ಮುದ್ದು ಮಕ್ಕಳ ಜೊತೆಗೆ ಇದ್ದು ಬಿಟ್ಟರೆ ಅದರಸಷ್ಟು ಖುಷಿ ನೀಡುವ ಘಳಿಗೆಯು ಮತ್ತೊಂದಿಲ್ಲ. ಮುಗ್ಧ ಮನಸ್ಸುಗಳ, ಸ್ವಾರ್ಥವಿಲ್ಲದ ಮಕ್ಕಳು ಆಡುವ ಪ್ರತಿಯೊಂದು ತೊದಲು ಮಾತನ್ನು ಕೇಳುವಾಗ ಕಿವಿಗೆ ಇಂಪೆನಿಸುತ್ತದೆ. ಮಕ್ಕಳ ಮುದ್ದಾದ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿಯೊಂದಿಗೆ ಎಂಟು ತಿಂಗಳ ಮಗುವೊಂದು ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಿಸಿದ್ದು, ಈ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
Vaidik Gyaan ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ತಾಯಿಯ ಪಕ್ಕದಲ್ಲಿ ಮಲಗಿರುವ ಮಗುವು ಶ್ರೀ ಕೃಷ್ಣ ದಾಮೋದರಾಷ್ಟಕಂ ಶ್ಲೋಕ ಪಠಿಸುವುದನ್ನು ಕಾಣಬಹುದು. ಶ್ರೀ ಕೃಷ್ಣ ದಾಮೋದರಾಷ್ಟಕಂನ ಕೊನೆಯ ಪದವನ್ನು ಮಗುವೇ ಪೂರ್ಣಗೊಳಿಸುತ್ತಿರುವುದು ವಿಶೇಷ. ಹೌದು, ತಾಯಿಯು ಶ್ರೀ ಕೃಷ್ಣ ದಾಮೋದರಾಷ್ಟಕಂ ಶ್ಲೋಕ ಹೇಳುತ್ತಿದ್ದಾಳೆ. ಆದರೆ ಕೊನೆಯ ಪದವನ್ನು ಮಗುವು ಮುದ್ದಾಗಿ ಉಚ್ಚರಿಸುತ್ತಿದೆ.
ಇದನ್ನೂ ಓದಿ: ವಧುವಿನ ದೃಷ್ಟಿ ತೆಗೆದು ಮದುವೆ ಮಂಟಪಕ್ಕೆ ಕೈ ಹಿಡಿದು ಕರೆದ್ಯೊಯ್ದ ವರ
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆ ಕಂಡಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು, ಮಗುವಿನ ಈ ಆಧ್ಯಾತ್ಮಕ ಸಾಧನೆಯನ್ನು ಹೊಗಳಿದ್ದಾರೆ. ಮತ್ತೊಬ್ಬರು, ಜೈ ಸನಾತನ ಧರ್ಮ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮಗುವಿನ ಬಾಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಣ ಕೇಳುವುದೇ ಕಿವಿಗೆ ಇಂಪಾಗಿದೆ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ