Anant Ambani Birthday: ಅಂಬಾನಿ ಕುಟುಂಬದ ಕಿರಿಯ ಕುಡಿ ಅನಂತ್ ಜನ್ಮದಿನ

30th Birthday of Anant Ambani: ಮುಕೇಶ್ ಅಂಬಾನಿ ಅವರ ಮೂರನೇ ಹಾಗೂ ಕೊನೆಯ ಮಗ ಅನಂತ್ ಅಂಬಾನಿ ಅವರ ಜನ್ಮದಿನ ಇಂದು ಏಪ್ರಿಲ್ 10ರಂದು ಇದೆ. 1995ರಲ್ಲಿ ಹುಟ್ಟಿದ ಅನಂತ್ ಇಂದು 30ನೇ ವಯಸ್ಸಿಗೆ ಅಡಿ ಇಟ್ಟಿದ್ದಾರೆ. ಗುಜರಾತ್​ನ ಜಾಮ್​ನಗರದಲ್ಲಿ ಅವರ ಜನ್ಮದಿನ ಕಾರ್ಯಕ್ರಮ ನಡೆಯಲಿದೆ. ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿರುವ ಅನಂತ್, ರಿಲಾಯನ್ಸ್ ನ್ಯೂ ಎನರ್ಜಿ ಬಿಸಿನೆಸ್ ಅನ್ನು ನೋಡಿಕೊಳ್ಳುತ್ತಾರೆ. ವನತಾರ ಯೋಜನೆ ಅವರ ಮನಸಿಗೆ ಪ್ರಿಯವಾದುದು. ರಾಧಿಕಾ ಮರ್ಚಂಟ್ ಜೊತೆ ನಿಶ್ಚಿತಾರ್ಥ ಆಗಿದ್ದು, ಜುಲೈನಲ್ಲಿ ಮದುವೆ ಮಹೋತ್ಸವ ನಡೆಯಲಿದೆ.

Anant Ambani Birthday: ಅಂಬಾನಿ ಕುಟುಂಬದ ಕಿರಿಯ ಕುಡಿ ಅನಂತ್ ಜನ್ಮದಿನ
ಅನಂತ್ ಅಂಬಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 10, 2024 | 11:02 AM

ಏಪ್ರಿಲ್ 10: ವಿವಾಹ ಪೂರ್ವ ಕಾರ್ಯಕ್ರಮಕ್ಕೆ ವಿವಿಧ ದೇಶಗಳ ಪ್ರಧಾನಿಗಳು, ಜಾಗತಿಕ ಉದ್ಯಮಪತಿಗಳು ಸೇರಿದಂತೆ ಘಟಾನುಘಟಿಗಳೇ ಬಂದಿದ್ದ ಅನಂತ್ ಅಂಬಾನಿ ಅವರ ಜನ್ಮದಿನ (Anant Ambani birthday) ಇಂದು. ಹೆಸರಾಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಅವರಿಗೆ ಈಗ ವಯಸ್ಸು 29 ವರ್ಷ ಪೂರ್ಣಗೊಂಡು 30ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಗುಜರಾತ್​ನ ಜಾಮ್​ನಗರ್​ನಲ್ಲಿ ಜನ್ಮದಿನದ ಕಾರ್ಯಕ್ರಮ ನಡೆಯಲಿದ್ದು ಸಾಕಷ್ಟು ಸೆಲಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ. ದಢೂತಿ ದೇಹ ಹೊಂದಿದ್ದ ಅವರು ಅಚ್ಚರಿ ರೀತಿಯಲ್ಲಿ ಮೈ ಕರಗಿಸಿ ಈಗ ಹ್ಯಾಂಡ್ಸಮ್ ಆಗಿದ್ದಾರೆ. ಪ್ರಾಣಿಪ್ರಿಯರಾಗಿ ಹೆಸರುವಾಸಿಯಾಗಿರುವ ಅವರು ರಿಲಾಯನ್ಸ್​ನ ನ್ಯೂ ಎನರ್ಜಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ.

ಅನಂತ್ ಅಂಬಾನಿ ರಿಲಾಯನ್ಸ್ ಗ್ರೂಪ್​ನ ವಿವಿಧ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿದ್ದಾರೆ. ಜಿಯೋ ಪ್ಲಾಟ್​ಫಾರ್ಮ್ಸ್ ಮತ್ತು ರಿಲಾಯನ್ಸ್ ರೀಟೇಲ್ ವೆಂಚರ್ಸ್ ಸಂಸ್ಥೆಗಳ ಮಂಡಳಿ ಸದಸ್ಯರಾಗಿದ್ದಾರೆ. ಆರ್​ಐಎಲ್ ಮತ್ತು ರಿಲಾಯನ್ಸ್ ಫೌಂಡೇಶನ್​ನ ಮಂಡಳಿ ನಿರ್ದೇಶಕರಾಗಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್​ನ ನಿರ್ದೇಶಕರ ಮಂಡಳಿಗೆ ಅನಂತ್ ಮಾತ್ರವಲ್ಲದೇ ಅವರ ಅಣ್ಣ ಮತ್ತು ಅಕ್ಕರಾದ ಆಕಾಶ್ ಮತ್ತು ಇಶಾ ಅಂಬಾನಿಯೂ 2023ರ ಆಗಸ್ಟ್​​ನಲ್ಲಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಮಾನವ ವರ್ಸಸ್ ಯಂತ್ರ: ಇನ್ನೊಂದೇ ವರ್ಷದಲ್ಲಿ ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಮೀರಿಸುತ್ತೆ ಎಐ: ಇದು ಇಲಾನ್ ಮಸ್ಕ್ ಭವಿಷ್ಯ

ಅಂಬಾನಿ ಕುಟುಂಬದ ಮೂಲ ಗುಜರಾತ್ ಆದರೂ ನೆಲಸಿರುವುದು ಮುಂಬೈನಲ್ಲಿ. ಇಲ್ಲಿಯೇ ಹುಟ್ಟಿದ ಅನಂತ್ ಅಂಬಾನಿ ಅಮೆರಿಕದ ಖ್ಯಾತ ಬ್ರೌನ್ ಯೂನಿವರ್ಸಿಟಿಯ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಗುಜರಾತ್​ನ ಜಾಮ್​ನಗರದಲ್ಲಿ ರಿಲಾಯನ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ನವೀಕರಣ ಇಂಧನದ ವ್ಯವಹಾರದ ಚುಕ್ಕಾಣಿ ಹಿಡಿದಿದ್ದಾರೆ.

ಪ್ರಾಣಿಪ್ರಿಯರಾಗಿರುವ ಅವರು ಗುಜರಾತ್​ನ ಜಾಮ್​ನಗರದಲ್ಲಿ 3,000 ಎಕರೆ ಪ್ರದೇಶದಲ್ಲಿ ವನತಾರ ಎಂಬ ತಾಣ ನಿರ್ಮಿಸುತ್ತಿದ್ದಾರೆ. ಇದರಲ್ಲಿ ಗಾಯಗೊಂಡ ಮತ್ತು ಅಸಹಾಯಕಗೊಂಡ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪಾಲನೆ ಇತ್ಯಾದಿ ವ್ಯವಸ್ಥೆ ಇರುತ್ತದೆ.

ಇದನ್ನೂ ಓದಿ: ಕೋಲಾರದಲ್ಲಿ ಟಾಟಾ ನಿರ್ಮಿತ ಮಿಲಿಟರಿ ಸೆಟಿಲೈಟ್ ಅಮೆರಿಕದ ಸ್ಪೇಸ್​ಎಕ್ಸ್ ರಾಕೆಟ್ ಮುಖಾಂತರ ಭೂಕಕ್ಷೆಗೆ

ತಮ್ಮ ಕುಟುಂಬದ ಜೊತೆ ಬಹಳ ಎಮೋಶನಲ್ ಆಗಿ ಗುರುತಿಸಿಕೊಂಡಿರುವ ಅನಂತ್ ಅಂಬಾನಿ ಅವರ ವಿವಾಹ ನಿಶ್ಚಯ ರಾಧಿಕಾ ಮರ್ಚಂಟ್ ಜೊತೆಗೆ ಆಗಿದೆ. ಖ್ಯಾತ ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್ ಅವರ ಪುತ್ರಿಯನ್ನು ವರಿಸಲಿದ್ದಾರೆ. ರಾಜಸ್ಥಾನದ ನಾಥದ್ವಾರ ಎಂಬಲ್ಲಿರುವ ಶ್ರೀನಾಥ್​ಜಿ ಮಂದಿರದಲ್ಲಿ 2022ರ ಡಿಸೆಂಬರ್​ನಲ್ಲಿ ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ಈ ವರ್ಷ ಜುಲೈ ತಿಂಗಳಲ್ಲಿ ವಿವಾಹ ಮಹೋತ್ಸವ ಜರುಗಲಿದೆ. ಈ ವಿವಾಹಕ್ಕೆ ಮುನ್ನ ಮೂರು ದಿನಗಳ ಕಾಲ ಪ್ರೀವೆಡ್ಡಿಂಗ್ ಕಾರ್ಯಕ್ರಮ ನಡೆದಿತ್ತು. ಮಾರ್ಕ್ ಜುಕರ್ಬರ್ಗ್, ಬಿಲ್ ಗೇಟ್ಸ್, ಇವಾಂಕಾ ಟ್ರಂಪ್ ಇತ್ಯಾದಿ ಸೆಲಬ್ರಿಟಿಗಳು, ಉದ್ಯಮಿಗಳು ಪಾಲ್ಗೊಂಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ