ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿದ್ದ ಆನಿಮೇಟೆಡ್ (Animated) ಕ್ಯಾರೆಕ್ಟರ್ ಮಿನ್ನಿ ಮೌಸ್ (Minnie Mouse) ನ ಉಡುಪು ಬದಲಾಗಿದೆ. ಇದೇ ಮೊದಲ ಬಾರಿಗೆ ಆನಿಮೇಟೆಡ್ ಕ್ಯಾರೆಕ್ಟರ್ನ ಬಟ್ಟೆಯ ಬಣ್ಣವನ್ನು ಬದಲಾಯಿಸಲಾಗಿದೆ. ವಾಲ್ಟ್ ಡಿಸ್ನಿ (Walt Disney) ಹುಟ್ಟುಹಾಕಿದ್ದ ಆನಿಮೇಟೆಡ್ ಚಲನಚಿತ್ರಗಳು ಜಗತ್ತಿನಾದ್ಯಂತ ಖ್ಯಾತಿ ಗಳಿಸಿತ್ತು. ಮಿಕ್ಕಿ ಮೌಸ್(Mickey Mouse) ನ ಗೆಳತಿಯಾಗಿ ಸೃಷ್ಟಿಸಲಾಗಿದ್ದ ಆನಿಮೇಟೆಡ್ ಕ್ಯಾರೆಕ್ಟರ್ ಮಿನ್ನಿ ಮೌಸ್ಗೆ ಕೆಂಪು ಬಣ್ಣದ ಸ್ಕರ್ಟ್ ಮೇಲೆ ಬಿಳಿಯ ಬಣ್ಣದ ಚಿತ್ರವಿರುವ ಡ್ರೆಸ್ ಅನ್ನು ಚಿತ್ರಿಸಲಾಗಿತ್ತು. ಇದಿಗ ಸ್ಕರ್ಟ್ ಬದಲು ನೀಲಿ ಬಣ್ಣದ ಪ್ಯಾಂಟ್ ಧರಿಸಿ ಹೊಸ ರೂಪದಲ್ಲಿ ತೋರಿಸಲಾಗುತ್ತಿದೆ.
Stella McCartney has designed Minnie Mouse’s very first pantsuit, and it’s gorgeous ? #DisneylandParis30 pic.twitter.com/jKSckBji36
— Disneyland Paris EN (@DisneyParis_EN) January 25, 2022
ಮಿನ್ನಿ ಮೌಸ್ನ ಹೊಸ ಉಡುಗೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಿಸ್ನಿಲ್ಯಾಂಡ್ನ ಪಾರಿಸ್ ಥೀಮ್ ಪಾರ್ಕ್ನ 30ನೇ ವರ್ಷದ ವಾರ್ಷಿಕೋತ್ಸವಕ್ಕಾಗಿ ಮಿನ್ನಿ ಮೌಸ್ನ ಉಡುಗೆಯನ್ನು ಬದಲಿಸಾಗಿದೆ. ಈ ಉಡುಗೆಯನ್ನು ಸ್ಟೆಲ್ಲಾ ಮೆಕ್ಕರ್ಟ್ನಿ ಎನ್ನುವವರು ವಿನ್ಯಾಸಗೊಳಿಸಿದ್ದಾರೆ. ಇದೇ ಮೊದಲ ಬಾರಿಗೆ ಮಿನ್ನಿ ಮೌಸ್ ಪ್ಯಾಂಟ್ ಸೂಟ್ ಧರಿಸಿ ಬಂದಿರುವುದನ್ನು ಕಂಡು ಕಾರ್ಟೂನ್ ಪ್ರಿಯರು ಸಖತ್ ಖುಷಿಗೊಂಡಿದ್ದಾರೆ. ಬ್ರಿಟಿಷ್ ಡಿಸೈನರ್ ಸ್ಟೆಲ್ಲಾ ಮೆಕ್ಕರ್ಟ್ನಿ ಅವರು ಈ ಉಡುಗೆಯನ್ನು ನೀಲಿ ಬಣ್ಣ ಹೆಣ್ಣಿನ ಧೈರ್ಯವನ್ನು ತೋರಿಸುತ್ತದೆ. ಮಿನ್ನಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿರುತ್ತಾಳೆ. ಮಿನ್ನಿಯ ವ್ಯಕ್ತಿತ್ವ ಸದಾ ಆಕರ್ಷಿಸುತ್ತದೆ ಎಂದು ಹೇಳಿದ್ದಾರೆ.
ಸ್ಟೆಲ್ಲಾ ಮೆಕ್ಕರ್ಟ್ನಿ ಮುಂದುವರೆದು ಮಾತನಾಡಿ 2022ರ ಮಾರ್ಚ್ನಲ್ಲಿ ಮಿನ್ನಿಯ ಹೊಸ ಲುಕ್ ಅನಾವರಣಗೊಳ್ಳಲಿದೆ. ಕಪ್ಪು ಡಾಟ್ಗಳ ಮಿನ್ನಿಯ ಹೊಸ ಲುಕ್ ಹೊಸ ಜನರೇಷನ್ನಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂದಿದ್ದಾರೆ. ಮಿನ್ನಿಯ ಹೊಸ ಲುಕ್ಗೆ ಸಾಮಾಜಿಕ ಜಾಲತಾಣದಲ್ಲಿ ಪರವಿರೋಧ ಚರ್ಚೆಯಾಗುತ್ತಿದೆ. 30 ವರ್ಷಗಳಿಂದ ಒಂದೆ ರೀತಿಯಲ್ಲಿ ಮಿನ್ನಿಯನ್ನು ನೋಡಿದ ಮೇಲೆ ಬೇರೆ ರೀತಿಯಲ್ಲಿ ನೋಡುವುದು ಕಷ್ಟ ಎಂದಿದ್ದಾರೆ.
ವಾಲ್ಟ್ ಡಿಸ್ನಿ ಕಂಪನಿ ಸೃಷ್ಟಿಸಿದ ಮಿನ್ನಿ ಮೌಸ್ ಕಾರ್ಟೂನ್ ಕ್ಯಾರೆಕ್ಟರ್ ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿದೆ. ಮಿಕ್ಕಿ ಮೌಸ್ನ ದೀರ್ಘಕಾಲದ ಗೆಳತಿಯಾಗಿ ಮಿನ್ನು ಮೌಸ್ಅನ್ನು ತೋರಿಸಿದ್ದಾರೆ. ಇದೀಗ ಮಿನ್ನಿ ಕೆಂಪು ಬಣ್ಣದ ಉಡುಗೆಯನ್ನು ಬದಲಿಸಿ ನೀಲಿ ಬಣ್ಣದ ಪ್ಯಾಂಟ್ ಧರಿಸಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಮಿನ್ನಿ ಮೌಸ್ ಅನ್ನು 1928ರಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು.
ಇದನ್ನೂ ಓದಿ:
Viral Video; ಹೈವೇನಲ್ಲಿ ಬಿದ್ದ ಬೈಕ್ ಸವಾರ; ಕೂದಲೆಳೆ ಅಂತರದಿಂದ ಪಾರು