ಮದ್ಯ ಪ್ರಿಯರಿಗಾಗಿ ಮಾರುಕಟ್ಟೆಯಲ್ಲಿ ಕೆಲವು ಬ್ರಾಂಡ್ ಗಳೊಂದಿಗೆ ಹಲವಾರು ರೀತಿಯ ಆಲ್ಕೋಹಾಲ್ ಯುಕ್ತ ಪಾನೀಯಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಬ್ರಾಂಡಿ, ವಿಸ್ಕಿ, ಸ್ಕಾಚ್, ವೋಡ್ಕಾ, ರಮ್, ಬಿಯರ್, ವೈನ್ ಗಳಲ್ಲಿ ಕೆಲವರು ಒಂದದಾದರೂ ಟೇಸ್ಟ್ ನೋಡಿರುತ್ತಾರೆ. ಆದರೆ ಬಹುತೇಕರು ಈ ವೈನ್ ಅನ್ನು ಇಷ್ಟ ಪಡುವುದೇ ಹೆಚ್ಚು. ಪುರುಷರಷ್ಟೇ ಅಲ್ಲದೇ ಮಹಿಳೆಯರು ಕೂಡ ಇಷ್ಟ ಪಟ್ಟು ಸೇವಿಸುವ ಈ ವೈನ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹೀಗಾಗಿ ವೈನ್ ಪ್ರಿಯರಂತೂ ವರ್ಷಗಳಷ್ಟು ಹಳೆಯ ವೈನ್ ಸಿಕ್ಕರಂತೂ ಬಿಡುವುದೇ ಇಲ್ಲ, ಒಂದು ತೊಟ್ಟು ಸಿಕ್ಕರೆ ಸಾಕು ಎನ್ನುತ್ತಾರೆ. ಆದರೆ ಇದೀಗ ಶತಕದ ವೈನ್ ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದ್ದು ವೈನ್ ಪ್ರಿಯರ ಗಮನ ಸೆಳೆಯುತ್ತಿವೆ.
ಈ ವೈನ್ ಅನ್ನು ಮಡಿಕೆಯಲ್ಲಿ ಈ ವೈನ್ ಅನ್ನು ತಯಾರಿಸಲಾಗಿದ್ದು, ಹಳೆಯ ವಿಧಾನದಲ್ಲಿಯೇ ತಯಾರಿಸಲಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೀಗಾಗಿ ಗಾಳಿಯಾಡದಂತೆ ಎಲೆಗಳಿಂದ ಆ ಮಡಿಕೆಯ ಬಾಯಿ ಮುಚ್ಚಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮೊದಲು ಬ್ಯಾರೆಲ್ ಕವರ್ ಅನ್ನು ಹರಿತವಾದ ಚಾಕುವಿನಂತಹ ಉಪಕರಣದಿಂದ ತೆಗೆಯುತ್ತಿದ್ದಾರೆ. ಎಲೆಗಳಿಂದ ಮುಚ್ಚಲಾದ ಈ ಮಡಿಕೆಯ ಬಾಯಿಯನ್ನು ತೆರೆಯಲಾಗಿದ್ದು, ಕೋಕ್ಲಿಯರ್ ಸಹಾಯದಿಂದ ವೈನ್ ಅನ್ನು ತೆಗೆದು ತೋರಿಸಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:
‘indianfoodierocks’ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈಗಾಗಲೇ ಈ ವಿಡಿಯೋ 10.6 ಮಿಲಿಯನ್ ಕ್ಕೂ ಅಧಿಕ ವ್ಯೂಸ್ ಕಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡಿದ್ದು, ಬಳಕೆದಾರರೊಬ್ಬರು, “ಇದು 100 ವರ್ಷ ಹಳೆಯದು ಎಂದು ಅವನಿಗೆ ಹೇಗೆ ಗೊತ್ತು?” ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು.”ಒಳಗೆ ಶೂನ್ಯ ಗಾಳಿಯಿಂದ ಮುಚ್ಚಲಾಗಿದೆ ಎಂದರೆ 100 ವರ್ಷಗಳ ನಂತರವೂ ನೀವು ವೈನ್ ಕುಡಿಯಬಹುದು” ಎಂದಿದ್ದಾರೆ. ಇನ್ನೊಬ್ಬರು, “ಒಂದು ಗುಟುಕು ಸ್ವರ್ಗದ ರುಚಿ, ಇನ್ನೊಂದು ಗುಟುಕು ನಿಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Tue, 6 February 24