ಬ್ಲಾಕ್ ಬ್ಲಸ್ಟರ್ ತೆಲುಗು ಚಲನಚಿತ್ರ ಆರ್.ಆರ್.ಆರ್ ಸಿನಿಮಾದ ಆಸ್ಕರ್ ಪ್ರಶಸ್ತಿ ವಿಜೇತ ಹಾಡು ನಾಟು ನಾಟು ಬಿಡುಗಡೆಯಾಗಿ ವರ್ಷವೇ ಕಳೆದರೂ ಈ ಹಾಡಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಂತೂ ಜಾಗತಿಕವಾಗಿ ಸದ್ದು ಮಾಡಿರುವ ಈ ಹಾಡಿನದ್ದೇ ಹವಾ. ಪ್ರಪಂಚದಾತ್ಯಂತ ಅದೆಷ್ಟೋ ಜನರು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿರುವ ರೀಲ್ಸ್ ವೀಡಿಯೋಗಳು ವೈರಲ್ ಆಗಿವೆ. ಇದೀಗ ಉಕ್ರೇನ್ ಸೈನಿಕರು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದು, ಸೈನಿಕರ ಡಾನ್ಸ್ ವೀಡಿಯೋ ಟ್ವಿಟರ್ ನಲ್ಲಿ ಬಾರಿ ಸದ್ದು ಮಾಡುತ್ತಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಉಕ್ರೇನ್ ಸೈನಿಕರು ಮೂಲತಃ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಹೆಜ್ಜೆ ಹಾಕಿರುವ ನಾಟು ನಾಟು ಹಾಡನ್ನು ಮರುಸೃಷ್ಟಿಸಿರುವುದನ್ನು ಕಾಣಬಹುದು. ಮೂಲ ಸಂಗೀತ ವೀಡಿಯೋದಲ್ಲಿ ಇಬ್ಬರು ನಟರು ಬ್ರಿಟೀಷರ ವಿರುದ್ಧ ಪ್ರದರ್ಶನ ಮಾಡುವ ಹಾಡು, ಉಕ್ರೇನ್ ಸೈನಿಕರು ರಷ್ಯಾದ ಆಕ್ರಮಣದ ವಿರುದ್ಧ ಈ ಡಾನ್ಸ್ ಪ್ರದರ್ಶನವನ್ನು ನೀಡಿದರು.
ಉಕ್ರೇನ್ನ ಲಿಬರಲ್ ಡೆಮಾಕ್ರಟಿಕ್ ಲೀಗ್ನ ಉಪಾದ್ಯಕ್ಷ ಜೇನ್ ಫೆಡೋಟೋವಾ ಅವರು ಟ್ವಿಟರ್ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, 621.1 ಸಾವಿರ ವೀಕ್ಷಣೆಗಳನ್ನು ಹಾಗೂ 6.8 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳೂ ಹರಿದುಬಂದಿವೆ.
Військові з Миколаєва зняли пародію на пісню #NaatuNaatu з ?? фільму “RRR”, головний саундтрек якого виграв Оскар цього року.
У оригінальній сцені гол.герої піснею виражають протест проти британського офіцера (колонізатора) за те, що він не пустив їх на зустріч. pic.twitter.com/bVbfwdjfj1
— Jane_fedotova?? (@jane_fedotova) May 29, 2023
ಇದನ್ನೂ ಓದಿ:ಸಫಾರಿ ಜೀಪನ್ನು ಅಟ್ಟಿಸಿಕೊಂಡುಬಂದ ಕಾಡಾನೆ, ರಿವರ್ಸ್ ಗೇರ್ನಲ್ಲೇ ಜೀಪ್ ಚಲಾಯಿಸಿದ ಚಾಲಕ: ವಿಡಿಯೋ ವೈರಲ್
ಒಬ್ಬ ಬಳಕೆದಾರರು ‘ಸೈನಿಕರು ಆರ್.ಆರ್.ಆರ್ ಚಲನಚಿತ್ರದ ನಾಟು ನಾಟು ಹಾಡಿನ ಮರು ಸೃಷ್ಟಿ ಮಾಡಿರುವುದನ್ನು ನೊಡಲು ಅದ್ಭುತವಾಗಿದೆ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಉಕ್ರೇನ್ ರಷ್ಯಾ ಯುದ್ಧದ ನಡುವೆ ಉಕ್ರೇನ್ ನ ಮಿಲಿಟರಿ ಸನ್ನಿವೇಶಕ್ಕೆ ನಾಟು ನಾಟು ಹಾಡಿನ ಅದ್ಭುತ ರೂಪಾಂತರ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಎರಡೂ ದೇಶಗಳು ಶಾಂತಿಯುತ ಮಾತುಕತೆ ಪುನರಾರಂಭಿಸಬೇಕು. ಯುದ್ಧದಲ್ಲಿ ಏನು ಇಲ್ಲ. ಅಮಾಯಕ ಮನುಷ್ಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಎರಡೂ ದೇಶಗಳು ಉತ್ತಮವಾಗಿದೆ ಎಂದು ಹೇಳಿದ್ದಾರೆ.