Accent Roulette : ಕನ್ನಡವನ್ನು ಇಂಗ್ಲಿಷ್ನಂತೆ, ಇಂಗ್ಲಿಷ್ (English) ಅನ್ನು ಕನ್ನಡದಂತೆ ಮಾತನಾಡುವವರು ನಮ್ಮ ಮಧ್ಯೆ ಅನೇಕರಿದ್ದಾರೆ. ಮಾತೃಭಾಷೆಗೆ ಇರುವ ಲಯ, ಉಚ್ಚಾರದ ಪ್ರಭಾವ ಇನ್ನೊಂದು ಭಾಷೆಯನ್ನು ಮಾತನಾಡುವಾಗಲೂ ಸಹಜವಾಗಿ ಆಗುತ್ತದೆ. ಆಗ ಅದನ್ನು ಕೇಳಲು ಮಜಾ ಎನ್ನಿಸುವುದುಂಟು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಕಲಾವಿದರಾದ ಸಾಯಿ ಗೋಡ್ಬೋಲೆ ಮತ್ತು ಅಹಿಲ್ಯಾ ಬೆಂಗಾಲಿಯನ್ನು ಫ್ರೆಂಚ್ ಶೈಲಿಯಲ್ಲಿ, ಮರಾಠಿಯನ್ನು ಐರಿಶ್ ಶೈಲಿಯಲ್ಲಿ, ಹಿಂದಿಯನ್ನು ಬ್ರಿಟಿಷ್ ಶೈಲಿಯಲ್ಲಿ, ಫ್ರೆಂಚ್ ಅನ್ನು ಭಾರತೀಯ ಶೈಲಿಯಲ್ಲಿ ಮಾತನಾಡಿದ್ದಾರೆ.
ಈ ವಿಡಿಯೋ ಅನ್ನು 2.6 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ. ಮಿಲಿಯನ್ಗಟ್ಟಲೆ ಜನರು ಇದನ್ನು ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಹಿಂದಿಯನ್ನು ಬ್ರಿಟಿಷ್ ಶೈಲಿಯಲ್ಲಿ ಉಚ್ಚರಿಸಿದ್ದು ಸೌತ್ ಬಾಂಬೆಯ ಲಾವಣ್ಯರನ್ನು (Tiktok) ನೆನಪಿಸಿದೆ ಎಂದಿದ್ದಾರೆ ಒಬ್ಬರು. ಈ ಪ್ರತಿಕ್ರಿಯಿಗೆ 4,700 ಜನರು ಲೈಕ್ ಒತ್ತಿದ್ದಾರೆ.
ಇದನ್ನೂ ಓದಿ : Viral: ತಲೆಯ ಮೇಲೆ ಕೂರಿಸಿಕೊಳ್ಳೋದು ಎಂದರೆ ಇದೇ!?
ನೀವಿಬ್ಬರೂ ತುಂಬಾ ಪ್ರತಿಭಾವಂತರು ಎಂದಿದ್ದಾರೆ ಅನೇಕರು. ಬೆಂಗಾಲಿಯನ್ನು ಫ್ರೆಂಚ್ ಶೈಲಿಯಲ್ಲಿ ಕೇಳಿ ನನ್ನೊಳಗಿಂದ ಏನೋ ಜಾಗೃತವಾದಂತೆ ಆಗುತ್ತಿದೆ ಎಂದಿದ್ದರೆ ಒಬ್ಬರು. ನಮ್ಮಂಥ ಸರಳ ಮೆದುಳಿಗರಿಗೆ ಇದು ಬಹಳ ಸಂಕೀರ್ಣವೆನ್ನಿಸುವಂತಿದೆ, ನಿಜಕ್ಕೂ ಈ ರೀಲ್ ಬಹಳ ಚೆನ್ನಾಗಿದೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral: ಶಿವಾಜಿನಗರದ ಡಂಪ್ಯಾರ್ಡ್ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?
ನೆಕ್ಸ್ಟ್ ಲೆವಲ್ ಟ್ಯಾಲೆಂಟ್ ಎಂದರೆ ಇದೇ! ನಿಮ್ಮಿಬ್ಬರ ಬಗ್ಗೆ ಬಹಳ ಅಚ್ಚರಿ ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು. ಬೆಂಗಾಲಿಯನ್ನು ಫ್ರೆಂಚ್ ಶೈಲಿಯಲ್ಲಿ ಮಾತನಾಡಿದ್ದು ಮಾತ್ರ ಅದ್ಭುತವಾಗಿದೆ ಎಂದಿದ್ದಾರೆ ಮಗದೊಬ್ಬರು. ಅಬ್ಬಾ ದೆವ್ವಗಳು ಇಷ್ಟು ಸಿಹಿಯಾಗಿ ಮಾತನಾಡುತ್ತವೆಯೇ! ಲವ್ ಯೂ ಗರ್ಲ್ಸ್ ಎಂದಿದ್ದಾರೆ ಇನ್ನೂ ಒಬ್ಬರು. ಪ್ರತಿಭೆ ಮತ್ತು ಬುದ್ಧಿವಂತಿಕೆಯಿಂದ ಕೂಡಿದ ವಿಡಿಯೋ. ಇಂಥ ವಿಡಿಯೋ ಈತನಕ ನೋಡಿರಲಿಲ್ಲ ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:24 pm, Tue, 25 July 23