Rare Walking Fish: 22 ವರ್ಷಗಳ ಬಳಿಕ ಅಪರೂಪದ ನಡೆದಾಡುವ ಮೀನು ಪತ್ತೆ: ಪಿಂಕ್​ ಹ್ಯಾಂಡ್​ ಫಿಶ್​ ಕಂಡು ಸಂತಸಗೊಂಡ ಸಂಶೋಧಕ

| Updated By: Pavitra Bhat Jigalemane

Updated on: Dec 25, 2021 | 10:16 AM

ಟಾಸ್ಮೇನಿಯನ್ ಕರಾವಳಿಯ ಬಳಿ 22 ವರ್ಷಗಳ ಬಳಿಕ ಅಪರೂಪದ ನಡೆದಾಡುವ ಮೀನು ಪತ್ತೆಯಾಗಿದೆ. ಆಸ್ಟ್ರೇಲಿಯಾದ ಕಾಮನ್​ವೆಲ್ತ್​ ಸೈಂಟಿಪಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ ಆರ್ಗನೈಸೇಶನ್​​ನ ಸಂಶೋಧಕರ ತಂಡ ಈ ಮೀನನ್ನು ಪತ್ತೆ ಮಾಡಿದೆ.

Rare Walking Fish: 22 ವರ್ಷಗಳ ಬಳಿಕ ಅಪರೂಪದ ನಡೆದಾಡುವ ಮೀನು ಪತ್ತೆ: ಪಿಂಕ್​ ಹ್ಯಾಂಡ್​ ಫಿಶ್​ ಕಂಡು ಸಂತಸಗೊಂಡ ಸಂಶೋಧಕ
ಅಪರೂಪದ ನಡೆದಾಡುವ ಮೀನು
Follow us on

ಆಸ್ಟ್ರೇಲಿಯಾ: ಟಾಸ್ಮೇನಿಯನ್ ಕರಾವಳಿಯ ಬಳಿ 22 ವರ್ಷಗಳ ಬಳಿಕ ಅಪರೂಪದ ನಡೆದಾಡುವ ಮೀನು ಪತ್ತೆಯಾಗಿದೆ. ಆಸ್ಟ್ರೇಲಿಯಾದ ಕಾಮನ್​ವೆಲ್ತ್​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ ಆರ್ಗನೈಸೇಶನ್​​ನ ಸಂಶೋಧಕರ ತಂಡ ಈ ಮೀನನ್ನು ಪತ್ತೆ ಮಾಡಿದೆ. 1999ರಲ್ಲಿ ಈ ಗುಲಾಬಿ ಹ್ಯಾಂಡ್​ ಫಿಶ್​ ಕಂಡುಬಂದಿದ್ದು, ಅದರ ಬಳಿಕ ಇದೀಗ ಕಾಣಿಸಿಕೊಂಡಿದೆ. ಪುಟ್ಟ ಕೈಗಳ ಮೂಲಕ ಸಮುದ್ರದಲ್ಲಿ ನಡೆದಾಡುವ ಈ ಮೀನು ತಿಳಿ ಗುಲಾಬಿ ಬಣ್ಣದಲ್ಲಿ ಇರುತ್ತದೆ. ಆಂಗ್ಲರ್​ ಫಿಶ್​ ಎನ್ನುವ ಕುಟುಂಬಕ್ಕೆ ಈ ಗುಲಾಬಿ ಹ್ಯಾಂಡ್​ ಫಿಶ್​ ಸೇರಿದೆ. ಅಷ್ಟಾಗಿ ಕಣ್ಣಿಗೆ ಈ ಮೀನುಗಳು ಕಾಣಿಸಿಕೊಳ್ಳದ ಕಾರಣದ ಅಳಿವಿನಂಚಿನಲ್ಲಿರುವ ಜೀವಿ ಎಂದು ಸಂಶೋಧಕರು ಹೇಳಿದ್ದಾರೆ. 

ಫೆಬ್ರುವರಿಯಲ್ಲಿ ಸಂಶೋಧಕರ ತಂಡ ಟಾಸೈನ್​ ಸಮುದ್ರದ ಒಳಗೆ ಕ್ಯಾಮಾರಾವನ್ನು ಇಳಿಸಿದ್ದರು. 4 ಸಾವಿರ ಮೀಟರ್​ ಅಡಿಯವರೆಗೆ ಕ್ಯಾಮರಾವನ್ನು ಇಳಿಬಿಟ್ಟಿದ್ದರು . ಒಂದು ವರ್ಷದ ನಂತರ ಕ್ಯಾಮರಾವನ್ನು ಹೊರತೆಗೆದು ದೃಶ್ಯಗಳನ್ನು ಪರೀಕ್ಷಿಸಿದಾಗ ಗುಲಾಬಿ ಹ್ಯಾಂಡ್​ ಫಿಶ್​ ನೋಡಿ ಸಂತಸಗೊಂಡಿದ್ದಾರೆ.  ಈ ಮೊದಲು ಗುಲಾಬಿ ಹ್ಯಾಂಡ್​ ಫಿಶ್ ಸಮುದ್ರದ ಆಳದಲ್ಲಿ ಕಂಡುಬರುತ್ತದೆ ಎನ್ನಲಾಗಿತ್ತು. ಆದರೆ ಈ ಬಾರಿ ಕೇವಲ 150 ಅಡಿ ಆಳದಲ್ಲಿ ಕಂಡುಬಂದಿದೆ.

ಸಮುದ್ರದ ತಳದಲ್ಲಿ ನಡೆದಾಡಲು ಪುಟ್ಟ ಕೈಗಳನ್ನು ಹೊಂದಿರುವ ಈ ಮೀನು, ತಿಳಿ ಗುಲಾಬಿ ಬಣ್ಣದಲ್ಲಿದ್ದು ನೋಡಲೂ ಆಕರ್ಷಕವಾಗಿದೆ. ಸದ್ಯ ಸಂಶೋಧಕರ ತಂಡ ಗುಲಾಬಿ ಹ್ಯಾಂಡ್​ ಫಿಶ್ ಕಾಣಿಸಿಕೊಂಡ 35 ಸೆಕೆಂಡುಗಳ ವೀಡಿಯೋವನ್ನು ಅಧಿಕೃತ್ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Published On - 10:11 am, Sat, 25 December 21