ಗಗನ ಸಖಿಯಾಗಲಿ ಅಥವಾ ಬೇರೆ ಯಾವುದೇ ಹುದ್ದೆಯಲ್ಲಿರಲಿ ಹೆಣ್ಣು ಯಾವತ್ತೂ ಮಾತೃ ಹೃದಯವನ್ನು ಹೊಂದಿರುತ್ತಾಳೆ. ಅದಕ್ಕೆ ಉದಾಹರಣೆ ಎಂಬಂತೆ ಗಗನ ಸಖಿಯೊಬ್ಬರು (Air Hostess) ಆಗಿದೆ. ಬ್ರೆಜಿಲ್ (Brazil) ವಿಮಾನವೊಂದರಲ್ಲಿ ಈ ಘಟನೆ ನಡೆದಿದೆ. ಬ್ರೆಸಿಲಿಯಾದಿಂದ ಕ್ಯುಯಾಬಾಕ್ಕೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರೋರ್ವರ ಮಗು ಒಂದೇ ಸಮನೆ ಅಳುತ್ತಿತ್ತು. ಆಗ ಗಗನಸಖಿಯೊಬ್ಬರು ಬಂದು ಮಗುವನ್ನು ಎತ್ತಿಕೊಂಡು ಭುಜಕ್ಕೆ ಆನಿಸಿಕೊಂಡು ಸಾಮಾಧಾನ ಮಾಡಿದ್ದಾರೆ.
ವಿಡಿಯೋವನ್ನು ಗುಡ್ ನ್ಯೂಸ್ ಮೂವ್ಮೆಂಟ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಗಗನಸಖಿ ಅಳುವ ಮಗುವನ್ನು ಎತ್ತಿಕೊಂಡು ಭುಜಕ್ಕೆ ಒರಗಿಸಿಕೊಂಡಿರುವುದನ್ನು ಕಾಣಬಹುದು. ಗುಡ್ ನ್ಯೂಸ್ ಮೂವ್ಮೆಂಟ್ ಹಂಚಿಕೊಂಡಿರುವ ಪೋಸ್ಟ್ಗೆ, ರಮಿಸುವ ಮಗುವನ್ನು ಗಗನಸಖಿಯೊಬ್ಬರು ಮೊದಲು ಸಾಮಾಧಾನಪಡಿಸಲು ನೋಡಿದರು. ಆದರೆ ಮಗು ಅಳು ನಿಲ್ಲಿಸಲಿಲ್ಲ. ಆಗ ಅವರು ಮಗುವನ್ನು ತಮ್ಮ ತೋಳಿನಲ್ಲಿ ಎತ್ತಿಕೊಂಡು ಮಗು ಅಳು ನಿಲ್ಲಿಸಿ ನಿದ್ದೆ ಮಾಡಿಸಿದ್ದಾರೆ. ಅವರ ಪ್ರೀತಿ ಕಂಡು ಚಕಿತರಾಗಿದ್ದೇವೆ ಎಂದು ಕ್ಯಾಪ್ಷನ್ ನೀಡಿದ್ದಾರೆ.
ವೈರಲ್ ಆದ ವಿಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು, ಆಕೆಯು ತಾಯಿ ಎನ್ನುವುದನ್ನು ಇದರಿಂದಲೇ ಕಂಡುಕೊಳ್ಳಬಹುದು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಒಂದೇ ದಿನ ತ್ರಿವಳಿ ಸಹೋದರಿಯರನ್ನು ಮದುವೆಯಾದ ಯುವಕ: ವೈರಲ್ ಆಯ್ತು ಪೋಟೋ