ಬ್ರಿಟಿಷ್ ಮೂಲದ ಹೊರತಾಗಿಯೂ, ಅಂಬಾಸಿಡರ್ ಅನ್ನು ಭಾರತೀಯ ಕಾರು ಎಂದು ಪರಿಗಣಿಸಲಾಗಿದೆ. ಹಿಂದಿನ ಕಾಲದಲ್ಲಿ ಅಂಬಾಸಿಡರ್ ಕಾರು ರೋಡಿಗೆ ಬಂತೆಂದರೆ ಅದರ ಹವಾನೇ ಬೇರೆ. ಆಗಿನ ಕಾಲದಲ್ಲಿ ಕಾರುಗಳ ಸರದಾರ ಈ ಅಂಬಾಸಿಡರ್ ಕಾರ್. ಭಾರತೀಯ ಸೇನೆಯ ಸೈನ್ಯಾಧಿಕಾರಿಯಿಂದ ಹಿಡಿದು ಸರ್ಕಾರಿ ಕಚೇರಿ ಅಧಿಕಾರಿಗಳು, ಶಾಸಕರ, ಸಂಸದರು ಈ ಅಂಬಾಸಿಡರ್ ಕಾರನ್ನೇ ನೆಚ್ಚಿಕೊಂಡಿದ್ದರು. ಇದೀಗ ಹೊಸ ಹೊಸ ಬ್ರಾಂಡ್ ಬರುತ್ತಿದ್ದಂತೆ ಈ ಹಳೆಯ ಅಂಬಾಸಿಡರ್ ಕಾರು ಧೂಳು ಹಿಡಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಪಾಸ್ಪೋರ್ಟ್, ಸಿನಿಮಾ ಟಿಕೇಟ್ ಮುಂತಾದ ಹಳೆಯ ಕಾಲದ ವಸ್ತುಗಳ ಅಪರೂಪದ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಒಂದು ಅಂದ್ರೆ 1964ರ ಕಾಲದ ಅಂಬಾಸಿಡರ್ ಕಾರಿನ ಬಿಲ್ ಒಂದು ವೈರಲ್ ಆಗಿದೆ. ಆಗಿನ ಕಾಲದಲ್ಲಿ ಅಂಬಾಸಿಡರ್ ಕಾರಿನ ಬೆಲೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
Madras Trends ಎಂಬ ಫೇಸ್ಬುಕ್ ಖಾತೆಯಲ್ಲಿ 1964ರಲ್ಲಿ ತೆಗೆದುಕೊಂಡ ಅಂಬಾಸಿಡರ್ ಕಾರಿನ ಬಿಲ್ ಅನ್ನು ಶೇರ್ ಮಾಡಲಾಗಿದೆ. ಅಕ್ಟೋಬರ್ 20,1964 ರಲ್ಲಿ ಈ ಕಾರು ಖರೀದಿಸಲಾಗಿದೆ. 1964ರಲ್ಲಿ ಅಂಬಾಸಿಡರ್ ಬೆಲೆ 16,495 ರೂಪಾಯಿಗಳು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹಳೆಯ ಬಿಲ್ ಇಲ್ಲಿದೆ ನೋಡಿ.
ಇದನ್ನೂ ಓದಿ: Bullet 350cc Price: 1986ರಲ್ಲಿ ಬುಲೆಟ್ 350cc ಬೆಲೆ ಎಷ್ಟಿತ್ತು ಗೊತ್ತಾ?
ವೈರಲ್ ಆಗಿರುವ ಬಿಲ್ ಪ್ರಕಾರ ಕಾರಿನ ಬೆಲೆ 13,787 ರೂ. ಇದರೊಂದಿಗೆ ಸೇಲ್ಸ್ ಟ್ಯಾಕ್ಸ್ 1493 ರೂ. ಹಾಗೂ ಸಾರಿಗೆ ಶುಲ್ಕ 897 ರೂ. ಜೊತೆಗೆ ನಂಬರ್ ಪ್ಲೇಟ್ಗೆ 7 ರೂಪಾಯಿ ಮುಂತಾದ ಶುಲ್ಕಗಳನ್ನು ಕೂಡಿಸಿ ಒಟ್ಟು 16,495 ರೂಪಾಯಿ ಕಾರನ್ನು ಮಾರಾಟ ಮಾಡಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ