Saree : ಸಂಬಂಧಿಕರ ಮನೆಗೆ ಉಳಿದುಕೊಳ್ಳಲು ಹೋದಾಗ ಅಥವಾ ಶುಭಸಮಾರಂಭಗಳಲ್ಲಿ ಅಜ್ಜಿಯ, ಅತ್ತೆಯ, ಅಮ್ಮನ, ನಾದಿನಿಯ, ಓರಗಿತ್ತಿಯ, ಅಕ್ಕನ, ತಂಗಿಯ, ಅತ್ತಿಗೆಯ ಸೀರೆ, ಆಭರಣಗಳನ್ನು ಧರಿಸುವುದು ಒಂದು ಆಪ್ತ ಅನುಭವವನ್ನು ಕೊಡುತ್ತದೆ ಎನ್ನುವ ವಿಷಯ ನಿಮಗೀಗಾಗಲೇ ತಿಳಿದಿದೆ ಮತ್ತು ಅನುಭವಕ್ಕೂ ಬಂದಿರುತ್ತದೆ. ಹಾಗೆಯೇ ಗಂಡಸರಿಗೂ ಇದು ಅನ್ವಯಿಸುತ್ತದೆ; ಅಜ್ಜನ ಅಪ್ಪನ, ಅಣ್ಣನ… ಇತ್ಯಾದಿ. ಅಷ್ಟೇ ಯಾಕೆ ಸ್ನೇಹಿತರು ಪ್ರೀತಿಪಾತ್ರರೂ ಪರಸ್ಪರ ಈ ಪಟ್ಟಿಗೆ ಸೇರುತ್ತಾರೆ. ಅಂತೆಯೇ ಆಪ್ತತೆ ಎನ್ನುವುದು ರಕ್ತಸಂಬಂಧಗಳಿಗಷ್ಟೇ ಮೀಸಲಾಗಿಲ್ಲ. ಆದರೆ ಬಟ್ಟೆ, ಒಡವೆ ಅಥವಾ ವಸ್ತುಗಳು ಎಷ್ಟೋ ಸಲ ಆಪ್ತತೆ, ಪ್ರೀತಿ, ಗೌರವದ ದ್ಯೋತಕವಾಗಿ ಭಾಸವಾಗುತ್ತವೆ.
ನೆಟ್ಟಿಗರು ಈ ಫೋಟೋ ನೋಡಿ ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ಧಾರೆ. ಮ್ಯಾಚಿಂಗ್ ಬ್ಲೌಸ್ ಪೀಸಿನದೇ ಸಮಸ್ಯೆಯಾಗಿರಬೇಕು, ಒಂದೇ ಥರದ ಬಟ್ಟೆ ಸಿಗುತ್ತಲೇ ಇಲ್ಲ. ಅವರಿಬ್ಬರೂ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳಾಗಿರುವುದೇ ಸಮಸ್ಯೆ. ನಿಜಕ್ಕೂ ಇದು ಚೆನ್ನಾಗಿದೆ. ನಮ್ಮ ಅತ್ತೆ, ನಾದಿನಿಯರಿಂದ ಸೀರೆಗಳನ್ನಿಸಿದುಕೊಂಡು ಉಟ್ಟುಕೊಳ್ಳುತ್ತೇವೆ, ಇದರಲ್ಲಿ ತಪ್ಪೇನಿದೆ? ಇದು ಪರಸ್ಪರ ಪ್ರೀತಿಯನ್ನು ತೋರಿಸುತ್ತಿದೆ.
ಇದನ್ನೂ ಓದಿ : Viral: ತನ್ನ ಮೊಬೈಲ್ ಹುಡುಕಲು 21 ಲಕ್ಷ ಲೀಟರ್ ನೀರುಪೋಲು ಮಾಡಿದ ಛತ್ತೀಸ್ಗಢ ಅಧಿಕಾರಿ ಅಮಾನತು
ಬಟ್ಟೆಗಳನ್ನೂ ಹೀಗೆ ರೀಸೈಕಲ್ ಮಾಡಿ, ನಾನಂತೂ ಮಾಡುತ್ತೇನೆ. ಈ ಮೂಲಕ ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸೋಣ. ಇದು ರಿಸೆಷ್ಷನ್ ಅಲ್ಲ, ಅಫೆಕ್ಷನ್. ಇದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಸೀರೆ ಉಡಲು ಇವರು ಶಕ್ತರಾಗಿದ್ಧಾರಾದರೂ ಪರಸ್ಪರರ ಸೀರೆಗಳನ್ನು ಉಟ್ಟುಕೊಳ್ಳುತ್ತಾರೆಂದರೆ ಇದು ಇವರಿಬ್ಬರ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ. ಇದು ಒಳ್ಳೆಯ ಆಲೋಚನೆ. ನಾವೂ ಕೂಡ ಹೀಗೆ ಮಾಡುತ್ತೇವೆ.
ಇದನ್ನೂ ಓದಿ : Viral Video: ಕ್ಯಾನ್ಸರ್ನಿಂದ ಬಳಲುತ್ತಿರುವ ಸ್ನೇಹಿತೆಗೆ ತಲೆ ಬೋಳಿಸಿಕೊಂಡು ಸಾಥ್ ನೀಡಿದ ಸ್ನೇಹಿತರು
ನಾನು ಭಾರತೀಯ ಸಿನೆಮಾ ಮತ್ತು ನಾಟಕಗಳಲ್ಲಿ ನೋಡಿದಂತೆ, ಅತ್ತೆ ತನ್ನ ಬಟ್ಟೆ ಅಥವಾ ಆಭರಣಗಳಲ್ಲಿ ಒಂದನ್ನು ಸೊಸೆಗೆ ಉಡುಗೊರೆಯಾಗಿ ನೀಡಿ ಅವಳ ಬಗ್ಗೆ ತನ್ನ ಮೆಚ್ಚುಗೆ ಮತ್ತು ಪ್ರೀತಿಯನ್ನು ಸೂಚಿಸುತ್ತಾಳೆ. ಸೊಸೆ ಅವುಗಳನ್ನು ಹೆಮ್ಮೆಯಿಂದ ಧರಿಸುತ್ತಾಳೆ. ಇದು ರಿಸೆಷ್ಷನ್ ಅಲ್ಲ, ರೆಸ್ಪೆಕ್ಟ್. ಅತ್ತೆಯ ಅಮ್ಮನ ಸೀರೆಯನ್ನು ಉಡುವುದು ಪ್ರೀತಿ ಮತ್ತು ಗೌರವದಿಂದ… ಇಲ್ಲಿರುವ ಸುಮಾರು 770ಕ್ಕೂ ಹೆಚ್ಚು ಪ್ರತಿಕ್ರಿಯೆಗಳೇ ಸಾಕಷ್ಟು ಆಸಕ್ತಿಕರವಾಗಿ ಕೂಡಿವೆ.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:38 pm, Tue, 30 May 23