
ನಮ್ಮಲ್ಲಿ ಕೆಲವರಿಗೆ ಈ ಪ್ರಾಣಿ (Animal), ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವುಗಳ ಹತ್ತಿರ ಕಾಣಿಸಿದರೆ ಅವುಗಳಿಗೆ ಆಹಾರ ಹಾಕುವುದು, ನೀರು ಕುಡಿಯಲು ಇಡುವುದು ಹೀಗೆ ಅವುಗಳ ಹಸಿವು ನೀಗಿಸುವಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಈ ವಿಡಿಯೋ ಯುವಕನ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಯುವಕನೊಬ್ಬನು (young man) ರಸ್ತೆ ಬದಿಯಲ್ಲಿ ನೀರು ಇಟ್ಟು ಹಾಗೂ ಪಕ್ಷಿಗಳಿಗೆ ಕಾಳು ಹಾಕಿ ಅವುಗಳ ಹಸಿವು ನೀಗಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಯುವಕನ ನಿಸ್ವಾರ್ಥ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕ್ಷಯ್ ಸಾಗ್ವೆಕರ್ (Akshay sagvekar) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಯುವಕನೊಬ್ಬ ಪಕ್ಷಿಗಳ ಹಸಿವು ನೀಗಿಸುವುದನ್ನು ಕಾಣಬಹುದು. ರಸ್ತೆ ಬದಿಯಲ್ಲಿದ್ದ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಿ, ನೀರು ತುಂಬಿಸಿದ್ದಾನೆ. ಆ ಬಳಿಕ ಕಾಳುಗಳನ್ನು ಹಾಕುತ್ತಿದ್ದಂತೆ ಪಾರಿವಾಳಗಳು ಹಾರಿ ಕೊಂಡು ಬಂದು ಕಾಳು ಹೆಕ್ಕಿ ತಿನ್ನುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ:ಅಜ್ಜಿಯ ಸಣ್ಣ ವ್ಯಾಪಾರಕ್ಕೆ ನೆರವಾಗಿ ಮೊಗದಲ್ಲಿ ನಗು ಮೂಡಿಸಿದ ಯುವಕ
ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತುಂಬಾ ಒಳ್ಳೆಯ ಕೆಲಸ, ಧನ್ಯವಾದಗಳು ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡಲು ಖುಷಿಯಾಗುತ್ತದೆ, ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಅವುಗಳ ಹಸಿವು ನೀಗಿಸುವ ಕೆಲಸ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Tue, 9 December 25