ಸಿಡ್ನಿ: ಭ್ರೂಣದ ರೀತಿಯ ಏಲಿಯನ್​ ಆಕೃತಿಯನ್ನು ಕಂಡು ಬೆರಗಾದ ವಿಜ್ಞಾನಿಗಳು

ಆಸ್ಟ್ರೇಲಿಯಾದ ಸಿಡ್ನಿಯ ಬೀದಿಯಲ್ಲಿ ಮಳೆಯ ನಂತರ ಕಂಡುಬಂದ ವಿಚಿತ್ರ ಆಕೃತಿಯನ್ನು ನೋಡಿ ಜನತೆ ಬೆರಗಾಗಿಗಾದ್ದಾರೆ. ಏಲಿಯನ್​ ರೂಪದ ಆಕೃತಿ ಜೀವಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಸೇರಿದಂತೆ ಮಾಧ್ಯಮಗಳನ್ನು ದಿಗ್ಭ್ರಮೆಗೊಳಿಸಿದೆ.

ಸಿಡ್ನಿ: ಭ್ರೂಣದ ರೀತಿಯ ಏಲಿಯನ್​ ಆಕೃತಿಯನ್ನು ಕಂಡು ಬೆರಗಾದ ವಿಜ್ಞಾನಿಗಳು
ಏಲಿಯನ್​ ಆಕೃತಿ
Edited By:

Updated on: Mar 02, 2022 | 1:46 PM

ಆಸ್ಟ್ರೇಲಿಯಾದ ಸಿಡ್ನಿಯ ಬೀದಿಯಲ್ಲಿ ಮಳೆಯ ನಂತರ ಕಂಡುಬಂದ ವಿಚಿತ್ರ ಆಕೃತಿಯು ಜನತೆಯನ್ನು ಬೆರಗುಗೊಳಿಸಿದೆ. ಏಲಿಯನ್​ ರೂಪದ ಆಕೃತಿ ಕಂಡು ಜೀವಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಸೇರಿದಂತೆ ಮಾಧ್ಯಮಗಳು ಕೂಡ ದಿಗ್ಭ್ರಮೆಗೊಂಡಿವೆ.  ಹ್ಯಾರಿ ಹ್ಯಾಸ್​ ಎನ್ನುವವರು ಬೆಳಗ್ಗೆ ಜಾಗಿಂಗ್​ ತೆರಳಿದ್ದಾಗ ಈ ಆಕೃತಿಯನ್ನು ಎಡವಿ ಬಿದ್ದಿದ್ದಾರೆ. ನಂತರ ಅದನ್ನು ನೋಡಿ ಅದರ ವಿಡಿಯೋ ಮತ್ತು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ವಿಚಿತ್ರ ಆಕೃತಿಯ ಫೋಟೋ ಮತ್ತು ವಿಡಿಯೋ ಇನ್ಸ್ಟಾಗ್ರಾಮ್,​ ಟ್ವಿಟರ್​​ ಸೇರಿದಂತೆ ವಿವಿಧಡೆ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋದಲ್ಲಿ ಅವರು ಆಕೃತಿಯನ್ನು ಕೋಲಿನಿಂದ ಹೊರಳಾಡಿಸಲು ಯತ್ನಿಸಿದ್ದು, ಅದು ನೆಲಕ್ಕೆ ಗಟ್ಟಿಯಾಗಿ ಕಚ್ಚಿಕೊಂಡಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಅವರು, ಈ ಆಕೃತಿ ಭ್ರೂಣದಂತೆ ಕಾಣುತ್ತದೆ. ಆದರೆ ಕೊರೊನಾ, ಮೂರನೇ ಮಹಾಯುದ್ಧದ ಸಂಭವ ಇವೆಲ್ಲನ್ನೂ ನೋಡಿದರೆ ಇದು ಏಲಿಯನ್​ ಜೀವಿಯಂತೆ ಕಾಣುತ್ತದೆ ಎಂದು ಹೇಳಿದ್ದಾರೆ.  ಈ ವಿಚಿತ್ರ ಆಕೃತಿಯನ್ನು ಹಲವು ಸ್ಟಾರ್​ಗಳು ಕೂಡ ಹಂಚಿಕೊಂಡಿದ್ದು ಏನಿದು ಎಂದು ಕೇಳಿದ್ದಾರೆ. ಈ ನಡುವೆ ವೈಯರ್ಡ್​ ಲುಕಿಂಗ್​ ಕ್ರಿಯೇಚರ್​ ಕೂಡ ಇದನ್ನು ಏಲಿಯನ್​ ಎಂದು ಗುರುತಿಸಿದೆ ಎಂದು ಎನ್​ಡಿಟಿವಿ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಜೀವಿಯನ್ನು ಗುರುತಿಸಲು ಲ್ಯಾಡ್‌ಬೈಬಲ್ ಸಿಡ್ನಿ ವಿಶ್ವವಿದ್ಯಾಲಯ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯಕ್ಕೆ ತೆಗೆದುಕೊಂಡು ಹೋದಾಗ ಯಾವುದೇ ಶಿಕ್ಷಣತಜ್ಞರು ಅದನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ. ಸದ್ಯ  ಹ್ಯಾರಿ ಅವರು ಹಂಚಿಕೊಂಡಿರುವ ವಿಡಿಯೋ ತುಣುಕು ಜಗತ್ತಿನಾದ್ಯಂತ ವೈರಲ್​ ಆಗುತ್ತಿದೆ.

ಇದನ್ನೂ ಓದಿ:

Viral Video: ಮದುವೆಯಲ್ಲಿ ಹಾರವನ್ನು ಎಸೆದುಕೊಂಡ ಜೋಡಿ: ಪುಟಿನ್​ಗೂ ಇಷ್ಟು ಅಹಂಕಾರವಿಲ್ಲವೆಂದ ನೆಟ್ಟಿಗರು