Video: ಮೊಮ್ಮಗಳ ಕೈ ತುತ್ತು ಸವಿದ ಅಜ್ಜಿ, ವೈರಲ್ ಆಯ್ತು ದೃಶ್ಯ
ಅಜ್ಜ ಅಜ್ಜಿಯಂದಿರ ಜೊತೆಗೆ ಸಮಯ ಕಳೆಯುವುದೆಂದರೆ ಮೊಮ್ಮಕ್ಕಳಿಗೆ ತುಂಬಾನೇ ಇಷ್ಟ. ಇತ್ತ ಹಿರಿಜೀವಗಳು ಕೂಡ ತಮಗೆ ಮೊಮ್ಮಕ್ಕಳು ಇದ್ದು ಬಿಟ್ಟರೆ ಅವರೇ ಪ್ರಪಂಚವಾಗಿ ಬಿಡುತ್ತಾರೆ. ಇದೀಗ ಪುಟ್ಟ ಮಗುವೊಂದು ತನ್ನ ಪ್ರೀತಿಯ ಅಜ್ಜಿಗೆ ಕೈ ತುತ್ತು ನೀಡಿದೆ. ಈ ಹಿರಿಜೀವವೊಂದು ಮೊಮ್ಮಗಳ ಪ್ರೀತಿಯಲ್ಲಿ ಕರಗಿ ಹೋಗಿದ್ದು, ಈ ಹೃದಯಸ್ಪರ್ಶಿ ದೃಶ್ಯವು ನೆಟ್ಟಿಗರ ಹೃದಯ ಗೆದ್ದಿದೆ.

ಪುಟಾಣಿ (little kids) ಏನೇ ಮಾಡಿದ್ರು ನೋಡೋದಕ್ಕೆ ಚಂದ. ತನ್ನ ಜತೆಗೆ ಯಾರು ಆತ್ಮೀಯರಾಗಿರುತ್ತಾರೋ, ಪ್ರೀತಿ ತೋರುತ್ತಾರೋ ಅವರನ್ನು ಅತಿಯಾಗಿ ಹಚ್ಚಿಕೊಂಡು ಬಿಡುತ್ತವೆ. ಇನ್ನು ಅಜ್ಜ ಅಜ್ಜಿಯಂದಿರೆಂದರೆ ಮೊಮ್ಮಕ್ಕಳಿಗೆ ಇಷ್ಟ. ಈ ಹಿರಿಜೀವಗಳ ಜತೆಗೆ ಮೊಮಕ್ಕಳ ಬಾಂಧವ್ಯ ಸಾರುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಇದು ಎರಡು ಮುಗ್ಧ ಮನಸ್ಸುಗಳ ಶುದ್ಧ ಪ್ರೀತಿಯ ಪ್ರತೀಕವಾಗಿದೆ. ಅಜ್ಜಿಯೊಬ್ಬರು (grandmother) ಮೊಮ್ಮಗಳ ಕೈ ತುತ್ತಿನ ರುಚಿಯನ್ನು ಸವಿದು ಖುಷಿಪಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ಬಾಂಧವ್ಯ ಹೀಗೆ ಇರಲಿ ಎಂದಿದ್ದಾರೆ.
shivdhanush143 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ತನ್ನ ಪ್ರೀತಿಯ ಅಜ್ಜಿಗೆ ಕೈ ತುತ್ತು ನೀಡುವ ಹೃದಯ ಸ್ಪರ್ಶಿ ದೃಶ್ಯವನ್ನು ನೋಡಬಹುದು. ಎರಡು ಶುದ್ಧ ಮನಸ್ಸು ನಿಷ್ಕಲ್ಮಶ ಪ್ರೀತಿಯನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಈವಾಗ್ಲೇ ಹಿಂಗೇ, ಮುಂದೆ ಹೆಂಗೋ; ನಡು ರಸ್ತೆಯಲ್ಲೇ ಜಗಳಕ್ಕಿಳಿದ ಪುಟಾಣಿಗಳು
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪೂರ್ವ ಜನ್ಮದ ಪುಣ್ಯವಿರಬೇಕು ಎಂದಿದ್ದಾರೆ. ಇನ್ನೊಬ್ಬರು, ಇದು ನಮ್ಮ ಸಂಸ್ಕೃತಿ ಎಂದು ಮೆಚ್ಚಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ, ಅಜ್ಜಿ ಮೊಮ್ಮಗಳು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




