Artificial Intelligence : ಪ್ರತೀ ದಿನ ಬೆಳಗಾಗುವುದರೊಳಗೆ ಹೊಸ ಹೊಸ ಅಚ್ಚರಿ ಕೊಡುತ್ತಿರುತ್ತಾರೆ ಎಐ ಕಲಾವಿದರು. ಇದೀಗ ಅನುಷ್ಕಾ ಶರ್ಮಾ, ಕರೀನಾ ಕಪೂರ್, ಐಶ್ವರ್ಯ ರೈ, ಅಲಿಯಾ ಭಟ್, ಪರಿಣೀತಾ ಛೋಪ್ರಾ, ದಿಶಾ ಪಠಾಣಿ, ದೀಪಿಕಾ ಪಡುಕೋಣೆ, ಸುಹಾನಾ ಖಾನ್, ಕತ್ರೀನಾ ಕೈಫ್, ಶ್ರದ್ಧಾ ಕಪೂರ್ರನ್ನು ಬಾರ್ಬಿಯಂತೆ ಸೃಷ್ಟಿಸಿದ್ದಾರೆ. ಸೊಗಸಾದ ಕೇಶವಿನ್ಯಾಸ, ಪ್ರಸಾಧನ, ವಸ್ತವಿನ್ಯಾಸದಿಂದ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ ಬಾಲಿವುಡ್ನ ಈ ಬೆಡಗಿಯರು. ಅಂದಹಾಗೆ ಇವರೆಲ್ಲರೂ ಹೀಗೆ ಬಾರ್ಬಿಯಲ್ಲಿ ಕಂಗೊಳಿಸುತ್ತಿರುವುದಕ್ಕೆ ಕಾರಣವಿದೆ, ಜು. ಜುಲೈ 21 ರಂದು ಬಾರ್ಬಿ (Barbie) ಚಲನಚಿತ್ರ ಬಿಡುಗಡೆಯಾಗಲಿದೆ. ಹಾಗಾಗಿ ಎಐ ಕಲಾವಿದರಿಗೆಲ್ಲ ಬಾರ್ಬಿ ಫಿವರ್!
ಗ್ರೇಟಾ ಗೆರ್ವಿಂಗ್ (Greta Gerwig) ನಿರ್ದೇಶನದಲ್ಲಿ ಬಾರ್ಬಿ ಚಿತ್ರ ತಯಾರಾಗಿದೆ. ಅರಿಯಾನಾ ಗ್ರೀನ್ಬ್ಲಾಟ್, ಕಿಂಗ್ಸ್ಲೆ ಬೆನ್ ಆದಿರ್, ರಿಯಾನ್ ಗೊಸ್ಲಿಂಗ್ ಮತ್ತು ಎಮ್ಮಾ ಮ್ಯಾಕಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್ನ ಬೆಡಗಿಯರನ್ನು ಎಐಮಯಗೊಳಿಸಿದ್ದು ಕಲಾವಿದ ಸಾಹಿದ್. ಈಗಾಗಲೇ ಇವರ ಈ ಪೋಸ್ಟ್ ಅನ್ನು 20,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. 3,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ತಮ್ಮ ನೆಚ್ಚಿನ ನಟಿಯರನ್ನು ಗುರುತಿಸಿ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ಅಜ್ಜಅಜ್ಜಿಯ ನೃತ್ಯ; ಸಂಗಾತಿ ಎಂದರೆ ನಿಮ್ಮೊಂದಿಗೆ ಪ್ರತೀ ಕ್ಷಣವೂ ಜೀವಿಸುತ್ತಿರಬೇಕು
ಐಶ್ವರ್ಯಾ ಮಾತ್ರ ಬಾರ್ಬಿಯಂತೆ ಕಾಣುತ್ತಿದ್ದಾಳೆ ಎಂದಿದ್ದಾರೆ ಒಬ್ಬರು. ನಾನು ಜಾಕ್ವೆಲೀನ್ಳನ್ನು ಹುಡುಕುತ್ತಿದ್ದೆ ಎಂದಿದ್ದಾರೆ ಮತ್ತೊಬ್ಬರು. ನನ್ನ ನೆಚ್ಚಿನ ಕಾಜೋಲ್ ಎಲ್ಲಿ ಎಂದಿದ್ದಾರೆ ಮಗದೊಬ್ಬರು. ಮಾಧುರಿಯನ್ನೇಕೆ ಬಿಟ್ಟಿದ್ದೀರಿ ಎಂದು ಕೇಳಿದ್ದಾರೆ ಇನ್ನೊಬ್ಬರು. ಹೀಗೆ ಅನೇಕರು ತಮ್ಮ ನೆಚ್ಚಿನ ನಟಿಯರು ಇಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Viral Video: ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾಬಾಲಕಿ
ಸುಹಾನಾ ಬಾಲಿವುಡ್ ಬೆಡಗಿಯೆ? ಎಂದು ಕೇಳಿದ್ದಾರೆ ಒಬ್ಬರು. ನಿಜಕ್ಕೂ ಚೆನ್ನಾಗಿವೆ ಈ ಚಿತ್ರಗಳು ನೀವು ಯಾವ ಆ್ಯಪ್ ಉಪಯೋಗಿಸಿದ್ದೀರಿ ಎಂದು ಕೇಳಿದ್ದಾರೆ ಮತ್ತೊಬ್ಬರು. ಸಾಮಾನ್ಯವಾಗಿ ಎಐ ಕಲಾವಿದರು ಮಿಡ್ ಜರ್ನಿ (Mid Journey), ಪ್ರೋಕ್ರಿಯೇಟ್ ಮತ್ತು ಎಡಿಟಿಂಗ್ಗಾಗಿ ಫೋಟೋಶಾಪ್ ಉಪಯೋಗಿಸಿ ಎಐ ಕಲೆಯನ್ನು ಸೃಷ್ಟಿಸುತ್ತಾರೆ.
ಎಐ ಕಲೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ