AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋದ ಛಾವಣಿ ಮೇಲೆ ಮಿನಿ ಗಾರ್ಡನ್​ ಬೆಳೆಸಿದ ಚಾಲಕ; ಕೂಲ್ ಕೂಲ್ ಎಂದ ನೆಟ್ಟಿಗರು

ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ 20,000 ಕ್ಕೂ ಹೆಚ್ಚು ಲೈಕ್ಸ್​ ಸಂಗ್ರಹಿಸಿದ್ದು, ಇನ್ನೂ ಹೆಚ್ಚುತ್ತಿದೆ. ಈ ಹಂಚಿಕೆಯು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ.

ಆಟೋದ ಛಾವಣಿ ಮೇಲೆ ಮಿನಿ ಗಾರ್ಡನ್​ ಬೆಳೆಸಿದ ಚಾಲಕ; ಕೂಲ್ ಕೂಲ್ ಎಂದ ನೆಟ್ಟಿಗರು
ಆಟೋ ಮೇಲೆ ಮಿನಿ ಗಾರ್ಡನ್​
TV9 Web
| Edited By: |

Updated on: Apr 08, 2022 | 9:05 PM

Share

ತಾಪಮಾನವು ಹೆಚ್ಚುತ್ತಿರುವ ಕಾರಣ, ದೇಶಾದ್ಯಂತ ಜನರು ತಮ್ಮನ್ನು ಮತ್ತು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ತಂಪಾಗಿರಿಸಲು ವಿವಿಧ ಮಾರ್ಗಗಳನ್ನು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ (Social Media) ದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪೋಸ್ಟ್‌ಗಳು ಸಹ ನಮಗೆ ಕಾಣಲು ಸಿಗುತ್ತವೆ. ಅವುಗಳ ಮಧ್ಯೆ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿರುವ ಚಿತ್ರವೊಂದು ಈಗ ಜನರ ಗಮನ ಸೆಳೆದಿದೆ. ಫೋಟೋದಲ್ಲಿ ರಿಕ್ಷಾದ ಮೇಲ್ಭಾಗದಲ್ಲಿ ಮಿನಿ ಉದ್ಯಾನವನ್ನು ಕಾಣಬಹುದಾಗಿದೆ. ನಾರ್ವೆಯ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಭಾರತೀಯ ವ್ಯಕ್ತಿ ತನ್ನ ರಿಕ್ಷಾದಲ್ಲಿ ಬಿಸಿಲಲ್ಲಿಯೂ ತಂಪಾಗಿರಲು ಹುಲ್ಲು ಬೆಳೆಸಿದ್ದಾನೆ. ನಿಜವಾಗಿಯೂ ಇದು ಕೂಲ್ ಐಡಿಯಾ! ಎಂದು ಚಿತ್ರವನ್ನು ಪೋಸ್ಟ್ ಮಾಡುವಾಗ ಅವರು ಬರೆದಿದ್ದಾರೆ.

ಚಿತ್ರದಲ್ಲಿ ತನ್ನ ವಾಹನದಲ್ಲಿ ಕುಳಿತಿರುವ ರಿಕ್ಷಾ ಚಾಲಕನನ್ನು ಕಾಣಬಹುದು. ಅದರ ಛಾವಣಿಯು ಚೆನ್ನಾಗಿ ಕತ್ತರಿಸಿದ ಹುಲ್ಲಿನಿಂದ ಆವೃತವಾಗಿದೆ. ಅಷ್ಟೇ ಅಲ್ಲ, ವಾಹನದ ಬದಿಯಲ್ಲಿ ಕೆಲವು ಕುಂಡಗಳಲ್ಲಿ ಗಿಡಗಳನ್ನೂ ಇಡಲಾಗಿದೆ. ಚಿತ್ರವನ್ನು ಯಾವಾಗ ಸೆರೆಹಿಡಿಯಲಾಗಿದೆ, ಅದು ಎಲ್ಲಿಂದ ಬಂದಿದೆ ಅಥವಾ ಆನ್‌ಲೈನ್‌ನಲ್ಲಿ ಯಾವಾಗ ಹಂಚಿಕೊಳ್ಳಲಾಗಿದೆ ಎಂಬುದು ತಿಳಿದಿಲ್ಲವಾದರೂ, ಅದೇ ಚಿತ್ರವನ್ನು ಹೊಂದಿರುವ ಪೋಸ್ಟ್​ನ್ನು 2021 ರಲ್ಲಿ ಅಸ್ಸಾಂ ಅಲರ್ಟ್ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಇನ್ನೋವೇಶನ್,  ಈ ಮನುಷ್ಯ ತನ್ನ ರೈಡ್​ನ್ನು ಶಾಖದಿಂದ ತಪ್ಪಿಸಿಕೊಳ್ಳಲು ತನ್ನ ರಿಕ್ಷಾದಲ್ಲಿ ಹುಲ್ಲು ಬೆಳೆದಿದ್ದಾನೆ ಎಂದು ಅವರು ಚಿತ್ರವನ್ನು ಪೋಸ್ಟ್ ಮಾಡುವಾಗ ಬರೆದಿದ್ದಾರೆ.

ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ 20,000 ಕ್ಕೂ ಹೆಚ್ಚು ಲೈಕ್ಸ್​ ಸಂಗ್ರಹಿಸಿದ್ದು, ಇನ್ನೂ ಹೆಚ್ಚುತ್ತಿದೆ. ಈ ಹಂಚಿಕೆಯು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ. ಅದ್ಭುತ ನಿಮ್ಮ ಆವಿಷ್ಕಾರ ಮತ್ತು ಅಂತಹ ಆರೋಗ್ಯಕರ ಸಸ್ಯಗಳನ್ನು ಬೆಳೆಸುವ ನಿಮ್ಮ ಕೌಶಲ್ಯಕ್ಕೆ ಸೆಲ್ಯೂಟ್ ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಇದು ವಾಸ್ತವವಾಗಿ ಬಹಳ ನವೀನವಾಗಿದೆ, ಇತರ ರಿಕ್ಷಾ ಚಾಲಕರು ಸಹ ಈ ತರ ಮಾಡಲಿ. ತಾಪಮಾನವು ಈಗಾಗಲೇ 42 ಡಿಗ್ರಿಗಿಂತ ಹೆಚ್ಚಾಗಿದೆ ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ಬೇಸಿಗೆಯಲ್ಲಿ ತಂಪಾಗಿರಲು ಒಂದು ಹೊಸ ಕಲ್ಪನೆ. ಆ ಸಾಲುಗಳಲ್ಲಿ ಯೋಚಿಸಿದ್ದಕ್ಕಾಗಿ ನಿಮಗೆ ಶ್ಲಾಘನೆ. ಗ್ರಾಹಕರನ್ನು ಆಕರ್ಷಿಸಲು ಉತ್ತಮ ಮಾರ್ಗವಾಗಿದೆ, ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ;

Viral Video: ಚುರಾಕೆ ದಿಲ್​ ಮೆರಾ ಹಾಡಿಗೆ ಖ್ಯಾತ ಹಾಲಿವುಡ್ ನಟಿ ಡ್ರ್ಯೂ ಬ್ಯಾರಿಮೋರ್ ಏನು ಮಾಡಿದಳು ನೋಡಿ

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ; ಜಾಗರೂಕರಾಗಿರಿ ಎಂದ ಕೇಂದ್ರ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ