Food: ಅಮೆರಿಕದ ಹಿಂದೀ ಯೂಟ್ಯೂಬರ್ ಡ್ರ್ಯೂ ಹಿಕ್ಸ್ ಮತ್ತು ಇಂಡಿಯಾ ಜಪಾನ್ ಇನ್ಫ್ಯೂಯೆನ್ಸರ್ ಮೇಯೋ ಜಪಾನ್ ಜಪಾನಿನ ರೆಸ್ಟೋರೆಂಟ್ನಲ್ಲಿ ಊಟಕ್ಕೆ ಕುಳಿತಿದ್ದಾರೆ. ಇಬ್ಬರೂ ಒಂದೊಂದು ನಾನ್ ಕೈಗೆತ್ತಿಕೊಳ್ಳುತ್ತಾರೆ. ಡ್ರ್ಯೂ, ಜಪಾನಿನಲ್ಲಿ ಇಷ್ಟು ದೊಡ್ಡ ನಾನ್ (Naan) ಯಾಕೆ ಮಾಡುತ್ತಾರೆ? ಎಂದು ಕೇಳುತ್ತಾನೆ. ಯಾಕೆ ಎಂದು ನನಗೂ ಗೊತ್ತಿಲ್ಲ ಆದರೆ ತಿಂದು ನೋಡೋಣವೇ? ಎಂದು ಮೇಯೋ ಕೇಳುತ್ತಾಳೆ. ಆದರೆ ಒಂದೇ ಕೈಯಿಂದ ತಿನ್ನಬೇಕು ಎಂದು ಡ್ರ್ಯೂ ಹೇಳುತ್ತಾನೆ. ಆದರೆ ಜಪನೀಸ್ ಬಟರ್ ಚಿಕನ್ ಸ್ವಲ್ಪ ಸಿಹಿ ಇದೆ ಅನ್ನಿಸುತ್ತಿದೆ. ಆದರೂ ಇದು ಬಹಳ ರುಚಿಯಾಗಿದೆ ಎನ್ನುತ್ತಾಳೆ. ಅಂತೂ ಜಪಾನಿನಲ್ಲಿ ಒಳ್ಳೆಯ ದೇಸೀ ಊಟ ಸಿಗುತ್ತದೆ ಎನ್ನುತ್ತಾರೆ ಇವರಿಬ್ಬರೂ. ಇವರಿಬ್ಬರೂ ಹಿಂದಿಯಲ್ಲಿ ನಡೆಸಿದ ಈ ಸಂಭಾಷಣೆ ಇದೀಗ ವೈರಲ್ ಆಗುತ್ತಿದೆ.
ಇದನ್ನೂ ಓದಿ : Viral Video: ಬಾದಲ್ ಬರ್ಸಾ ಬಿಜುಲಿ; ಬೆಂಗಳೂರು ಅಜ್ಜಿಯರ ಡ್ಯಾನ್ಸ್ಗೆ ಮನಸೋತ ನೆಟ್ಟಿಗರು
ಈ ವಿಡಿಯೋ ಅನ್ನು ಸೆ. 8ರಂದು ಪೋಸ್ಟ್ ಮಾಡಲಾಗಿದ್ದು ಈತನಕ 75,000ಕ್ಕಿಂತಲೂ ಹೆಚ್ಚು ಜನರು ಮೆಚ್ಚಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಜಪಾನಿಗೆ ಭೇಟಿ ನೀಡಿ ಜಪಾನೀ ಮತ್ತು ಭಾರತೀಯ ಖಾದ್ಯಗಳನ್ನು ಸವಿದಿದ್ದಕ್ಕೆ ಧನ್ಯವಾದ ಎಂದು ಡ್ರ್ಯೂಗೆ ಮೇಯೋ ಹೇಳಿದ್ದಾರೆ. ಹಾಂ ಕೈಯಿಂದ ತಿಂದಿದ್ದೇನೆ ಎಂದು ಪ್ರತಿಯಾಗಿ ಪ್ರತಿಕ್ರಿಯಿಸಿದ್ಧಾರೆ ಡ್ರ್ಯೂ.
ದಯವಿಟ್ಟು ಇವನಿಗೆ ಯಾರಾದರೂ ಆಧಾರ್ ಕಾರ್ಡ್ ಕೊಡಿಸಿ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ನಿಮ್ಮಿಬ್ಬರ ಈ ಜಂಟೀರೀಲಿಗಾಗಿ ಕಾಯುತ್ತಿದ್ದೆ, ಅಂತೂ ಮಾಡಿದಿರಿ. ತುಂಬಾ ಚೆನ್ನಾಗಿದೆ ಎಂದಿದ್ದಾರೆ ಇನ್ನೊಬ್ಬರು. ಮುಂದಿನ ಸಲ ಬ್ರೆಝಿಲ್ ಇನ್ಫ್ಲ್ಯೂಯೆನ್ಸರ್ ಭೋಜಪುರಿ ಮಾತನಾಡಬಹುದೇನೋ, ಕಾಯುತ್ತಿದ್ದೇವೆ ಎಂದಿದ್ದಾರೆ ಮತ್ತೊಬ್ಬರು. ಅಮೆರಿಕಾ ಮತ್ತು ಜಪಾನದವರು ಹಿಂದೀ ಮಾತನಾಡುತ್ತಾ ಕೈಯಿಂದ ದೇಸಿ ಊಟ ಮಾಡುತ್ತಿದ್ದಾರೆ ಎಂದರೆ ಖಂಡಿತ ಇಲ್ಲಿ G20 Summit ನಡೆಯುತ್ತಿದೆ ಎಂದು ಕಾಲೆಳೆದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಮಂಕೀ ಮ್ಯಾನ್ ಎಂದರು ಕಲ್ಲನ್ನೂ ಎಸೆದರು ನಾನು ಧೃತಿಗೆಡಲಿಲ್ಲ
ಎಲ್ಲರೂ ಭಾರತದಲ್ಲಿ ನೆಲೆಗೊಳ್ಳಲು ಏನೆಲ್ಲ ಸಾಹಸ ಮಾಡುತ್ತಿದ್ದಾರೋ, ನೋಡಲು ಎರಡು ಕಣ್ಣುಗಳು ಸಾಲವು ಎಂದಿದ್ದಾರೆ ಒಬ್ಬರು. ರೀಲ್ಸ್ ಮಾಡಿ ಭಾರತಕ್ಕೆ ಬರಬಹುದೇ? ಎಂದು ಪ್ರಶ್ನಿಸಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:52 pm, Tue, 19 September 23