Trending: ಮಹಿಳೆಯ ತಲೆಕೂದಲಿಗೆ ಸಿಲುಕಿಕೊಂಡ ಮರಕುಟಿಗ! ಮುಂದೇನಾಯ್ತು ಗೊತ್ತಾ?

| Updated By: Rakesh Nayak Manchi

Updated on: Jun 07, 2022 | 8:59 AM

 ಅಮೆರಿಕದ ಉತ್ತರ ಕೆರೊಲಿನಾದಲ್ಲಿರುವ ಮನೆಯೊಂದರ ಗಾಜಿಗೆ ಮರಕುಟಿಗ, ಮಹಿಳೆಯ ತಲೆ ಮೇಲೆ ಹಾರಿ ಕೂದಲಿಗೆ ಸಿಲುಕಿದ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

Trending: ಮಹಿಳೆಯ ತಲೆಕೂದಲಿಗೆ ಸಿಲುಕಿಕೊಂಡ ಮರಕುಟಿಗ! ಮುಂದೇನಾಯ್ತು ಗೊತ್ತಾ?
ಮಹಿಳೆಯ ತಲೆ ಕೂದಲಿನಲ್ಲಿ ಸಿಲುಕಿಕೊಂಡ ಮರಕುಟಿಗ
Follow us on

ಮಹಿಳೆಯೊಬ್ಬಳ ತಲೆ ಮೇಲೆ ಹಾರಿದ ಮರಕುಟಿಗ (woodpecker)ವೊಂದು ಕೂದಲಿಗೆ ಸಿಲುಕಿಕೊಂಡ ಘಟನೆಯೊಂದು ನಡೆದಿದೆ. ಅಮೆರಿಕದ ಉತ್ತರ ಕೆರೊಲಿನಾದಲ್ಲಿರುವ ಮನೆಯೊಂದರ ಗಾಜಿಗೆ ಮರಕುಟಿಗ ಅಪ್ಪಳಿಸಿದೆ. ಈ ವೇಳೆ ಅದನ್ನು ನೋಡಲೆಂದು ಮನೆಯಿಂದ ಹೊರಬಂದ ತಿಳಿ ಕಂದು ಬಣ್ಣದ ಕೂದಲನ್ನು ಹೊಂದಿದ್ದ ಬ್ರಿಟಾನಿ ಬ್ರಾನ್ಸನ್ ಅವರ ತಲೆ ಮೇಲೆಯೇ ಮರಕುಟಿಗ ಹಾರಿದೆ. ಪರಿಣಾಮವಾಗಿ ಮರಕುಟಿಗ ಮಹಿಳೆಯ ತಲೆ ಕೂದಲಿಗೆ ಸಿಲುಕಿಕೊಂಡಿತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video viral) ಆಗುತ್ತಿದೆ.

ಇದನ್ನೂ ಓದಿ: Trending: ”ಯಾ.. ನಾನು ಹಾರ್ನ್​ ಹಾಕಿಸಿದೆ” ವಿಡಿಯೋ ವೈರಲ್

ವೈರಲ್ ವಿಡಿಯೋದಲ್ಲಿರುವಂತೆ, ತಲೆಮೇಲೆ ಮರಕುಟಿಗ ಸಿಲಿಕಿಕೊಂಡಾಗ ಅದರ ದಾಳಿಯಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಬ್ರಿಟಾನಿ ಕೈಗಳನ್ನು ಅಡ್ಡ ಹಿಡಿದುಕೊಂಡಿದ್ದಾರೆ. ಜೊತೆಗೆ ಸಹಾಯಕ್ಕಾಗಿ ತನ್ನ ಸಹೋದರ ಕಾಲ್ಟನ್ ಅವರೊಂದಿಗೆ ಮನವಿ ಮಾಡಿದ್ದಾರೆ. ಅದರಂತೆ ಮನೆಯಿಂದ ಹೊರಬಂದ ಕಾಲ್ಟನ್, ಬ್ರಿಟಾನಿಯ ತಲೆ ಕೂದಲಿನಲ್ಲಿ ಸಿಲುಕಿಕೊಂಡಿದ್ದ ಮರಕುಟಿಗವನ್ನು ಬಿಡಿಸಿ ಕೆಳಗೆ ಇಳಿಸಿದ್ದಾನೆ.

ವಿಡಿಯೋ ವೀಕ್ಷಿಸಿ:

ಇದನ್ನೂ ಓದಿ: Trending: ದಿನನಿತ್ಯ ಪವರ್ ಕಟ್, ಸಿಟ್ಟಿಗೆದ್ದ ವ್ಯಕ್ತಿ ಮಸಾಲಾ ರುಬ್ಬಲು ಹೋಗುತ್ತಿರುವುದು ಎಲ್ಲಿ ಗೊತ್ತಾ?

ಮರುದಿನ ಬೆಳಗ್ಗೆ ಮರಕುಟಿಗವನ್ನು ಬೆಕ್ಕಿನ ವಾಹಕದಲ್ಲಿ ಹಾಕಿ ಹಾಲಿಸ್ ನೆಸ್ಟ್ ಅನಿಮಲ್ ರೆಸ್ಕ್ಯೂಗೆ ಕೊಂಡೊಯ್ಯಲಾಯಿತು. ಅಲ್ಲಿ ಆರೈಕೆಗಾಗಿ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಸದ್ಯ ಇದರ ವಿಡಿಯೋ ಟಿಕ್​ಟಾಕ್​ನಲ್ಲಿ ವೈರಲ್ ಆಗಿದ್ದು, ವೀಕ್ಷಕರು ಪಕ್ಷಿಯನ್ನು ‘ವುಡಿ ದಿ ವುಡ್‌ಪೆಕರ್’ ಕಾರ್ಟೂನ್‌ಗೆ ಹೋಲಿಸಿದ್ದಾರೆ. ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ‘ನೌದಿಸ್ ಎಂಟರ್‌ಟೈನ್‌ಮೆಂಟ್’ ಹಂಚಿಕೊಂಡಿದ್ದು, 215k ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 am, Tue, 7 June 22