Viral Video: ಬೆಂಕಿ ಮೇಲೆ ಪಾತ್ರೆಯಿಟ್ಟು ಅದರೊಳಗೇ ಕುಳಿತು ಸ್ನಾನ ಮಾಡಿದ ಬಾಲಕ
ಸಾಮಾಜಿಕ ಜಾಲತಾಣ ಕೂನಲ್ಲಿ ಬಾಲಕನೋರ್ವ ಮೈಕೊರೆಯುವ ಚಳಿಯಲ್ಲಿ ಬಿಸಿನೀರಿನ ಸ್ನಾನಕ್ಕೆ ಮಾಡಿಕೊಂಡ ಪ್ಲಾನ್ ಸಖತ್ ವೈರಲ್ ಆಗಿದೆ.
ಭಾರತದಲ್ಲೀಗ ಮೈಕೊರೆಯವ ಚಳಿ ಆರಂಭವಾಗಿದೆ. ಹೀಗಾಗಿ ಜನ ಬೆಚ್ಚಗಿರಿಸಿಕೊಳ್ಳಲು ಹಲವು ವಿಧಾನಗಳನ್ನು ಹುಡುಕುತ್ತಿದ್ದಾರೆ. ಬೆಚ್ಚನೆಯ ಉಡುಪುಗಳನ್ನು ಧರಿಸುವುದು ಒಂದೆಡೆಯಾದರೆ, ಬಿಸಿ ಬಿಸಿ ತಿನಿಸುಗಳನ್ನು ಇಷ್ಟಪಡುವವರು ಇನ್ನೊಂದೆಡೆ. ಚಳಿಗಾಲದಲ್ಲಿ ಹಿಂಸೆಯ ಕೆಲವೆಂದರೆ ತಣ್ಣನೆಯ ನೀರಿನ ಸ್ನಾನ. ಹೀಗಾಗಿ ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನವನ್ನು ಎಲ್ಲರೂ ಇಷ್ಟಪಡುತ್ತಾರೆ. ಬಿಸಿ ನೀರನ್ನು ಪಡೆಯಲು ವಿಭಿನ್ನ ರೀತಿಯ ಐಡಿಯಾಗಳನ್ನು ಹುಡುಕುತ್ತಾರೆ. ಸಾಮಾಜಿಕ ಜಾಲತಾಣ ಕೂನಲ್ಲಿ ಬಾಲಕನೋರ್ವ ಮೈಕೊರೆಯುವ ಚಳಿಯಲ್ಲಿ ಬಿಸಿನೀರಿನ ಸ್ನಾನಕ್ಕೆ ಮಾಡಿಕೊಂಡ ಪ್ಲಾನ್ ಸಖತ್ ವೈರಲ್ ಆಗಿದೆ. ಜೆಸ್ಸಾನಿ ಎನ್ನುವ ಕೂ ಬಳಕೆದಾರರೊಬ್ಬರು ಇದು ಯಾವ ರೀತಿಯ ಲೆಕ್ಕಾಚಾರ ಎನ್ನುವ ಕ್ಯಾಪ್ಷನ್ ನೀಡಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಬಾಲಕನೋರ್ವ ಉರಿಯುವ ಬೆಂಕಿಯ ಮಧ್ಯೆ ಕಡಾಯಿ ಪಾತ್ರೆಯನ್ನು ಇರಿಸಿ, ಅದರೊಳಗೆ ನೀರು ಹಾಕುತ್ತಾನೆ. ನಂತರ ನೀರು ಬಿಸಿಯಾಗುತ್ತಿದ್ದಂತೆ ಆ ಕಡಾಯಿ ಪಾತ್ರೆಯೊಳಗೆ ಆತ ಕುಳಿತುಕೊಳ್ಳುತ್ತಾನೆ.ಅದೇ ಪಾತ್ರೆಯಲ್ಲಿ ಕುಳಿತು ಅದರಲ್ಲಿನ ನೀರನ್ನು ಜಗ್ ಮೂಲಕ ಮೈಮೇಲೆ ಹಾಕಿಕೊಳ್ಳುತ್ತಾನೆ. ಆತ ಹಾಕಿಕೊಂಡ ನೀರು ಮತ್ತೆ ಅದೇ ಪಾತ್ರೆಗೆ ಬೀಳುತ್ತದೆ. ಕೆಳಗಡೆ ದೊಡ್ಡದಾಗಿ ಬೆಂಕಿ ಉರಿಯುತ್ತಿರುತ್ತದೆ. ಬಿಸಿ ನೀರು ಹಾಗೂ ಆತ ಮೈಮೇಲೆ ಸುರಿದುಕೊಂಡ ನೀರಿನಿಂದ ಹೊಗೆ ಏಳುತ್ತದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಕೆಲವರು ನೀರನ್ನು ಉಳಿಸುವ ಸರಳ ವಿಧಾನ ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾಕ್ಕೆ ಒಳ್ಳೆಯ ಐಡಿಯಾ ಎಂದಿದ್ದಾರೆ. ಇನ್ನೂ ಕೆಲವರು ಬಾಲಕನ ಐಡಿಯಾವನ್ನು ಹೊಗಳಿದ್ದರೂ ಈ ರೀತಿಯ ಅಪಾಯಕಾರಿ ಪ್ರಯೋಗ ಒಳ್ಳೆಯದಲ್ಲ. ಪಾತ್ರೆಯ ಬಿಸಿ ಹೆಚ್ಚಾಗಿ ಕಾಲು ಸುಟ್ಟು ಗುಳೆಗಳು ಏಳಬಹದು ಎಂದಿದ್ದಾರೆ. ಒಟ್ಟಿನಲ್ಲಿ ಮೈಕೊರೆಯುವ ಚಳಿಗೆ ಬಾಲಕನ ಐಡಿಯಾ ಕಂಡು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಇದನ್ನೂ ಓದಿ: