
ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ. ಮಾತಿನಲ್ಲಿ ತೂಕ ಹಾಗೂ ಜೀವನದ ಅನುಭವವನ್ನು ಹೇಳುತ್ತ ತಮ್ಮ ದುಡಿಮೆಯಲ್ಲಿ ಖುಷಿ ಕಾಣುತ್ತಿರುವ ಹಿರಿ ಜೀವವಿದು (Old man). 72ರ ಇಳಿ ವಯಸ್ಸಿನಲ್ಲಿ ಲಾರಿ ಚಾಲಕರಾಗಿ (lorry driver) ಕೆಲಸ ಮಾಡುತ್ತಿರುವ ಇದು ಗೋವಿಂದಣ್ಣನ ಬದುಕಿನ ಕಥೆ. ಇವರ ಕಾಯಕ ಮಾತ್ರವಲ್ಲ, ಇವರ ಪ್ರತಿಯೊಂದು ಮಾತು ಕೂಡ ಎಲ್ಲರಿಗೂ ಸ್ಫೂರ್ತಿ ನೀಡುವಂತಿದೆ. ಶ್ರಮಜೀವಿಯ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಇದನ್ನು ಮೆಚ್ಚಿಕೊಂಡಿದ್ದಾರೆ.
Uppukari786 ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಲಾರಿ ಓಡಿಸುತ್ತಾ ತಮ್ಮ ಬದುಕಿನ ಕೆಲ ವಿಚಾರಗಳನ್ನು ಹೇಳುವುದನ್ನು ನೋಡಬಹುದು. ಜಾತಿ ಭೇದ ಮಾಡಬಾರದು, ನನಗೆ ಎಲ್ಲರೂ ಬೇಕು ಎನ್ನುತ್ತಾ, ತಮ್ಮ ಬದುಕಿನ ಒಂದೊಂದೇ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಎರಡು ವರ್ಷ ಬಾಡಿಗೆ ಮನೆಯಲ್ಲಿದ್ರೂ ಬಾಡಿಗೆ ಕೊಡಲಿಲ್ಲ, ದಿನಸಿ ಸಾಲ ತರ್ತಿದ್ದೆ. ಆದರೂ ಹಣ ಕೊಡು ಅಂತ ಯಾರು ಕೇಳಿಲ್ಲ. ನಾನು ಸುಮ್ಮನೆ ಕೂರುವುದಿಲ್ಲ. ಲಾರಿ ಓಡಿಸುವುದಲ್ಲದೇ, ಗದ್ದೆ ಉಳುಮೆ, ಭತ್ತ ಕಟಾವು ಹೀಗೆ ಕೃಷಿ ಕೆಲಸವು ಗೊತ್ತಿದೆ ಎನ್ನುತ್ತಾ ತಮ್ಮ ಅನುಭವದ ಮಾತುಗಳನ್ನಾಡುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ಮೊಮ್ಮಗಳ ಕೈ ತುತ್ತು ಸವಿದ ಅಜ್ಜಿ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಇದುವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಸಿಗರೇಟ್ ಸೇದುವುದನ್ನು ಬಿಡಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ. ಇನ್ನೊಬ್ಬರು ನೂರು ಕಾಲ ಹೀಗೆಯೇ ಬಾಳಿ, ಭೇದ ಭಾವ ಮಾಡಬಾರದು ಎನ್ನುವ ಮಾತು ಕೇಳಿ ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಜೀವನದಲ್ಲಿ ಡಿಗ್ರಿ ಅಲ್ಲ, ಬೇರೇನೂ ಕಲಿತರೂ ನಿಮ್ಮಷ್ಟು ಕಲಿತವರು ಯಾರು ಸಿಗಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ