14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಬರಿಗೈಲಿ ಹಿಡಿದ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ

Viral Video: ಥಾಯ್ಲಂಡ್​ನ ವ್ಯಕ್ತಿಯೋರ್ವ ಬರಿಗೈಲಿ ದೊಡ್ಡ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತ ಮಾಹಿತಿ ಹಾಗೂ ವಿಡಿಯೋ ಇಲ್ಲಿದೆ.

14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಬರಿಗೈಲಿ ಹಿಡಿದ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on: Jan 29, 2022 | 1:58 PM

ಸಾಮಾಜಿಕ ಜಾಲತಾಣದಲ್ಲಿ (Social Media) ಹಲವು ರೀತಿಯ ವಿಡಿಯೋಗಳು ವೈರಲ್ (Viral) ಆಗುತ್ತಿರುತ್ತವೆ. ಅದರಲ್ಲೂ ಜನರು ಸಾಹಸಮಯ ತುಣುಕುಗಳನ್ನು ಹೆಚ್ಛಾಗಿ ಇಷ್ಟಪಡುತ್ತಾರೆ. ಮೈ ಝುಂ ಎನ್ನಿಸುವ ಸಾಹಸಗಳನ್ನು ಬಿತ್ತರಿಸುವ ಬಹಳಷ್ಟು ಖಾತೆಗಳೇ ಸೋಷಿಯಲ್ ಮೀಡಿಯಾಗಳಲ್ಲಿವೆ. ಇವುಗಳಿಗೆ ದೊಡ್ಡ ಮಟ್ಟದ ವೀಕ್ಷಕ ವರ್ಗವೂ ಇದೆ. ಇಂತಹ ವಿಡಿಯೋಗಳಲ್ಲಿ ಸಾಮಾನ್ಯ ಜನರು ಹತ್ತಿರವೂ ಸುಳಿಯದ ಪ್ರಾಣಿಗಳ ಒಡನಾಟ ಮಾಡುತ್ತಿರುವ ಸಾಹಸಿಗರ ವಿಡಿಯೋಗಳೂ ಸೇರಿವೆ. ಇದೇ ಮಾದರಿಯಲ್ಲಿನ ವಿಡಿಯೋವೊಂದು ಸದ್ಯ ನೆಟ್ಟಿಗರನ್ನು ದಂಗಾಗಿಸಿದೆ. ಯುವಕನೋರ್ವ ಕಾಳಿಂಗ ಸರ್ಪವೊಂದನ್ನು (King Cobra) ಬರಿಗೈಲಿ ಹಿಡಿದಿದ್ದಾನೆ. ಕಾಡಿನಿಂದ ನಾಡಿನೆಡೆಗೆ ಸಾಗಿ ಬಂದ ಕಾಳಿಂಗ ಸರ್ಪವನ್ನು ಆತ ರಕ್ಷಿಸಿದ ವಿಡಿಯೋ ಸದ್ಯ ವೈರಲ್ ಆಗಿದ್ದು, ಆತನ ಧೈರ್ಯಕ್ಕೆ ಜನರು ತಲೆದೂಗಿದ್ದಾರೆ.

ವಿಡಿಯೋದಲ್ಲೇನಿದೆ?

ವಿಡಿಯೋ ಥಾಯ್ಲೆಂಡ್​ನದ್ದು ಎನ್ನಲಾಗಿದ್ದು, ಈ ಕುರಿತು ಸುದ್ದಿ ವೆಬ್​ಸೈಟ್ ಆದ ಥೈಗರ್ ವರದಿ ಮಾಡಿದೆ. ದಕ್ಷಿಣ ಥಾಯ್ ಪ್ರಾಂತ್ಯದ ಕ್ರಾಬಿಯಲ್ಲಿ ಕಾಳಿಂಗ ಸರ್ಪವೊಂದು ತಾಳೆ ತೋಟಕ್ಕೆ ನುಗ್ಗಿತ್ತು. ಅಲ್ಲದೇ ಟ್ಯಾಂಕ್‌ ಒಂದರಲ್ಲಿ ಅಡಗಿಕೊಳ್ಳಲು ಪ್ರಯತ್ನಿಸುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಆ ದೈತ್ಯ ಹಾವು 4.5 ಮೀಟರ್ (ಸುಮಾರು 14 ಅಡಿ) ಉದ್ದವಿತ್ತು. ಹಾಗೆಯೇ 10 ಕೆಜಿಗಿಂತಲೂ ಅಧಿಕ ತೂಕ ಹೊಂದಿತ್ತು ಎಂದು ವರದಿಯಾಗಿದೆ. ಆ ಪ್ರದೇಶದ ಆಡಳಿತ ಸಂಸ್ಥೆಯ ಸ್ವಯಂಸೇವಕರಾದ ಸುಟಿ ನೈವಾಡ್ (Sutee Naewhaad) ಹಾವಿನ ರಕ್ಷಣೆಗೆ ಮುಂದಾದರು. ಸುಮಾರು 20 ನಿಮಿಷಗಳ ಪ್ರಯತ್ನದ ನಂತರ ತಮ್ಮ ಪ್ರಯತ್ನದಲ್ಲಿ ಅವರು ಯಶಸ್ವಿಯಾದರು. ಮೊದಲಿಗೆ ಹಾವನ್ನು ರಸ್ತೆಗೆ ಕರೆತಂದ ಅವರು, ನಂತರ ಅದನ್ನು ಹಿಡಿದರು.

ಹಾವು ಹಿಡಿಯುವ ಈ ಘಟನೆ ವಿಡಿಯೋದಲ್ಲಿ ದಾಖಲಾಗಿದ್ದು, ಫೇಸ್​ಬುಕ್​​ನಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋ ಇಲ್ಲಿದೆ:

ಸ್ಥಳೀಯ ವರದಿಗಳ ಪ್ರಕಾರ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಇತ್ತೀಚೆಗಷ್ಟೇ ಸ್ಥಳೀಯರು ಈ ಹಾವಿನ ಸಂಗಾತಿಯನ್ನು ಕೊಂದಿದ್ದರು. ಅದನ್ನು ಹುಡುಕುತ್ತಾ ಈ ಹಾವು ಬಂದಿತ್ತು. ಅಲ್ಲದೇ ಉರಗ ತಜ್ಞ ನೈವಾಡ್ ಅವರು ಈ ರೀತಿ ಹಾವು ಹಿಡಿಯದಂತೆ ಇತರರಿಗೆ ಎಚ್ಚರಿಕೆ ನೀಡಿದ್ದಾಗಿ ವರದಿಗಳಲ್ಲಿ ತಿಳಿಸಲಾಗಿದೆ. ಥೈಲ್ಯಾಂಡ್​ನಲ್ಲಿ ಕಾಳಿಂಗ ಸರ್ಪಗಳ ಸಂಖ್ಯೆ ಜಾಸ್ತಿ ಇದೆ. ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ಭಾಗಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ.

ಇದನ್ನೂ ಓದಿ:

Viral video; ಮನೆಯ ಗೋಡೆ ಹತ್ತಿದ ಹೆಬ್ಬಾವು; ಬದುಕಿದೆಯಾ ಬಡಜೀವವೇ ಎಂದುಕೊಂಡ ಬೆಕ್ಕು

ಭಾರಿ ಗಾತ್ರದ ಹೆಬ್ಬಾವು ಹೆದರಿಕೆ ಹುಟ್ಟಿಸದು ಆದರೆ 11 ಅಡಿ ಉದ್ದದ ಕಾಳಿಂಗ ಸರ್ಪ ಖಂಡಿತ ಮೈಯಲ್ಲಿ ನಡುಕ ಹುಟ್ಟಿಸುತ್ತದೆ!

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು