ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮತದಾನ ನಡೆಯುತ್ತಿರುವಾಗಲೇ ಮತಪೆಟ್ಟಿಗೆಯನ್ನು ಕದ್ದು ಓಡಿ ಹೋಗಿದ್ದಾನೆ. ಈತ ಓಡಿಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದೆ. ಇದೀಗಾ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆತ ಹಾಡು ಹಗಲೇ ಮತಗಟ್ಟೆಯಿಂದ ಮತಪೆಟ್ಟಿಗೆಯನ್ನು ಕದ್ದು ಓಡುತ್ತಿರುವಾಗ ರಾಜ್ಯದ ಪೊಲೀಸ್, ಆಡಳಿತ ಮತ್ತು ಭದ್ರತಾ ವ್ಯವಸ್ಥೆಯ ಇರಲ್ಲಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ನಕಲಿ ಮತದಾನದಿಂದ ಕುಪಿತಗೊಂಡ ಮತದಾರರು ಕೂಚ್ ಬೆಹಾರ್ ಜಿಲ್ಲೆಯ ದಿನ್ಹಟಾದ ಬರನಾಚಿನಾ ಎಂಬಲ್ಲಿನ ಮತಗಟ್ಟೆಯೊಂದರಲ್ಲಿ ಮತಯಂತ್ರಕ್ಕೆ ಬೆಂಕಿ ಹಚ್ಚಿರುವ ಮತ್ತೊಂದು ಘಟನೆ ನಡೆದಿದೆ.
#WATCH | West Bengal panchayat election | Ballot box at a polling booth in Baranachina of Dinhata in Cooch Behar district was set on fire allegedly by voters who were angry with bogus voting that was reportedly going on here. pic.twitter.com/6C5aC00uac
— ANI (@ANI) July 8, 2023
ಪಶ್ಚಿಮ ಬಂಗಾಳದಲ್ಲಿ ಒಂದೇ ಹಂತದ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಗಳು 2024 ರ ಲೋಕಸಭೆ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳ ಪರೀಕ್ಷೆ ಎಂದು ಪರಿಗಣಿಸಲಾಗಿದೆ. 22 ಜಿಲ್ಲಾ ಪರಿಷತ್‌ಗಳು, 9,730 ಪಂಚಾಯತ್ ಸಮಿತಿಗಳು ಮತ್ತು 63,239-ಗ್ರಾಮ ಪಂಚಾಯತ್‌ಗಳ ಸ್ಥಾನಗಳಲ್ಲಿ ಹರಡಿರುವ ಸುಮಾರು 928 ಸ್ಥಾನಗಳಿಗೆ ಸ್ಥಳೀಯ ಮಟ್ಟದಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸುಮಾರು 5.67 ಕೋಟಿ ಮತದಾರರು ಮತ ಚಲಾಯಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಮಲೇಷಿಯಾದಲ್ಲಿ ರಾಕಿಂಗ್ ಸ್ಟಾರ್ಗೆ ಸಿಕ್ತು ಸ್ಪೆಷಲ್ ಗಿಫ್ಟ್; ವಿಡಿಯೋ ಇಲ್ಲಿದೆ
ಮತಗಟ್ಟೆಯಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಅಲ್ಲಿನ ಸರ್ಕಾರಗಳು ಭದ್ರತಾ ಪಡೆಗಳು ಏನು ಮಾಡುತ್ತಿದ್ದರು? ಮತಗಟ್ಟೆಯಲ್ಲಿ ಭದ್ರತಾ ಪಡೆಗಳು ನಿಯೋಜನೆ ಮಾಡಿಲ್ಲವೇ ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಕಾಮೆಂಟ್ ಮೂಲಕ ಬರೆದುಕೊಂಡಿದ್ದಾರೆ. ಇಂದು(ಜು.08)ರಂದು ಮಧ್ಯಾಹ್ನ 12.38ಕ್ಕೆ ವಿನೀತ್ ಸಿಂಗ್ ಎಂಬ ಟ್ವಿಟರ್ ಬಳಕೆದಾರರು ಮತಗಟ್ಟೆಯಿಂದ ಮತ ಪೆಟ್ಟಿಗೆಯೊಂದಿಗೆ ಓಡಿಹೋದ ವ್ಯಕ್ತಿಯ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:58 pm, Sat, 8 July 23