ಜೀವನದಲ್ಲಿ ಸ್ನೇಹಿತರೇಕೆ ಬೇಕು? ಆಮೆಯ ವಿಡಿಯೋ ಮೂಲಕ ಸುಂದರವಾಗಿ ವಿವರಿಸಿದ ಆನಂದ್ ಮಹೀಂದ್ರಾ

| Updated By: shivaprasad.hs

Updated on: Apr 09, 2022 | 1:40 PM

Anand Mahindra | Turning Turtle: ಆನಂದ್ ಮಹೀಂದ್ರಾ ಇತ್ತೀಚೆಗೆ ವಿಡಿಯೋ ಮೂಲಕ ಒಂದು ಹೊಸ ದೃಷ್ಟಿಕೋನವನ್ನೇ ತೆರೆದಿಟ್ಟಿದ್ದಾರೆ. ಆಮೆಯೊಂದು ತನ್ನ ಸಹವರ್ತಿಗೆ ಸಹಾಯ ಮಾಡುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಈ ಮೂಲಕ ಗೆಳೆತನದ ಪಾಠ ಹೇಳಿದ್ದಾರೆ ಉದ್ಯಮಿ.

ಜೀವನದಲ್ಲಿ ಸ್ನೇಹಿತರೇಕೆ ಬೇಕು? ಆಮೆಯ ವಿಡಿಯೋ ಮೂಲಕ ಸುಂದರವಾಗಿ ವಿವರಿಸಿದ ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋದ ದೃಶ್ಯ (ಎಡ), ಆನಂದ್ ಮಹೀಂದ್ರಾ (ಬಲ)
Follow us on

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಕಂಪನಿಯ ವಿಚಾರಗಳ ಜತೆಜತೆಗೆ ಅವರು ಹಲವು ಕುತೂಹಲಕರ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವಿಡಿಯೋ, ಫೋಟೋ ಮೊದಲಾದವುಗಳ ಮೂಲಕ ಒಳ್ಳೆಯ ಸಂದೇಶಗಳನ್ನು, ಪ್ರೇರಣಾದಾಯಿ ವಿಚಾರಗಳನ್ನು ಅವರು ಶೇರ್ ಮಾಡುತ್ತಾರೆ. ಇದೇ ಕಾರಣದಿಂದ ಆನಂದ್ ಮಹೀಂದ್ರಾರನ್ನು ಹಿಂಬಾಲಿಸುವ ದೊಡ್ಡ ವರ್ಗವೇ ಇದೆ. ಟ್ವಿಟರ್​ನಲ್ಲಿ ಸುಮಾರು 90 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ ಆನಂದ್ ಮಹೀಂದ್ರಾ. ಅವರು ಇತ್ತೀಚೆಗೆ ವಿಡಿಯೋ ಮೂಲಕ ಒಂದು ಹೊಸ ದೃಷ್ಟಿಕೋನವನ್ನೇ ತೆರೆದಿಟ್ಟಿದ್ದಾರೆ. ಆಮೆಯೊಂದು ತನ್ನ ಸಹವರ್ತಿಗೆ ಸಹಾಯ ಮಾಡುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಆನಂದ್ ಮಹೀಂದ್ರಾ ಹೇಳಿದ್ದೇನು? ಇಲ್ಲಿದೆ ನೋಡಿ.

ಇಂಗ್ಲೀಷ್​ನಲ್ಲಿ ‘ಟರ್ನಿಂಗ್ ಟರ್ಟಲ್’ ಎಂಬ ಮಾತಿದೆ. ಆಮೆಗೆ ರಕ್ಷಕವಾಗಿರುವ ಅದರ ಕವಚವೇ ಅದಕ್ಕೆ ಮುಳುವಾಗುವ ಸಂದರ್ಭ ಅದು. ಒಮ್ಮೆ ಆಮೆ ತಲೆಕೆಳಗಾಗಿ ಸಿಕ್ಕಿಹಾಕಿಕೊಂಡರೆ ಅದಕ್ಕೆ ಪಾರಾಗಲು ಸಾಧ್ಯವಿಲ್ಲ. ಅದು ತಲೆಕೆಳಗಾಗಿ ಒದ್ದಾಡಲು ಆರಂಭಿಸುತ್ತದೆ. ಇದು ಒಂದು ರೀತಿಯ ಅಸಹಾಯಕ ಪರಿಸ್ಥಿತಿ. ಈ ಬಗ್ಗೆಯೇ ವಿಡಿಯೋ ಹಂಚಿಕೊಂಡಿದ್ದಾರೆ ಆನಂದ್ ಮಹೀಂದ್ರಾ.

ಆನಂದ್ ಮಹೀಂದ್ರಾ ಹಂಚಿಕೊಂಡಿರುವ ವಿಡಿಯೋದಲ್ಲಿ ಆಮೆಯೊಂದು ತಲೆಕೆಳಗಾಗಿದೆ. ಆದರೆ ಅದನ್ನು ನೋಡುತ್ತಿದ್ದ ಮತ್ತೊಂದು ಆಮೆ ತಕ್ಷಣ ತನ್ನ ಗೆಳೆಯನ ಸಹಾಯಕ್ಕೆ ಧಾವಿಸಿದೆ. ಅಸಹಾಯಕವಾಗಿದ್ದ ಆಮೆಗೆ ಸಹಾಯ ಮಾಡಿ ಅದು ತಿರುವು ಮುರುವಾಗಲು ಸಹಾಯ ಮಾಡುತ್ತದೆ. ಇದರಿಂದ ಕಷ್ಟದಲ್ಲಿದ್ದ ಆಮೆ ಮೊದಲಿನಂತಾಗುತ್ತದೆ.

ಈ ವಿಡಿಯೋ ಹಂಚಿಕೊಂಡಿದ್ದ ಆನಂದ್ ಮಹೀಂದ್ರಾ, ‘ಟರ್ನಿಂಗ್ ಟರ್ಟಲ್’ ಪದವನ್ನು ಮರುವ್ಯಾಖ್ಯಾನ ಮಾಡಿದ್ದಾರೆ. ‘‘ಈ ವಿಡಿಯೋ ನೋಡಿದ ನಂತರ ‘ಟರ್ನಿಂಗ್ ಟರ್ಟಲ್’ ಪದದ ಅರ್ಥವನ್ನು ಅಗತ್ಯವಿರುವ ಸ್ನೇಹಿತರಿಗೆ ಸಹಾಯ ಮಾಡುವುದು ಎನ್ನಬೇಕು ಎಂದು ಮನಸ್ಸು ಹೇಳುತ್ತಿದೆ. ಜೀವನದ ದೊಡ್ಡ ಉಡುಗೊರೆಗಳಲ್ಲಿ ಒಂದು, ನಾವು ಅಸಹಾಯಕರಾಗಿದ್ದಾಗ ಸಹಾಯ ಮಾಡುವ ಸ್ನೇಹಿತರನ್ನು ಹೊಂದುವುದು’’ ಎಂದು ಬರೆದಿದ್ದಾರೆ ಆನಂದ್ ಮಹೀಂದ್ರಾ.

ಆನಂದ್ ಮಹೀಂದ್ರಾ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಈ ವಿಡಿಯೋವನ್ನು ಮೂಲವಾಗಿ ‘ಅಮೇಜಿಂಗ್ ನೇಚರ್’ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಪ್ರಸ್ತುತ ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಈ ವಿಡಿಯೋ ಸುಮಾರು 8.4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ: ಆನೆ ಮತ್ತು ಸಿಂಹಿಣಿ ಮಧ್ಯೆ ತೀವ್ರ ಕಾಳಗ; ಗೆದ್ದೋರ್ಯಾರು..! ಸೋತವರ್ಯಾರು..! ಇಲ್ಲಿದೆ ವೈರಲ್ ವಿಡಿಯೋ

ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟದ ಮನಮೋಹಕ ವಿಡಿಯೋ ಮೂಲಕ ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ