AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣಬೀರ್ ಯಶಸ್ಸಿಗೆ ಮುಕೇಶ್ ಅಂಬಾನಿ ಹೇಳಿದ್ದ ಕಿವಿಮಾತೇ ಕಾರಣ; ಏನದು?

ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಆಧರಿಸಿ ರಣಬೀರ್ ಕಪೂರ್ ಅವರಿಗೆ ಈ ಅವಾರ್ಡ್ ನೀಡಲಾಗಿದೆ. ಅವಾರ್ಡ್ ಸ್ವೀಕರಿಸಿ ಅವರು ಮಾತನಾಡಿದ್ದಾರೆ. ಮುಕೇಶ್ ಅಂಬಾನಿ ಹೇಳಿದ್ದ ಒಂದು ಕಿವಿಮಾತನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ಇದರಿಂದ ಅವರಿಗೆ ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ರಣಬೀರ್ ಯಶಸ್ಸಿಗೆ ಮುಕೇಶ್ ಅಂಬಾನಿ ಹೇಳಿದ್ದ ಕಿವಿಮಾತೇ ಕಾರಣ; ಏನದು?
ರಣಬೀರ್-ಅಂಬಾನಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 16, 2024 | 12:34 PM

Share

ನಟ ರಣಬೀರ್ ಕಪೂರ್ ಅವರಿಗೆ ‘ಅನಿಮಲ್’ ಚಿತ್ರದಿಂದ (Animal Movie) ದೊಡ್ಡ ಗೆಲುವು ಸಿಕ್ಕಿದೆ. ಈ ಚಿತ್ರ ಕಳೆದ ವರ್ಷ ರಿಲೀಸ್ ಆಗಿದೆ. ಅವರಿಗೆ ಇತ್ತೀಚೆಗೆ ‘ಮಹಾರಾಷ್ಟ್ರಿಯನ್ ಆಫ್​ ದಿ ಇಯರ್’ ಅವಾರ್ಡ್ ಸಿಕ್ಕಿದೆ. ಇದನ್ನು ಅವರು ಖುಷಿಯಿಂದ ಸ್ವೀಕರಿಸಿದ್ದಾರೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಆಧರಿಸಿ ಈ ಅವಾರ್ಡ್ ನೀಡಲಾಗಿದೆ. ಅವಾರ್ಡ್ ಸ್ವೀಕರಿಸಿ ಅವರು ಮಾತನಾಡಿದ್ದಾರೆ. ಮುಕೇಶ್ ಅಂಬಾನಿ ಹೇಳಿದ್ದ ಒಂದು ಕಿವಿಮಾತನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

ಮುಕೇಶ್ ಅಂಬಾನಿ ದೊಡ್ಡ ಉದ್ಯಮಿ. ಅವರು ಒಮ್ಮೆ ರಣಬೀರ್ ಕಪೂರ್ ಅವರಿಗೆ ಸಿಕ್ಕಿದ್ದರು. ಈ ವೇಳೆ ಅವರು ಕಿವಿಮಾತು ಹೇಳಿದ್ದರು. ಅದನ್ನು ರಣಬೀರ್ ಪಾಲಿಸಿದ್ದಾರೆ. ‘ಅರ್ಥಪೂರ್ಣ ಕೆಲಸವನ್ನು ಮಾಡುವುದನ್ನು ಮುಂದುವರಿಸುವುದು ನನ್ನ ಮೊದಲ ಗುರಿಯಾಗಿದೆ. ನಾನು ಮುಕೇಶ್ (ಅಂಬಾನಿ) ಭಾಯ್ ಅವರಿಂದ ಸಾಕಷ್ಟು ಸಲಹೆಗಳನ್ನು ತೆಗೆದುಕೊಂಡಿದ್ದೇನೆ. ತಲೆ ತಗ್ಗಿಸಿ ಕೆಲಸ ಮಾಡಿ. ಯಶಸ್ಸನ್ನು ನಿಮ್ಮ ತಲೆಗೆ ಮತ್ತು ವೈಫಲ್ಯವನ್ನು ನಿಮ್ಮ ಹೃದಯಕ್ಕೆ ತೆಗೆದುಕೊಳ್ಳಬೇಡಿ ಎಂದು ಅವರು ನನಗೆ ಹೇಳಿದ್ದರು’ ಎಂದಿದ್ದಾರೆ ರಣಬೀರ್ ಕಪೂರ್.

ಹಿರಿಯ ನಟ ಜೀತೇಂದ್ರ ಅವರು ರಣಬೀರ್ ಕಪೂರ್​ಗೆ ಅವಾರ್ಡ್ ನೀಡಿದ್ದಾರೆ. ಅವಾರ್ಡ್ ನೀಡುವಾಗ ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಬಗ್ಗೆ ಜಿತೇಂದ್ರ ಮಾತನಾಡಿದ್ದಾರೆ. ‘ನನ್ನ ಆತ್ಮೀಯ ಸ್ನೇಹಿತನ ಮಗ ರಣಬೀರ್‌ಗೆ ಈ ಅವಾರ್ಡ್​ನ ನಾನು ನೀಡುತ್ತಿದ್ದೇನೆ. ಹೀಗಾಗಿ ನಾನು ಇಲ್ಲಿ ಏನು ಹೇಳಬೇಕು ಎಂದು ನಿನ್ನೆಯಿಂದ ತಯಾರಿ ನಡೆಸುತ್ತಿದ್ದೇನೆ. ನನ್ನ ಹೆಂಡತಿ, ನನ್ನ ಮಗಳು, ನನ್ನ ಮಗ ನನಗೆ ಮಾರ್ಗದರ್ಶನ ನೀಡಿದ್ದಾರೆ. ಈ ಪ್ರಶಸ್ತಿಯು ನನ್ನ ಆತ್ಮೀಯ ಸ್ನೇಹಿತ ರಿಷಿಯ ಮಗನಿಗೆ ಸಂದಿರುವುದು ನನಗೆ ತುಂಬಾ ಖುಷಿ ನೀಡಿದೆ. ರಣಬೀರ್ ತಮ್ಮ ಸ್ವಂತ ಪರಿಶ್ರಮದಿಂದ ಈ ಹಂತಕ್ಕೆ ತಲುಪಿದ್ದಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬನ್ಸಾಲಿ ಹೊಸ ಚಿತ್ರಕ್ಕೆ ರಣಬೀರ್ ಕಪೂರ್ ಹೀರೋ; ಶೂಟಿಂಗ್​ಗೂ ಮೊದಲೇ ಷರತ್ತುಗಳ ಪಟ್ಟಿ ಇಟ್ಟ ನಟ

ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 1ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಆದರೆ, ಕೆಲವರು ಸಿನಿಮಾ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಈಗ ರಣಬೀರ್ ಕಪೂರ್ ಅವರು ‘ಲವ್ ಆ್ಯಂಡ್ ವಾರ್’ ಚಿತ್ರದ ಮೂಲಕ ಅವರು ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಆಲಿಯಾ ಭಟ್​​ಗೆ ಜೊತೆಯಾಗಿದ್ದಾರೆ. ಈ ಸಿನಿಮಾಗೆ ಸಂಜಯ್ ಲೀಲಾ ಬನ್ಸಾಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ.  ಇದಲ್ಲದೆ ರಾಮಾಯಣ ಸಿನಿಮಾದಲ್ಲೂ ರಣಬೀರ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ