ಆಹ್ವಾನವಿಲ್ಲದೆ ಖಾಸಗಿ ಕಾರ್ಯಕ್ರಮಗಳಿಗೆ ಹೋಗಬೇಡಿ, ಫ್ರೀ ಊಟ ಎಂದು ಹೋದ್ರೆ ಜೈಲೂಟ ಗ್ಯಾರಂಟಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 01, 2024 | 9:54 AM

ಕೆಲವೊಬ್ರಿಗೆ ತಮ್ಮ ಸ್ನೇಹಿತರ ಜೊತೆ ಸೇರಿ   ಆಹ್ವಾನವಿಲ್ಲದಿರುವ  ಮದುವೆ, ಪಾರ್ಟಿ  ಇತ್ಯಾದಿ ಖಾಸಗಿ  ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡ್ಕೊಂಡು ಬರುವ  ಕ್ರೇಜ್ ಇರುತ್ತೆ. ಆದ್ರೆ ಈ ರೀತಿ ಆಹ್ವಾನವಿಲ್ಲದಿರುವ  ಕಾರ್ಯಕ್ರಮಗಳಿಗೆ ಹೋಗೋದು ಕಾನೂನಿನ ಪ್ರಕಾರ ಅಪರಾಧ ಎಂಬ ವಿಷ್ಯ ನಿಮ್ಗೆ ಗೊತ್ತಿದ್ಯಾ? ಹೌದು ಈ ರೀತಿ ಫ್ರೀ ಊಟ ಮಾಡೋಕೆ ಹೋಗಿ ನೀವೇನಾದ್ರೂ ಸಿಕ್ಕಿ ಬಿದ್ರೆ ನಿಮ್ಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದು. ಈ ಕುರಿತ ಮಾಹಿತಿಯನ್ನು  ವಕೀಲೆ ಬಿ.ವಿ ಸ್ವಾತಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ

ಆಹ್ವಾನವಿಲ್ಲದೆ ಖಾಸಗಿ ಕಾರ್ಯಕ್ರಮಗಳಿಗೆ ಹೋಗಬೇಡಿ, ಫ್ರೀ ಊಟ ಎಂದು ಹೋದ್ರೆ ಜೈಲೂಟ ಗ್ಯಾರಂಟಿ
Follow us on

ಈ ಕೆಲವು ತರ್ಲೆ ಯುವಕರು,  ಹೇ ಅಲ್ಲೇನೋ ಮದುವೆ ಫಂಕ್ಷನ್ ನಡಿತಿದೆ, ಹೋಟೆಲಿಗೆ ಹೋಗಿ ಯಾಕೆ ಸುಮ್ನೆ ದುಡ್ಡು ವೇಸ್ಟ್ ಮಾಡೋದು,  ಇಲ್ಲೇ ಈ ಮದುವೆಗೆ ಹೋಗಿ ಭರ್ಜರಿ ಊಟ ಮಾಡ್ಕೊಂಡು ಬರೋಣ ಅಂತ, ಆಹ್ವಾನವಿಲ್ಲದಿರುವ ಖಾಸಗಿ ಕಾರ್ಯಕ್ರಮಗಳಿಗೆ ಹೋಗಿ ಭರ್ಜರಿ ಭೋಜನ ಮಾಡಿ ಬರ್ತಾರೆ. ಅದ್ರ ನಡುವೆ ಇಲ್ಲೇನಾದ್ರೂ ಸಿಕ್ಕಿ ಹಾಕಿಕೊಂಡ್ರೆ ಏನಪ್ಪಾ ಗತಿ ಅಂತ ಭಯನೂ ಅವ್ರಿಗೆ ಕಾಡ್ತಾ ಇರುತ್ತೆ. ಅಲ್ಲದೆ ಈ ರೀತಿ ಆಹ್ವಾನವಿಲ್ಲದಿರುವ ಮದುವೆ ಕಾರ್ಯಕ್ರಮಗಳಿಗೆ ಊಟ ಮಾಡಲು ಹೋಗಿ ಮದುವೆ ಮನೆಯಲ್ಲಿ ಸರಿಯಾಗಿ ಗೂಸಾ ತಿಂದು ಬರುವ ತಮಾಷೆಯ ದೃಶ್ಯಗಳನ್ನು ನಾವು ಸಿನೆಮಾಗಳಲ್ಲಿ ನೋಡಿರುತ್ತೇವೆ.   ಆದ್ರೆ ನಿಜವಾಗಿಯೂ ಈ ರೀತಿ ಆಹ್ವಾನವಿಲ್ಲದ ಖಾಸಗಿ  ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು, ಕಾನೂನಿನ ಪ್ರಕಾರ ಅಪರಾಧವಾಗಿದೆ.  ಹೌದು ಹೀಗೇನಾದ್ರೂ  ಕರೆಯದಿರುವ ಖಾಸಗಿ ಕಾರ್ಯಕ್ರಮಗಳಲ್ಲಿ ಊಟ ಮಾಡಲು ಹೋಗಿ ಸಿಕ್ಕಿಬಿದ್ರೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದಂತೆ. ಈ ಕುರಿತ ಕುತೂಹಲಕಾರಿ ಮಾಹಿತಿಯನ್ನು ವಕೀಲೆ ಬಿ.ವಿ ಸ್ವಾತಿ (@swathi.law) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಆಹ್ವಾನವಿಲ್ಲದ ಖಾಸಗಿ ಕಾರ್ಯಕ್ರಮಗಳಿಗೆ ನಾವೇನಾದ್ರೂ ಹೋದ್ರೆ ಅದು ಖಂಡಿತವಾಗಿಯೂ ಒಂದು ಅಪರಾಧವಾಗುತ್ತೆ ಎಂಬುದನ್ನು ಸ್ವಾತಿ ವಿವರಿಸಿದ್ದಾರೆ.  ಅವರು ಹೇಳ್ತಾರೇ, ಆಹ್ವಾನವಿಲ್ಲದಿರುವ ಮದುವೆ, ಪಾರ್ಟಿ ಇತ್ಯಾದಿ ಖಾಸಗಿ ಕಾರ್ಯಕ್ರಮಗಳಿಗೆ ಹೋಗೋದು ಖಂಡಿತವಾಗಿಯೂ ಒಂದು ಅಪರಾಧ. ಇದನ್ನು ʼಗೇಟ್ ಕ್ರ್ಯಾಶ್ʼ ಅಂತ  ಕರಿತಾರೆ. ಹೀಗೆ ಆಹ್ವಾನವಿಲ್ಲದ  ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡಿ ಬರುವ  ದೃಶ್ಯಗಗಳನ್ನು ಸಿನೆಮಾಗಳಲ್ಲಿ ನೋಡಿರಬಹುದು.  ನಿಜ ಜೀವನದಲ್ಲೂ ಈ ರೀತಿಯ ಹುಚ್ಚು ಸಾಹಸಕ್ಕೆ ಏನಾದ್ರೂ ಕೈ ಹಾಕಿದ್ರೆ, ಇದು ಖಂಡಿತವಾಗಿಯೂ ಅಪರಾಧವಾಗುತ್ತೆ. ಹೀಗೆ ನೀವೇನಾದ್ರೂ ಆಹ್ವಾನವಿಲ್ಲದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಕ್ಕಿಬಿದ್ರೆ, ನಿಮ್ಮನ್ನು  ಸೆಕ್ಷನ್ 442  ಮತ್ತು ಸೆಕ್ಷನ್ 452 ಇಂಡಿಯನ್ ಪಿನಲ್ ಕೋಡ್ ಪ್ರಕಾರ ಪೋಲಿಸರು ನಿಮ್ಮನ್ನು ಅರೆಸ್ಟ್ ಕೂಡಾ ಮಾಡಬಹುದು. ಅಲ್ಲದೆ  ಈ ಒಂದು ತಪ್ಪಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದು ಎಂಬುದನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಮೋದಿಯನ್ನು ಅಯೋಧ್ಯೆಗೆ ಸ್ವಾಗತಿಸಿದ ಬಾಬರಿ ಮಸೀದಿಯ ಮುಖ್ಯ ಅರ್ಜಿದಾರ ಇಕ್ಬಾಲ್​​​​ ಅನ್ಸಾರಿ 

ಡಿಸೆಂಬರ್ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಹಾಗೂ 32 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾಗೆ ಲೆಕ್ಕ ಹಾಕಿದ್ರೆ ನನಗೆ ಮತ್ತು ನನ್ನ ಸ್ನೇಹಿತರಿಗೆ ಮರಣ ದಂಡಣೆ ಅಥವಾ ಕಂಡಲ್ಲಿ ಗುಂಡು ಶಿಕ್ಷೆಯನ್ನು ಕೊಡಬೇಕಾಗುತ್ತದೆ, ಯಾಕಂದ್ರೆ ಲಿಕ್ಕವಿಲ್ಲದಷ್ಟು ಆಹ್ವಾನವಿಲ್ಲದಿರುವ ಮದುವೆ ಕಾರ್ಯಕ್ರಮಕ್ಕೆ ಹೋಗಿ ಫ್ರೀ ಊಟ ಮಾಡಿದ್ದೇವೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼದೇವ್ರೆ ಒಂದು ಊಟಕ್ಕಾಗಿ ಇಷ್ಟು ಕಷ್ಟ ಪಡ್ಬೇಕಾʼ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ತರ ಹೇಳಿ ಹೆದ್ರಿಸ್ಬೇಡಿ ಮೇಡಂ, ನಮ್ ಜೀವ್ನ ನಡಿತಾ ಇರೋದೆ ಇದ್ರಿಂದʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Sat, 30 December 23