪ್ರವಾಸಿಗರಿಗೆ ಸ್ವಚ್ಛತೆಯ ಪಾಠ ಮಾಡಿದ ರಷ್ಯನ್ ಮಹಿಳೆ
ರಷ್ಯನ್ ಮಹಿಳೆ ತಾನ್ಯಾImage Credit source: Instagram
ಸಾಯಿನಂದಾ
|

Updated on: Dec 11, 2025 | 4:45 PM

Share

ಭಾರತದಲ್ಲಿ ಕಸದ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಇದು ಮುಗಿಯದ ಗೋಳು ಎನ್ನುವಂತಾಗಿದೆ. ಹೌದು, ಪ್ರವಾಸಿ ತಾಣ, ಮನೆ, ಧಾರ್ಮಿಕ ಕೇಂದ್ರ ಹೀಗೆ ಎಲ್ಲೆಂದರಲ್ಲಿ ಕಸ ಹಾಕುವುದು ಮಾತ್ರ ನಿಲ್ಲುತ್ತಿಲ್ಲ. ಆದರೆ ಇದೀಗ ನಮ್ಮ ಸಮಸ್ಯೆಗಳನ್ನು ವಿದೇಶಿಗರು ತೋರಿಸುವ ಮಟ್ಟಿಗೆ ನಾವು ಬಂದು ತಲುಪಿದೆ. ಹಿಮಾಲಯ ಟ್ರಕ್ಕಿಂಗ್‌ಗೆ (Himalayan trekking) ಸ್ನೇಹಿತರ ಜತೆಗೆ ಹೋಗಿದ್ದ ರಷ್ಯನ್ ಮಹಿಳೆಯೊಬ್ಬರು (Russian woman) ಕಸವನ್ನು ಹೆಕ್ಕುತ್ತಾ ಪ್ರವಾಸಿಗರ ಬಳಿ ಇಲ್ಲಿನ ಸ್ವಚ್ಛತೆಯನ್ನು ಕಾಪಾಡುವಂತೆ ಒತ್ತಾಯಿಸುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿಜಕ್ಕೂ ಇದು ಬೇಸರ ಸಂಗತಿ ಎಂದು ಕಾಮೆಂಟ್ ಮಾಡಿದ್ದಾರೆ.

ತಾನ್ಯಾ (tanya_in_india) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹಿಮಾಲಯನ್ ಟ್ರೆಕ್ಕಿಂಗ್ ವೇಳೆ ರಷ್ಯನ್ ಮಹಿಳೆ ತನ್ನ ಕೈಯಲ್ಲಿ ಕಸದ ಚೀಲವನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು. ಆ ಬಳಿಕ ಅಲ್ಲಿಂದ ಪ್ರವಾಸಿಗರನ್ನು ಉದ್ದೇಶಿಸಿ ಸ್ವಚ್ಛತೆಯ ಪಾಠ ಮಾಡುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ನನ್ನ ಹೆಸರು ತಾನ್ಯಾ. ನಾನು ರಷ್ಯಾದವಳು, ನಾನು ಇಂದು ಬೆಳಿಗ್ಗೆಯಿಂದ ಚಂದ್ರಶಿಲಾಕ್ಕೆ ಚಾರಣ ಹೋಗಿದ್ದೆ. ಇದು ಅದ್ಭುತ ಸ್ಥಳ. ನಾನು ಈ ಸ್ಥಳ ಹಾಗೂಪ್ರಕೃತಿಯನ್ನು ಪ್ರೀತಿಸುತ್ತೇನೆ. ನಾನು ಈ ದೇಶವನ್ನು ಪ್ರೀತಿಸುತ್ತೇನೆ ಹಾಗೂ ಇಲ್ಲಿ ಪ್ರಯಾಣಿಸಲು ಇಷ್ಟಪಡುತ್ತೇನೆ. ಆದರೆ ನನಗೆ ದುಃಖವನ್ನುಂಟುಮಾಡುವ ಒಂದು ವಿಷಯವೆಂದರೆ ಕಸ. ನಾನು ಪ್ರಯಾಣದ ವೇಳೆ ಕಸ ಹೆಕ್ಕುವ ಮೂಲಕ ಸಣ್ಣ ಕೆಲಸಗಳನ್ನು ಮಾಡುತ್ತೇವೆ. ನಾನು ಎಲ್ಲವನ್ನೂ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಆದರೆ ಪ್ರಕೃತಿಯನ್ನು ನಮ್ಮ ಕೈಲಾದ ಮಟ್ಟಿಗೆ ಸ್ವಚ್ಛವಾಗಿಟ್ಟುಕೊಳ್ಳಬಹುದು. ಹೀಗೆ ಮಾಡಿದ್ರೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದು ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿರುವುದನ್ನು ನೋಡಬಹುದು.

ಇದನ್ನೂ ಓದಿ: ಬೆಂಗಳೂರಿನ ವಿಮಾನ ನಿಲ್ದಾಣದ ಸೌಂದರ್ಯಕ್ಕೆ ಫಿದಾ ಆದ ಡಚ್ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಎಂದಿದ್ದಾರೆ. ಮತ್ತೊಬ್ಬರು, ಒಂದಲ್ಲ ಒಂದು ದಿನ ಈ ಜನರು ಸ್ವಲ್ಪ ನಾಗರಿಕ ಪ್ರಜ್ಞೆಯನ್ನು ಕಲಿಯುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ
ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ
ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್
ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್
‘ದಿ ಡೆವಿಲ್’ ಸಿನಿಮಾ: 15 ದಿನಗಳಿಂದ ಮನೆಗೆ ಹೋಗಿಲ್ಲ ದರ್ಶನ್ ಫ್ಯಾನ್ಸ್
‘ದಿ ಡೆವಿಲ್’ ಸಿನಿಮಾ: 15 ದಿನಗಳಿಂದ ಮನೆಗೆ ಹೋಗಿಲ್ಲ ದರ್ಶನ್ ಫ್ಯಾನ್ಸ್
ಅರ್ಷದೀಪ್ ಮೇಲೆ ಉಗ್ರರೂಪ ತಾಳಿದ ಗಂಭೀರ್; ವಿಡಿಯೋ
ಅರ್ಷದೀಪ್ ಮೇಲೆ ಉಗ್ರರೂಪ ತಾಳಿದ ಗಂಭೀರ್; ವಿಡಿಯೋ
ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS:ಅಲೋಕ್ ಕುಮಾರ್ ಗತ್ತು ನೋಡಿ
ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS:ಅಲೋಕ್ ಕುಮಾರ್ ಗತ್ತು ನೋಡಿ
Bigg Boss: ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?
Bigg Boss: ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?
ಭೀಕರ ಬೈಕ್​​ ಅಪಘಾತ: ಎದೆ ಝಲ್​​ ಎನಿಸುವಂತಿದೆ ದೃಶ್ಯ
ಭೀಕರ ಬೈಕ್​​ ಅಪಘಾತ: ಎದೆ ಝಲ್​​ ಎನಿಸುವಂತಿದೆ ದೃಶ್ಯ
ದರ್ಶನ್ ರಾಜಕೀಯಕ್ಕೆ ಬರಬೇಕಾ ಬೇಡವಾ ಅನ್ನೋದು ಫ್ಯಾನ್ಸ್ ನಿರ್ಧಾರ: ದಿನಕರ್
ದರ್ಶನ್ ರಾಜಕೀಯಕ್ಕೆ ಬರಬೇಕಾ ಬೇಡವಾ ಅನ್ನೋದು ಫ್ಯಾನ್ಸ್ ನಿರ್ಧಾರ: ದಿನಕರ್
ಹೊಸ ಲುಕ್​​ನಲ್ಲಿ ಪ್ರಧಾನಿ; ಧುರಂಧರ್ ಸ್ಟೈಲ್​ನ ಮೋದಿ ಮಾಂಟೇಜ್ ವೈರಲ್
ಹೊಸ ಲುಕ್​​ನಲ್ಲಿ ಪ್ರಧಾನಿ; ಧುರಂಧರ್ ಸ್ಟೈಲ್​ನ ಮೋದಿ ಮಾಂಟೇಜ್ ವೈರಲ್
ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಡಿಕೆ ಶಿವಕುಮಾರ್ ಆಪ್ತ
ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಡಿಕೆ ಶಿವಕುಮಾರ್ ಆಪ್ತ