AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೆಂಗಳೂರಿನ ವಿಮಾನ ನಿಲ್ದಾಣದ ಸೌಂದರ್ಯಕ್ಕೆ ಫಿದಾ ಆದ ಡಚ್ ಮಹಿಳೆ

ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳು, ರುಚಿಕರ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ. ಆದರೆ ವಿದೇಶಿ ಮಹಿಳೆಯೊಬ್ಬರು ಬೆಂಗಳೂರಿನ ವಿಮಾನ ನಿಲ್ದಾಣದ ಅದ್ಭುತ ವಿನ್ಯಾಸ ಕಂಡು ಕಳೆದೇ ಹೋಗಿದ್ದಾರೆ. ಭವಿಷ್ಯದಲ್ಲಿ ಹೆಜ್ಜೆ ಹಾಕಿದಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. ಡಚ್ ಮಹಿಳೆಯ ಈ ವಿಡಿಯೋ ಸದ್ಯ ವೈರಲ್ ಆಗಿದೆ.

Video: ಬೆಂಗಳೂರಿನ ವಿಮಾನ ನಿಲ್ದಾಣದ ಸೌಂದರ್ಯಕ್ಕೆ ಫಿದಾ ಆದ ಡಚ್ ಮಹಿಳೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Dec 07, 2025 | 2:29 PM

Share

ಬೆಂಗಳೂರು, ಡಿಸೆಂಬರ್ 07: ಭಾರತದಲ್ಲಿ ನೆಲೆಸಿರುವ ಡಚ್‌ ಮಹಿಳೆಯೊಬ್ಬರು ಬೆಂಗಳೂರಿನ (Bengaluru) ವಿಮಾನ ನಿಲ್ದಾಣವನ್ನು ಹೊಗಳಿದ್ದಾರೆ. ಇವಾನಾ (Ivana) ಎಂಬ ವಿದೇಶಿ ಮಹಿಳೆ, ವಿಮಾನ ನಿಲ್ದಾಣದ ಸಣ್ಣ ಕ್ಲಿಪ್ ಹಂಚಿಕೊಂಡು ಈ ಸ್ಥಳವು ಅನೇಕ ವಿದೇಶಿಯರು ಭಾರತದ ಬಗ್ಗೆ ಹೊಂದಿರುವ ಸ್ಟೀರಿಯೊಟೈಪ್‌ಗಳಿಂದ ದೂರವಿದೆ ಎಂದಿದ್ದಾರೆ. ಟರ್ಮಿನಲ್‌ನ ಅದ್ಭುತ ದೃಶ್ಯಗಳು, ಹಚ್ಚ ಹಸಿರಿನ ವಿಶಾಲವಾದ ಗಾಳಿಯಾಡುವ ಒಳಾಂಗಣ ಕಂಡು ಖುಷಿ ಪಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಕಾಮೆಂಟ್ ಗಳು ಹರಿದು ಬಂದಿವೆ.

ಇವಾನಾ(ivanaperkovicofficial) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಭಾರತವನ್ನು ಹಿಂದುಳಿದ ದೇಶ ಎಂದು ಕರೆಯುವುದನ್ನು ಕಲ್ಪಿಸಿಕೊಳ್ಳಿ ಆದರೆ ಇದು ಬೆಂಗಳೂರು ವಿಮಾನ ನಿಲ್ದಾಣ ಎಂದು ಕ್ಲಿಪ್‌ನಲ್ಲಿ ಬರೆಯಲಾಗಿದೆ. ಈ ಕ್ಲಿಪ್ ಟರ್ಮಿನಲ್‌ನ ಅದ್ಭುತ ದೃಶ್ಯಗಳು, ಹಚ್ಚ ಹಸಿರಿನ ವಿಶಾಲವಾದ, ಗಾಳಿಯಾಡುವ ಒಳಾಂಗಣಗಳನ್ನು ಒಳಗೊಂಡಿರುವುದನ್ನು ಕಾಣಬಹುದು. ಇದು ಮೊದಲ ಬಾರಿಗೆ ಭೇಟಿ ನೀಡುವವರನ್ನು ಅಚ್ಚರಿಗೊಳಿಸುತ್ತದೆ ಎಂದು ಹೇಳಿದ್ದಾರೆ. ಈ ವಿಮಾನ ನಿಲ್ದಾಣದ ವಿನ್ಯಾಸ ಹಾಗೂ ಹಚ್ಚ ಹಸಿರಿನಿಂದ ಕೂಡಿದ ವಾತಾವರಣವನ್ನು ಆಸ್ವಾದಿಸುತ್ತಾ ವಿದೇಶಿ ಮಹಿಳೆ ನಿಂತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಸ್ಥಳೀಯ ಭಾಷೆ ಕಲಿತರೆ ಜೀವನ ನಡೆಸೋದು ಸುಲಭ, ಕನ್ನಡ ಕಲಿಯಿರಿ ಎಂದ ದೆಹಲಿ ಮಹಿಳೆ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಬೆಂಗಳೂರು ಹಾಗೂ ದೆಹಲಿ ವಿಮಾನ ನಿಲ್ದಾಣಗಳು ಅತ್ಯುತ್ತಮವಾಗಿವೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅದಕ್ಕಾಗಿಯೇ ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ. ಇನ್ನೊಬ್ಬ ಬಳಕೆದಾರ ನಮ್ಮ ಹೆಮ್ಮೆಯ ಕರ್ನಾಟಕ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:28 pm, Sun, 7 December 25