Viral: ಎಐ ಕೃಪಾ ಕಟಾಕ್ಷ; ಹೃದಯ, ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳ ಪತ್ತೆಗೆ ಕಣ್ಣಿನ ಪರೀಕ್ಷೆ ಸಾಕು

|

Updated on: Jun 23, 2023 | 2:46 PM

Artificial Intelligence : ಮುಂಬರುವ ದಿನಗಳಲ್ಲಿ ಸಿಟಿ ಸ್ಕ್ಯಾನ್​, ಎಂಆರ್​ಐ, ಎಕ್ಸ್​ರೇ ಮಾಡಿಸುವುದರ ಬದಲು ಕಣ್ಣಿನ ಒಂದು ಸಣ್ಣ ಪರೀಕ್ಷೆ ಮಾಡಿಸಿದರೆ ಸಾಕು ಎನ್ನುತ್ತಿದೆ ಗೂಗಲ್​​ ಮತ್ತು ಅರವಿಂದ ಐ ಹಾಸ್ಪಿಟಲ್​ ಒಟ್ಟಾಗಿ ನಡೆಸಿದ ಸಂಶೋಧನೆ.

Viral: ಎಐ ಕೃಪಾ ಕಟಾಕ್ಷ; ಹೃದಯ, ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳ ಪತ್ತೆಗೆ ಕಣ್ಣಿನ ಪರೀಕ್ಷೆ ಸಾಕು
ಗೂಗಲ್​ನ ಚೀಫ್​ ಎಕ್ಸಿಕ್ಯೂಟಿವ್​ ಆಫೀಸರ್​ ಸುಂದರ್ ಪಿಚ್ಚೈ
Follow us on

Google : ಕಳೆದ ಕೆಲವು ವರ್ಷಗಳಿಂದ ಕೃತಕ ಬುದ್ಧಿಮತ್ತೆ (AI) ಹೊಸ ಪರ್ವವೊಂದನ್ನು ಸೃಷ್ಟಿಸುತ್ತಿದೆ. ಮನುಷ್ಯರಾಡುವ ಮಾತು ಮತ್ತು ಕಾಣುವ ನೋಟಗಳನ್ನು ಕಂಪ್ಯೂಟರ್​ಗಳು ಆಡುವಂತೆ ಹಾಗೂ ನೋಡುವಂತೆ ಮಾಹಿತಿಯನ್ನು ಸಂಸ್ಕರಿಸುವ ಸಂಶೋಧನಾ ಕ್ಷೇತ್ರಗಳಾದ Natural Language Processing (NLP) ಹಾಗೂ Computer Vision ಎರಡರಲ್ಲೂ ದಿನೇದಿನೇ ಆಗುತ್ತಿರುವ ಪ್ರಗತಿ ಈ ಕ್ಷೇತ್ರದ ದಿಗ್ಗಜುರುಗಳನ್ನೇ ಅಚ್ಚರಿ ಮತ್ತು ಗಾಬರಿಗೆ ಕೆಡವುತ್ತಿದೆ. ಇತ್ತೀಚೆಗೆ ಬಂದ GPT-4ರ ಆಳವನ್ನು ನೀವೆಲ್ಲ ಗಮನಿಸಿರುತ್ತೀರಿ. ಆದರೆ ಮೊನ್ನೆಯಷ್ಟೇ ಗೂಗಲ್‌ನ ಸುಂದರ್ ಪಿಚ್ಚೈ (Sundar Pichai) ಈ ಚಾರಿತ್ರಿಕ ಸರಣಿಗೆ ಹೊಸ ಮೈಲಿಗಲ್ಲೊಂದು ಸೇರ್ಪಡೆಯಾಗಿರುವುದನ್ನು ಸಾರಿದ್ದಾರೆ.

ಸುಂದರ್ ಅವರ ಪ್ರಕಾರ ಗೂಗಲ್‌ನ ಹೊಸ AI ತಂತ್ರಜ್ಞಾನದ ಸಹಾಯದಿಂದ ಕಣ್ಣಿನ ಪರಿಶೀಲನೆ (Eye Scan) ಮೂಲಕ ಹೃದಯ ಹಾಗೂ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಪತ್ತೆಹಚ್ಚಬಹುದು! ಇದನ್ನು CT, MRI, ಅಥವಾ X-ray ಪರೀಕ್ಷೆಗಳಿಗೆ ಪರ್ಯಾಯವಾಗಿ ಬಳಸಬಹುದು ಎಂದು ಹೇಳಿದ್ದಾರೆ. ಗೂಗಲ್ ಮತ್ತು ಅರವಿಂದ್ ಐ ಹಾಸ್ಪಿಟಲ್‌ನ ಸಂಶೋಧಕರು ಒಟ್ಟಾಗಿ ಕಳೆದ ನಾಲ್ಕು ವರ್ಷಗಳಿಂದ ಮಾಡುತ್ತಿದ್ದ ಕೆಲಸ ಈಗ ಫಲಪ್ರದವಾಗುವ ಹಂತ ತಲುಪಿದೆ.

ಇದನ್ನೂ ಓದಿ : Viral Video: 6ಮಿಲಿಯನ್​ ಮಂದಿ ಕಣ್ಣಿಗೆ ಬಿದ್ದ ಈ ಬೆಣಚುಬೆಕ್ಕು; ಜಸ್ಟಿನ್​ ಬತ್ತಳಿಕೆಯಲ್ಲಿ ಗಾಂಧೀಜಿ, ರಮಣ ಮಹರ್ಷಿ ಇನ್ನೂ ಯಾರೆಲ್ಲ?

ಇದೇ ವರ್ಷದ ಆರಂಭದಲ್ಲಿ ಹಿಂಗಣ್ಣು ಅಥವಾ ಅಕ್ಷಿಪಟಲದ ಪರಿಶೀಲನೆಯಿಂದ (Retinal Scan) ಮನುಷ್ಯರ ಲಿಂಗ, ವಯಸ್ಸು, ಅವರು ಸಿಗರೇಟು ಸೇದುತ್ತಾರೋ ಇಲ್ಲವೋ, ಮುಂದಿನ ಐದು ವರ್ಷಗಳಲ್ಲಿ ಹೃದಯಾಘಾತವಾಗುವ ಸಂಭವನೀಯತೆ ಎಷ್ಟು, ಇವೇ ಮೊದಲಾದ ಮಾಹಿತಿಗಳನ್ನು ಪತ್ತೆಹಚ್ಚುವ ಅಲ್ಗೋರಿದಂ (algorithm) ಒಂದನ್ನು ಗೂಗಲ್ ಬಿಡುಗಡೆ ಮಾಡಿತ್ತು. ಈಗ ಈ ಹೊಸ ತಂತ್ರಜ್ಞಾನದ ಸಹಾಯದಿಂದ ನಿಮ್ಮ ಕಣ್ಣಿನ ಕಿಂಡಿಯಿಂದಲೇ ಹೃದಯವನ್ನು ಇಣುಕಬಹುದು.

ದಿನಕ್ಕೊಂದು ಅಚ್ಚರಿಗಳನ್ನ ಪರಿಚಯಿಸುತ್ತಿರುವ ಎಐ ತಂತ್ರಜ್ಞಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:43 pm, Fri, 23 June 23