- Kannada News Photo gallery Deepika Padukones beauty brand makes offline debut, ties up with Reliance Retails Tira
ದೀಪಿಕಾ ಪಡುಕೋಣೆಯೊಂದಿಗೆ 8ಕೋಟಿಯ ವ್ಯವಹಾರದ ಒಪ್ಪಂದಕ್ಕೆ ಸಹಿ ಹಾಕಿದ ಅಂಬಾನಿ ಪುತ್ರಿ
ಇತ್ತೀಚಿಗಷ್ಟೇ ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಸ್ಕಿನ್ ಕೇರ್ ಬ್ರ್ಯಾಂಡ್ 82°E ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಸುಲಭವಾಗಿ ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ 82°E ಬ್ರಾಂಡ್ನ ಉತ್ಪನ್ನವನ್ನು ಟಿರಾ ಮೂಲಕ ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ.
Updated on:Apr 17, 2024 | 5:14 PM

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಪುತ್ರಿ ಇತ್ತೀಚೆಗಷ್ಟೇ ಹೊಸ ವ್ಯವಹಾರಕ್ಕಾಗಿ ದೀಪಿಕಾ ಪಡುಕೋಣೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಅತ್ಯುತ್ತಮ ಕಾರ್ಯನಿರ್ವಹಣೆಯ ಅಂಗಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ರಿಟೇಲ್ ಕಂಪನಿಯ ಆಡಳಿತವನ್ನು ಆಗಸ್ಟ್ 2022 ರಲ್ಲಿ ಇಶಾ ಅಂಬಾನಿಗೆ ಹಸ್ತಾಂತರಿಸಲಾಗಿದೆ.

ಪ್ರಸ್ತುತ ರಿಲಯನ್ಸ್ ರಿಟೇಲ್ ಕಳೆದ ವರ್ಷದಿಂದ ಹಲವಾರು ಪ್ರಮುಖ ಬ್ಯೂಟಿ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಇತ್ತೀಚಿಗೆ ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಸ್ಕಿನ್ ಕೇರ್ ಬ್ರ್ಯಾಂಡ್ 82°E ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಸುಲಭವಾಗಿ ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ 82°E ಬ್ರಾಂಡ್ನ ಉತ್ಪನ್ನವನ್ನು ಟಿರಾ ಮೂಲಕ ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಖರೀದಿಸಬಹುದು.

ಈ ಕ್ರಮದೊಂದಿಗೆ, ದೀಪಿಕಾ ಪಡುಕೋಣೆ ಅವರ ಬ್ರ್ಯಾಂಡ್ ಟಿರಾ ವಿವಿಧ ಮಾರುಕಟ್ಟೆಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಎಲ್ಲೆಡೆ ಭಾರತೀಯರಿಗೂ ಸುಲಭವಾಗಿ ತಲುಪುವ ಗುರಿಯನ್ನು ಹೊಂದಿದೆ.

ಪ್ರಮುಖ ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ ಕರೀನಾ ಕಪೂರ್, ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಈ ತಿರಾ ಬ್ಯೂಟಿ ಬ್ರಾಂಡ್ನ ಅಂಬಾಸಿಡರ್‌ಗಳಾಗಿದ್ದಾರೆ.
Published On - 5:13 pm, Wed, 17 April 24



















