AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brain Teaser: ಈ ಪ್ರಶ್ನೆಯಲ್ಲೇ ಅಡಗಿದೆ ವ್ಯಕ್ತಿಯ ವಯಸ್ಸು; ಒಗಟು ಬಿಡಿಸಿ ಉತ್ತರ ಹೇಳಿ

ಒಗಟು ಎಂದರೇನೇ ಮೆದುಳಿಗೆ ಕೆಲಸ ನೀಡುವಂತಹದ್ದು. ಬ್ರೈನ್ ಟೀಸರ್‌ಗೆ ಸಂಬಂಧಿಸಿದ ಒಗಟುಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇಂತಹ ಟ್ರಿಕ್ಕಿ ಪ್ರಶ್ನೆಯೊಂದು ಮೆದುಳಿಗೆ ಹುಳ ಬಿಡುತ್ತದೆ. ಆದರೆ ಇದೀಗ ವಯಸ್ಸಿಗೆ ಸಂಬಂಧ ಪಟ್ಟ ಪ್ರಶ್ನೆಯೊಂದು ವೈರಲ್ ಆಗಿದ್ದು, ನೀವು ಸರಿಯಾದ ಉತ್ತರ ಹೇಳಿ ಜಾಣರು ಎನಿಸಿಕೊಳ್ಳಿ.

Brain Teaser: ಈ ಪ್ರಶ್ನೆಯಲ್ಲೇ ಅಡಗಿದೆ ವ್ಯಕ್ತಿಯ ವಯಸ್ಸು; ಒಗಟು ಬಿಡಿಸಿ ಉತ್ತರ ಹೇಳಿ
ಬ್ರೈನ್ ಟೀಸರ್Image Credit source: Pinterest
ಸಾಯಿನಂದಾ
|

Updated on: Nov 23, 2025 | 4:47 PM

Share

ಒಗಟಿನ (Puzzles) ಪ್ರಶ್ನೆಗಳನ್ನು ಬಿಡಿಸುವುದು ಖುಷಿಕೊಟ್ಟರೂ, ನೂರಕ್ಕೆ ನೂರರಷ್ಟು ಮೆದುಳಿಗೆ ಕೆಲಸ ಕೊಡುತ್ತದೆ. ಎಷ್ಟೇ ಯೋಚನೆ ಮಾಡಿದರೂ ಉತ್ತರ ಹೊಳೆಯುವುದೇ ಇಲ್ಲ. ಆದರೆ ಈ ಬ್ರೈನ್‌ ಟೀಸರ್‌ಗಳು (brain teaser) ನಿಮ್ಮ ಬುದ್ಧಿವಂತಿಕೆಗೂ ಸವಾಲು ಎಸಗುತ್ತದೆ. ಹೌದು, ಪ್ರಶ್ನೆಗಳನ್ನು ಓದಿದಾಗ ಸುಲಭದಾಯಕ ಎನಿಸಿದರೂ ಇಂತಹ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಆದರೆ ಇದೀಗ ವೈರಲ್ ಆಗಿರುವ ಒಗಟಿನಲ್ಲಿ ಪ್ರಶ್ನೆಗಳು ಸಹಜವಾಗಿ ಕಂಡರೂ ಉತ್ತರವನ್ನು ಕಂಡುಕೊಳ್ಳಲು ತಲೆ ಖರ್ಚು ಮಾಡಬೇಕಾಗುತ್ತದೆ. ಈ ಪ್ರಶ್ನೆಯಲ್ಲಿ ಸಹೋದರ ಹಾಗೂ ಅವನ ಒಡಹುಟ್ಟಿದವನ ನಡುವಿನ ವಯಸ್ಸಿನ ವ್ಯತ್ಯಾಸಕ್ಕೆ ಅನುಗುಣವಾಗಿ ಸಹೋದರನ ವಯಸ್ಸನ್ನು ಕಂಡುಹಿಡಿಯುವುದೇ ಇಲ್ಲಿರುವ ಸವಾಲು. ಈ ಪ್ರಶ್ನೆಗೆ ಉತ್ತರ ಹೇಳಿದ್ರೆ ನೀವು ಬುದ್ಧಿವಂತರು ಎನ್ನುವುದು ತಿಳಿಯುತ್ತದೆ.

ಒಗಟಿನ ಪ್ರಶ್ನೆ ಹೀಗಿದೆ:

ಬ್ರೈನ್ ಟೀಸರ್‌ಗೆ ಸಂಬಂಧಿಸಿದ ಒಗಟಿನ ಪ್ರಶ್ನೆಯೊಂದು ಇಲ್ಲಿದೆ. ನಾನು 4 ವರ್ಷವನಿದ್ದಾಗ ನನ್ನ ತಮ್ಮನ ವಯಸ್ಸು ನನ್ನ ವಯಸ್ಸಿನ ಅರ್ಧದಷ್ಟು ಇತ್ತು. ಈಗ ನನಗೆ 18 ವರ್ಷ. ಹಾಗಿದ್ದರೆ ನಮ್ಮ ತಮ್ಮನ ವಯಸ್ಸು ಎಷ್ಟು ಎಂದು ಕೇಳಲಾಗಿದೆ. ನೀವು ನಿಖರವಾದ ವಯಸ್ಸು ಎಷ್ಟು ಎಂದು ಹೇಳಬೇಕು.

ಇದನ್ನೂ ಓದಿ: ಈ ಉದ್ಯಾನವನದಲ್ಲಿ ಅಡಗಿರುವ ಹೆಬ್ಬಾವನ್ನು ಗುರುತಿಸಬಲ್ಲಿರಾ

ಸರಿಯಾದ ಉತ್ತರ ಹೇಳಲು ಸಾಧ್ಯವಾಯಿತೇ?

ಈ ಟ್ರಿಕ್ಕಿ ಒಗಟನ್ನು ಬಿಡಿಸಲು ನಿಮಗೆ ಕಷ್ಟವಾಗಿರಬಹುದು. ನೀವು ಹೆಚ್ಚುವರಿ ಸಮಯ ತೆಗೆದುಕೊಂಡಿರಲುಬಹುದು. ಈ ಪ್ರಶ್ನೆಗೆ ಉತ್ತರ ನಾವು ಹೇಳುತ್ತೇವೆ.. ತಮ್ಮನ ವಯಸ್ಸು 16 ವರ್ಷಗಳು. ಸಹೋದರ ಯಾವಾಗಲೂ ನಿಮಗಿಂತ 2 ವರ್ಷ ಚಿಕ್ಕವನಾಗಿರುತ್ತಾನೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ