Viral Video: ‘ಮೂಕ ಪ್ರಾಣಿಗಳ ಸೇವೆಯೇ ನನಗೆ ದೇವರ ಸೇವೆ’: ಅನಂತ್​​ ಅಂಬಾನಿ

ಮಾಧ್ಯಮದ ಮುಂದೆ ಮಾತನಾಡಿದ ಅನಂತ್​​ ಅಂಬಾನಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. "ಮೂಕ ಪ್ರಾಣಿಗಳ ಸೇವೆಯೇ ನನಗೆ ದೇವರ ಸೇವೆ. ನಾನು ಪ್ರಾಣಿಗಳಲ್ಲಿ ದೇವರನ್ನು ನೋಡುತ್ತೇನೆ. ಅದಕ್ಕಾಗಿಯೇ ವಂತರಾ ಯೋಜನೆಯ ಬಗ್ಗೆ ನಿರ್ಧರಿದ್ದೆ. ಈ ಮೂಲಕ ತನ್ನಿಂದ ಆಗುವಷ್ಟು ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೀನಿ" ಎಂದು ಹೇಳಿದರು.

Viral Video: ಮೂಕ ಪ್ರಾಣಿಗಳ ಸೇವೆಯೇ ನನಗೆ ದೇವರ ಸೇವೆ: ಅನಂತ್​​ ಅಂಬಾನಿ
Anant Ambani

Updated on: Feb 28, 2024 | 5:47 PM

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಹೊಸ ಯೋಜನೆಯೊಂದಕ್ಕೆ ಕೈ ಹಾಕಿದ್ದಾರೆ. ಫೆಬ್ರುವರಿ 26 ರಂದು ಭಾರತ ಮತ್ತು ವಿದೇಶಗಳಲ್ಲಿ ಗಾಯಗೊಂಡ, ಕಡೆಗಣನೆಗೆ ಒಳಗಾದ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿಗೆ ಒತ್ತು ನೀಡುವ ಉಪಕ್ರಮವಾದ ವಂತರಾ (ಸ್ಟಾರ್ ಆಫ್ ದಿ ಫಾರೆಸ್ಟ್) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಅನಂತ್​​ ಘೋಷಿಸಿದರು.

ಈ ವೇಳೆ ಮಾಧ್ಯಮದ ಮುಂದೆ ಮಾತನಾಡಿದ ಅನಂತ್​​ ಅಂಬಾನಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. “ಮೂಕ ಪ್ರಾಣಿಗಳ ಸೇವೆಯೇ ನನಗೆ ದೇವರ ಸೇವೆ. ನಾನು ಪ್ರಾಣಿಗಳಲ್ಲಿ ದೇವರನ್ನು ನೋಡುತ್ತೇನೆ. ಅದಕ್ಕಾಗಿಯೇ ವಂತರಾ ಯೋಜನೆಯ ನಿರ್ಧರಿದ್ದೆ. ಈ ಮೂಲಕ ತನ್ನಿಂದ ಆಗುವಷ್ಟು ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೀನಿ” ಎಂದು ಹೇಳಿದರು.

ಅನಂತ್ ಅಂಬಾನಿ ಮದುವೆ ಸಂಭ್ರಮ ಶುರುವಾಗಿದೆ. ವರದಿಗಳ ಪ್ರಕಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಜುಲೈ 12ರಂದು ಸಪ್ತಪದಿ ತುಳಿಯಲಿದ್ದಾರೆ. ಅಂಬಾನಿ ಅವರ ತವರೂರಾದ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3ರ ವರೆಗೆ ವಿವಾಹ ಪೂರ್ವ ಸಂಭ್ರಮಾರಣೆ ನಡೆಯಲಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭಕ್ಕೆ ತಯಾರಾಗುತ್ತಿದೆ 2500 ಬಗೆಯ ಖಾದ್ಯಗಳು

ಗುಜರಾತ್‌ನ ರಿಲಯನ್ಸ್‌ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ಗ್ರೀನ್ ಬೆಲ್ಟ್‌ನಲ್ಲಿ 3000 ಎಕರೆಗಳಷ್ಟು ವಿಸ್ತಾರವಾಗಿರುವ ‘ವಂತರಾ’ ಜಾಗತಿಕವಾಗಿ ಸಂರಕ್ಷಣಾ ಪ್ರಯತ್ನಗಳಿಗೆ ಪ್ರಮುಖ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ. ಪ್ರಾಣಿಗಳ ಆರೈಕೆಯಲ್ಲಿ ಪ್ರಮುಖ ತಜ್ಞರೊಂದಿಗೆ ಅಂದರೆ ಪಶುವೈದ್ಯಕೀಯ ಪದವಿಯನ್ನು ಮುಗಿಸಿದ ಯುವ ಪದವೀಧರೊಂದಿಗೆ ಈ ಯೋಜನೆಯನ್ನು ತೊಡಗಿಸಿಕೊಳ್ಳಲಿದ್ದಾರೆ ಅನಂತ್​ ಅಂಬಾನಿ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Wed, 28 February 24

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us