ಪಾರ್ಲೆ ಜಿ ಬದಲಾಯಿತು ಬುನ್​ಶಾ ಜಿ… ಹೊಸ ಲುಕ್..! ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಒಎಂಜಿ

Parle-G New Look: ಪಾರ್ಲೆ ಜಿ ಹೆಸರು ಮತ್ತು ಅದರಲ್ಲಿರುವ ಹುಡುಗಿಯ ಫೋಟೋ ಬದಲಾಯಿಸಿ, ಬುನ್​ಶಾ ಜಿ ಎಂದಿರುವ ಪ್ಯಾಕೆಟ್​ನ ಪೋಸ್ಟ್ ವೈರಲ್ ಆಗಿದೆ. ಝೆರ್ವಾನ್ ಎನ್ ಬುನ್​ಶಾ ಎಂಬ ಕಾಮಿಡಿಯನ್ ಮತ್ತು ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಅವರ ಇತ್ತೀಚಿನ ಒಂದು ವೈರಲ್ ಪೋಸ್ಟ್ ಸೃಷ್ಟಿಸಿದ ಪರಿಣಾಮ ಇದು. ಪಾರ್ಲೆ ಜಿ ಮಾಲೀಕರು ಸಿಕ್ಕರೆ ಅವರನ್ನು ಏನಂದು ಕರೆಯುತ್ತೀರಿ? ಪಾರ್ಲೆ ಸರ್ ಎಂತಲೋ, ಮಿಸ್ಟರ್ ಪಾರ್ಲೆ ಅಂತಲೋ ಅಥವಾ ಪಾರ್ಲೆ ಜಿ ಅಂತಲೋ? ಎಂದು ಪೋಸ್ಟ್​ನಲ್ಲಿ ಕೇಳಲಾಗಿತ್ತು.

ಪಾರ್ಲೆ ಜಿ ಬದಲಾಯಿತು ಬುನ್​ಶಾ ಜಿ... ಹೊಸ ಲುಕ್..! ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಒಎಂಜಿ
ಪಾರ್ಲೆ ಜಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 29, 2023 | 12:03 PM

ವಿಶ್ವದ ನಂಬರ್ ಒನ್ ಬಿಸ್ಕತ್ ಬ್ರ್ಯಾಂಡ್ ಪಾರ್ಲೆ ಜಿ ಹಾಗೂ ಅದರ ಪ್ಯಾಕೆಟ್ ಮೇಲಿರುವ ಬಾಲಕಿ ಯಾರು ತಾನೆ ಮರೆಯಲು ಸಾಧ್ಯ. ಆದರೆ, ಮೊನ್ನೆ ಮೊನ್ನೆ ಪಾರ್ಲೆ ಜಿ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ವೊಂದರಲ್ಲಿ ಬಿಸ್ಕತ್ ಪ್ಯಾಕೆಟ್​ನಲ್ಲಿ ಪಾರ್ಲೆ ಜಿ ಹೆಸರು ಮತ್ತು ಹುಡುಗಿಯ ಫೋಟೋ ಬದಲಿಸಿ ಅಚ್ಚರಿ ಮೂಡಿಸಿತ್ತು. ಕಾಮಿಡಿಯನ್ ಝೆರ್ವಾನ್ ಎನ್ ಬುನ್​ಶಾ (Zervaan N Bunshah) ಅವರ ಹೆಸರಿರುವ ಬಿಸ್ಕತ್ ಪ್ಯಾಕೆಟ್​ನ ಫೋಟೋವನ್ನು ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿತು. ಪಾರ್ಲೆ ಬುನ್​ಶಾ ಜಿ (Bunshah- G) ಬಿಸ್ಕತ್ ಪ್ಯಾಕೆಟ್​ನ ಫೋಟೋ ಅದಾಗಿತ್ತು.

ಈ ಪೋಸ್ಟ್ ಸಾಕಷ್ಟು ಮೀಮ್ಸ್​ಗೆ ಕಾರಣವಾಗಿದೆ. ಆದರೆ, ಇದರ ಹಿಂದೆ ಇನ್ನೊಂದು ಇನ್ಸ್​ಟಾಗ್ರಾಂ ವೈರಲ್ ಪೋಸ್ಟ್ ಇದೆ. ಅದು ಸೋಷಿಯಲ್ ಮೀಡಿಯಾ ಇನ್​ಫ್ಲುಯನ್ಸ್ ಆಗಿರುವ ಝೆರ್ವಾನ್ ಎನ್ ಬುನ್​ಶಾ ಅವರ ಒಂದು ಪೋಸ್ಟ್. ಹಾಸ್ಯ ಚಟಾಕಿ ಮತ್ತು ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ಬುನ್​ಶಾ ನಾಲ್ಕು ದಿನಗಳ ಹಿಂದೆ ಇನ್ಸ್​ಟಾಗ್ರಾಮ್​ನಲ್ಲಿ ಒಂದು ಕಾಮಿಡಿ ಪೋಸ್ಟ್ ಹಾಕಿದ್ದರು. ಅನಿಲ್ ಕಪೂರ್ ಅವರ ‘ಏ ಜಿ, ಓ ಜೀ..’ ಅನ್ನೂ ಹಾಡಿನ ಹಿನ್ನೆಲೆಯ ಸಂಗೀತದಲ್ಲಿ ಬುನ್​ಶಾ ಅವರ ವಿಡಿಯೋ ಅದು. ಅದರಲ್ಲಿ ಬುನ್​ಶಾ ಅವರ ಹಾವಭಾವವೆಲ್ಲವೂ ಬಹಳ ಸೂಕ್ಷ್ಮ ಕಣ್ಚಲನೆಯಲ್ಲೇ. ಆದರೆ, ವಿಡಿಯೋದಲ್ಲಿ ಹಾಕಲಾಗಿದ್ದ ಟೆಕ್ಸ್ಟ್ ಹೀಗಿತ್ತು… ‘ನೀವು ಪಾರ್ಲೆ ಮಾಲೀಕರನ್ನು ಭೇಟಿ ಮಾಡಿದಾಗ ಏನಂತ ಕರೆಯುತ್ತೀರಿ? ಪಾರ್ಲೆ ಸರ್ ಎಂತಲೋ, ಮಿಸ್ಟರ್ ಪಾರ್ಲೆ ಅಂತಲೋ ಅಥವಾ ಪಾರ್ಲೆ ಜಿ ಅಂತಲೋ?’ ಎಂದಿತ್ತು.

ಇದನ್ನೂ ಓದಿ: Viewership record: ಅತಿಹೆಚ್ಚು ವೀಕ್ಷಣೆ; 2023ರ ಒಡಿಐ ವಿಶ್ವಕಪ್ ಹೊಸ ಮೈಲಿಗಲ್ಲು; ಹಳೆಯ ದಾಖಲೆಗಳೆಲ್ಲಾ ಪುಡಿಪುಡಿ; ಐಸಿಸಿ ಮಾಹಿತಿ

ಇದು ಸಾಕಷ್ಟು ನೆಟ್ಟಿಗರ ಗಮನ ಸೆಳೆದಿತ್ತು. ಸ್ವತಃ ಪಾರ್ಲೆ ಜಿ ಸಂಸ್ಥೆ ಕೂಡ ಈ ಪೋಸ್ಟ್​ಗೆ ಉತ್ತರಿಸಿ, ತಮ್ಮನ್ನು ಒಜಿ ಎಂದು ಕರೆಯಬಹುದು ಎಂದಿತ್ತು. ಒಜಿ ಎಂದರೆ ಒರಿಜಿನೇಟರ್. ಆದರೆ, ಮೂಲ ತಯಾರಕರು.

View this post on Instagram

A post shared by Zervaan J Bunshah (@bunshah)

ಅಷ್ಟಕ್ಕೆ ಸುಮ್ಮನಾಗದ ಪಾರ್ಲೆ, ನಿನ್ನೆ (ಡಿ. 28) ಬುನ್​ಶಾ ಜಿ ಎಂದು ಬರೆದಿರುವ ಬಿಸ್ಕತ್ ಪ್ಯಾಕೆಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತು. ‘ಪಾರ್ಲೆ ಜಿ ಮಾಲೀಕರನ್ನು ಏನೆಂದು ಕರೆಯಬೇಕೆಂದು ಯೋಚಿಸುತ್ತಿರುವಾಗ, ಒಂದು ಕಪ್ ಚಾಯ್ ಜೊತೆ ಆನಂದಿಸುವ ನೆಚ್ಚಿನ ಬಿಸ್ಕತ್ ಎಂದು ನೀವು ಕರೆಯಬಹುದು,’ ಎಂದು ಡಿಸ್ಕ್ರಿಪ್ಷನ್​ನಲ್ಲಿ ಬರೆದಿದೆ.

ಇದನ್ನೂ ಓದಿ: ವಾಹನದ ಹಿಂದೆ ಅಂಟಿಕೊಂಡಿದ್ದ ಧೂಳಿನಲ್ಲಿ ಮೂಡಿದ ಅದ್ಭುತ ಚಿತ್ರಕಲೆ! ಕಲಾವಿದನ ಕೈ ಚಳಕಕ್ಕೆ ತಲೆ ಬಾಗಲೇಬೇಕು

View this post on Instagram

A post shared by Parle-G (@officialparleg)

ಈ ಪೋಸ್ಟ್ ಕೂಡ ವೈರಲ್ ಆಗಿದ್ದು ಬುನ್​ಶಾ ಕೂಡ ಪ್ರತಿಕ್ರಿಯಿಸಿದ್ದಾರೆ. ಚಿಕ್ಕಂದಿನಲ್ಲಿ ಪಾರ್ಲೆಜಿ ಫೇವರಿಟ್ ಬಿಸ್ಕತ್ ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯಂತೂ ಈ ಪೋಸ್ಟ್​ಗೆ ಒಎಂಜಿ (ಓಹ್ ಮೈ ಗಾಡ್) ಎಂದು ಉದ್ಗರಿಸಿ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Fri, 29 December 23