Anant Ambani: 2 ದೇವಾಲಯಗಳಿಗೆ 5ಕೋಟಿ ದೇಣಿಗೆ ನೀಡಿದ ಮುಖೇಶ್ ಅಂಬಾನಿಯ ಕಿರಿ ಪುತ್ರ

ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಮಧುಮಗ ಅನಂತ್ ಅಂಬಾನಿ ಎರಡು ದೇವಾಲಯಗಳಿಗೆ ಭೇಟಿ ನೀಡಿದ್ದು, ಒಂದೊಂದು ದೇವಸ್ಥಾನಕ್ಕೂ ತಲಾ 2,51,00,000 ರೂ. ಅಂದರೆ ಒಟ್ಟು 5 ಕೋಟಿ ರೂ ದೇಣಿಗೆ ನೀಡಿದ್ದಾರೆ.

Anant Ambani: 2 ದೇವಾಲಯಗಳಿಗೆ 5ಕೋಟಿ ದೇಣಿಗೆ ನೀಡಿದ ಮುಖೇಶ್ ಅಂಬಾನಿಯ ಕಿರಿ ಪುತ್ರ
2 ದೇವಾಲಯಗಳಿಗೆ 5ಕೋಟಿ ದೇಣಿಗೆ ನೀಡಿದ ಅನಂತ್​ ಅಂಬಾನಿ

Updated on: Apr 18, 2024 | 12:33 PM

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಇತ್ತೀಚಿಗಷ್ಟೇ ಭಾರತದ ಪ್ರಮುಖ ಎರಡು ದೇವಾಲಯಗಳಿಗೆ ಭೇಟಿ ನೀಡಿದ್ದು, ಒಂದೊಂದು ದೇವಸ್ಥಾನಕ್ಕೂ ತಲಾ 2,51,00,000 ರೂ. ಅಂದರೆ ಒಟ್ಟು 5 ಕೋಟಿ ರೂ ದೇಣಿಗೆ ನೀಡಿದ್ದಾರೆ. ಹಿಂದೂ ಧರ್ಮ ಹಾಗೂ ದೇವಾಲಯದ ಬಗ್ಗೆ ಅಪಾರ ಗೌರವ ಹೊಂದಿರುವ ಅಂಬಾನಿ ಕುಟುಂಬ ಆಗಾಗ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ವರ್ಷ, ಅಂಬಾನಿ ಕುಟುಂಬವು ಗುಜರಾತ್‌ನ ಜಾಮ್‌ನಗರದಲ್ಲಿ 14 ಹೊಸ ದೇವಾಲಯಗಳನ್ನು ನಿರ್ಮಿಸಲು ಅನುಕೂಲ ಮಾಡಿಕೊಟ್ಟಿದೆ.

ಇದೀಗ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಮಧುಮಗ ಅನಂತ್ ಅಂಬಾನಿ ಚೈತ್ರ ನವರಾತ್ರಿಯ ಅಷ್ಟಮಿಯ ಸಂದರ್ಭದಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಾಲಯ ಮತ್ತು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಒಂದೊಂದು ದೇವಸ್ಥಾನಕ್ಕೂ ತಲಾ 2,51,00,000 ರೂ. ಅಂದರೆ ಒಟ್ಟು 5 ಕೋಟಿ ರೂ ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ:ದೀಪಿಕಾ ಪಡುಕೋಣೆಯೊಂದಿಗೆ 8ಕೋಟಿಯ ವ್ಯವಹಾರದ ಒಪ್ಪಂದಕ್ಕೆ ಸಹಿ ಹಾಕಿದ ಅಂಬಾನಿ ಪುತ್ರಿ

ಇತ್ತೀಚೆಗಷ್ಟೇ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮವು ಜಾಮ್‌ನಗರದಲ್ಲಿ ಬಹಳ ವಿಜೃಂಭಣೆಯಿಂದ ನಡೆದಿತ್ತು. ಜೊತೆಗೆ ಇವರ ಮದುವೆ ಜುಲೈನಲ್ಲಿ ನಡೆಯಲಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us