ಭಾರಿ ಗಾತ್ರದ ಹೆಬ್ಬಾವು ಹೆದರಿಕೆ ಹುಟ್ಟಿಸದು ಆದರೆ 11 ಅಡಿ ಉದ್ದದ ಕಾಳಿಂಗ ಸರ್ಪ ಖಂಡಿತ ಮೈಯಲ್ಲಿ ನಡುಕ ಹುಟ್ಟಿಸುತ್ತದೆ!
ಹಾವನ್ನು ನೋಡಿದ ಜನರಿಗೆ ಅದು ಕಾಳಿಂಗ ಸರ್ಪ ಅನ್ನೋದು ಗೊತ್ತಾಗಿದೆ. ಹೆಬ್ಬಾವು ಆಗಿದ್ದರೆ ಅವರು ಹೆದರುತ್ತಿರಲಿಲ್ಲವೇನೋ. ನಾಗರಗಹಾವು, ಕಾಳಿಂಗ ಸರ್ಪಗಳಿಗೆ ಹೋಲಿಸಿದರೆ ಹೆಬ್ಬಾವು ಕಡಿಮೆ ಅಪಾಯಕಾರಿ. ಅಷ್ಟ್ಯಾಕೆ, ಹೆಬ್ಬಾವಿನಲ್ಲಿ ವಿಷದ ಅಂಶವೇ ಇರೋದಿಲ್ಲ.
ಈ ಹಾವಿನ ಗಾತ್ರ ಹೆದರಿಕೆ ಹುಟ್ಟಿಸುತ್ತದೆ ಅಂತ ಹೇಳುವುದು ಅಂಡರ್ ಸ್ಟೇಟ್ಮೆಂಟ್ ಮಾರಾಯ್ರೇ. ಈ ಗಾತ್ರದ ಹೆಬ್ಬಾವು ಆದರೆ ಓಕೆ, ಆದರೆ ಇದು ಕಾಳಿಂಗ ಸರ್ಪ. ಹಾವುಗಳಲ್ಲಿ ಇದನ್ನು ಅತ್ಯಂತ ಅಪಾಯಕಾರಿ ಅಂತ ಪರಿಗಣಿಸಲಾಗುತ್ತದೆ. ಹನ್ನೊಂದು ಅಡಿಯ ಕಾಳಿಂಗ ಸರ್ಪ!! ಭಯವಾಗುತ್ತೆ ತಾನೆ? ಇದು ಕಾಣಿಸಿಕೊಂಡಿದ್ದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿರುವ ಕುಂಬರಡಿ ಗ್ರಾಮದಲ್ಲಿ. ಗ್ರಾಮದ ನಿವಾಸಿ ನಿಂಗಪ್ಪ ಎನ್ನುವವ ಕಾಫಿ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಹಾವನ್ನು ನೋಡಿದ ಜನರಿಗೆ ಅದು ಕಾಳಿಂಗ ಸರ್ಪ ಅನ್ನೋದು ಗೊತ್ತಾಗಿದೆ. ಹೆಬ್ಬಾವು ಆಗಿದ್ದರೆ ಅವರು ಹೆದರುತ್ತಿರಲಿಲ್ಲವೇನೋ. ನಾಗರಗಹಾವು, ಕಾಳಿಂಗ ಸರ್ಪಗಳಿಗೆ ಹೋಲಿಸಿದರೆ ಹೆಬ್ಬಾವು ಕಡಿಮೆ ಅಪಾಯಕಾರಿ. ಅಷ್ಟ್ಯಾಕೆ, ಹೆಬ್ಬಾವಿನಲ್ಲಿ ವಿಷದ ಅಂಶವೇ ಇರೋದಿಲ್ಲ. ಹೆಬ್ಬಾವಿನ ಪ್ರಜಾತಿಗೆ ಸೇರಿದ ಹಾವುಗಳು ವಿಷಕಾರಿ ಅಲ್ಲ ಮಾರಾಯ್ರೇ.
ಕುಂಬರಡಿ ಗ್ರಾಮದ ಕಾಳಿಂಗ ಸರ್ಪ ಮಣ್ಣಿನ ಪೊದೆಯೊಂದರೊಳಗೆ ನುಸುಳುವ ಪ್ರಯತ್ನ ಮಾಡುತ್ತಿರುವುದು ನಿಮಗೆ ವಿಡಿಯೋನಲ್ಲಿ ಕಾಣಿಸುತ್ತದೆ. ಈ ಭಾಗದ ಉರಗ ತಜ್ಞರ ಹೆಸರು ಸಗೀರ್. ಅವರಿಗೆ ಗ್ರಾಮಸ್ಥರು ಫೋನ್ ಮಾಡಿ ಕರೆಸಿದ್ದಾರೆ.
ಸಗೀರ್ ಬಹಳ ಚಾಕ್ಯಚಕ್ಯತೆಯಿಂದ ಸರ್ಪವನ್ನು ಹಿಡಿಯುತ್ತಾರೆ. ಅದೆಷ್ಟು ವಿಷಕಾರಿ ಅಂತ ಅವರಿಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿರುತ್ತದೆ. ಸಗೀರ್ ಅವಸರಿಸದೆ ಹಾವನ್ನು ಹಿಡಿಯುತ್ತಾರೆ ಮತ್ತು ಅದನ್ನು ಹಿಡಿದ ಮೇಲೆಯೇ ನಮಗೆ ಅಸಲಿ ಗಾತ್ರ ಗೊತ್ತಾಗೋದು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸಗೀರ್ ಹಾವನ್ನು ತೆಗೆದುಕೊಂಡು ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿದರಂತೆ.
ಇದನ್ನೂ ಓದಿ: Viral Video: ದೈತ್ಯಾಕಾರದ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು