Viral Video: ಇದ್ಯಾವುದಪ್ಪ ಹೊಸ ಬಗೆಯ ಕ್ಯಾಡ್ಬರಿ ಜೆಮ್ಸ್ ನೂಡಲ್ಸ್…

ಇತ್ತೀಚಿನ ದಿನಗಳಲ್ಲಿ ವಿಯರ್ಡ್ ಫುಡ್ ಕಾಂಬಿನೇಷನ್ ವಿಡಿಯೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಐಸ್ಕ್ರೀಮ್ ದೋಸೆ, ಪಾರ್ಲೆಜಿ-ಜಿ ಪಕೋಡಾ, ಪಾನಿಪುರಿ ಐಸ್ಕ್ರೀಮ್ ರೋಲ್, ಒಂದಾ ಎರಡಾ ಈ ರೀತಿ ಹಲವಾರು ವಿಲಕ್ಷಣ ಫುಡ್ ಕಾಂಬಿನೇಷನ್ಗಳನ್ನು ಜನರು ಟ್ರೈ ಮಾಡುತ್ತಿರುತ್ತಾರೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಯಾರೋ ಮಹಾನುಭಾವರು, ಮಸಾಲೆ ನೂಡಲ್ಸ್ ತಯಾರಿಸುವ ಬದಲು ಕ್ಯಾಡ್ಬರಿ ಜೆಮ್ಸ್ ಮತ್ತು ಹಾಲನ್ನು ಬಳಸಿ ಸ್ವೀಟ್ ನೂಡಲ್ಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.

Viral Video: ಇದ್ಯಾವುದಪ್ಪ ಹೊಸ ಬಗೆಯ ಕ್ಯಾಡ್ಬರಿ ಜೆಮ್ಸ್ ನೂಡಲ್ಸ್…
Maggi cooked with Cadbury gemsImage Credit source: instagram
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Dec 30, 2023 | 6:54 PM

ಕೇವಲ ಮಕ್ಕಳು ಮಾತ್ರವಲ್ಲ ಬಹುತೇಕ ಎಲ್ಲರೂ ನೂಡಲ್ಸ್ ಅನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಕೆಲವರಿಗೆ ವೆಜ್ ನೂಡಲ್ಸ್ ಇಷ್ಟವಾದ್ರೆ, ಕೆಲವರು ಎಗ್ ನೂಡಲ್ಸ್ ತಿನ್ನಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಚಿಕನ್ ನೂಡಲ್ಸ್ ಅನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ ಈ ರೀತಿಯ ಮಸಾಲೆಯುಕ್ತ ನೂಡಲ್ಸ್ ಬದಲು ನೀವು ಎಂದಾದರೂ ಸ್ವೀಟ್ ನೂಡಲ್ಸ್ ಸವಿದಿದ್ದೀರಾ? ಅರೇ ಇಂತಹ ವಿಯರ್ಡ್ ಫುಡ್ ಅನ್ನು ತಿನ್ನೊದು ಬಿಡಿ, ಆ ರೆಸಿಪಿಯನ್ನು ಯಾರಾದ್ರೂ ಟ್ರೈ ಮಾಡೋದಿದ್ಯಾ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಇಲ್ಲಿ ಯಾರೋ ಮಹಾನುಭಾವರು ಮಸಾಲೆ ನೂಡಲ್ಸ್ ತಯಾರಿಸುವ ಬದಲು ಕ್ಯಾಡ್ಬರಿ ಜೇಮ್ಸ್ ಮತ್ತು ಹಾಲನ್ನು ಬಳಸಿಕೊಂಡು ಸ್ವೀಟ್ ಮ್ಯಾಗಿ ನೂಡಲ್ಸ್ ತಯಾರಿಸಿದ್ದಾರೆ. ಈ ವಿಯರ್ಡ್ ಫುಡ್ ತಯಾರಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.

@rajat.write ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಮಹಿಳೆಯೊಬ್ಬರು ಜೆಮ್ಸ್ ಮತ್ತು ಹಾಲನ್ನು ಬಳಸಿಕೊಂಡು ಸ್ವೀಟ್ ನೂಡಲ್ಸ್ ತಯಾರಿಸುವುದನ್ನು ಕಾಣಬಹುದು.

ಇದನ್ನೂ ಓದಿ: ಪಾರ್ಲೆ ಜಿ ಬದಲಾಯಿತು ಬುನ್​ಶಾ ಜಿ… ಹೊಸ ಲುಕ್..! ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಒಎಂಜಿ

ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು, ಗ್ಯಾಸ್ ಒಲೆಯ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ಮ್ಯಾಗಿ ನೂಡಲ್ಸ್ ಮತ್ತು ಕ್ಯಾಡ್ಬರಿ ಜೆಮ್ಸ್ ಅನ್ನು ಹಾಕುತ್ತಾರೆ. ನಂತರ ಅದಕ್ಕೆ ನೀರಿನ ಬದಲು ಹಾಲನ್ನು ಸೇರಿಸಿ, ಚೆನ್ನಾಗಿ ಬೇಯಿಸಿ ಕ್ಯಾಡ್ಬರಿ ಜೆಮ್ಸ್ ನೂಡಲ್ಸ್ ತಯಾರಿಸುವುವ ದೃಶ್ಯವನ್ನು ಕಾಣಬಹುದು.

ನವೆಂಬರ್ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.6 ವೀಕ್ಷಣೆಗಳನ್ನು ಹಾಗೂ 29 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇನ್ನು ಈ ಕಣ್ಣಲ್ಲಿ ಏನೇನು ನೋಡ್ಬೇಕೋʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಇದನ್ನು ನೋಡಿ ವಾಂತಿ ಬಂದಂಗೆ ಆಗ್ತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮ್ಯಾಗಿ ನೂಡಲ್ಸ್ಗೆ ಅನ್ಯಾಯ ಮಾಡುತ್ತಿದ್ದಾರೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ