Viewership record: ಅತಿಹೆಚ್ಚು ವೀಕ್ಷಣೆ; 2023ರ ಒಡಿಐ ವಿಶ್ವಕಪ್ ಹೊಸ ಮೈಲಿಗಲ್ಲು; ಹಳೆಯ ದಾಖಲೆಗಳೆಲ್ಲಾ ಪುಡಿಪುಡಿ; ಐಸಿಸಿ ಮಾಹಿತಿ

ODI World Cup 2023: ಭಾರತದಲ್ಲಿ 2023ರ ನವೆಂಬರ್ ಮತ್ತು ಡಿಸೆಂಬರ್​​ನಲ್ಲಿ ನಡೆದ ಒಡಿಐ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ 1 ಟ್ರಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಆಗಿದೆ. ಐಸಿಸಿ ನೀಡಿರುವ ಮಾಹಿತಿ ಪ್ರಕಾರ ಒಟ್ಟಾರೆ ಟೂರ್ನಿ ವೀಕ್ಷಣೆಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಪಾಲು ಶೇ. 23ರಷ್ಟಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಲೈವ್ ವೀಕ್ಷಕರ ಸಂಖ್ಯೆ 5.9 ಕೋಟಿಗೆ ಹೋಗಿದ್ದು ಹೊಸ ದಾಖಲೆ.

Viewership record: ಅತಿಹೆಚ್ಚು ವೀಕ್ಷಣೆ; 2023ರ ಒಡಿಐ ವಿಶ್ವಕಪ್ ಹೊಸ ಮೈಲಿಗಲ್ಲು; ಹಳೆಯ ದಾಖಲೆಗಳೆಲ್ಲಾ ಪುಡಿಪುಡಿ; ಐಸಿಸಿ ಮಾಹಿತಿ
ಒಡಿಐ ವಿಶ್ವಕಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 27, 2023 | 6:06 PM

ನವದೆಹಲಿ, ಡಿಸೆಂಬರ್ 27: ಭಾರತದಲ್ಲಿ ನಡೆದ ಈ ಬಾರಿಯ ಐಸಿಸಿ ಓಡಿಐ ವಿಶ್ವಕಪ್ ಕ್ರಿಕೆಟ್ ಟೂರ್ನಿ (ODI World Cup 2023) ಹಲವು ದಾಖಲೆಗಳಿಗೆ ಬಾಜನವಾಗಿದೆ. ಈ ಟೂರ್ನಿಯ ಪಂದ್ಯಗಳನ್ನು ದಾಖಲೆ ಪ್ರಮಾಣದಲ್ಲಿ ಜನರು ವೀಕ್ಷಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆ (highest viewership) ಕಂಡ ಟೂರ್ನಿ ಇದಾಗಿದೆ. ಟಿವಿ ಬ್ರಾಡ್​ಕ್ಯಾಸ್ಟ್ ಮತ್ತು ಡಿಜಿಟಲ್ ಲೈವ್ ಸ್ಟ್ರೀಮಿಂಗ್ ಎರಡರಲ್ಲೂ 2023ರ ವಿಶ್ವಕಪ್ ದಾಖಲೆ ಬರೆದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಈ ದಾಖಲೆಯ ಕೆಲ ವಿವರಗಳನ್ನು ಬಹಿರಂಗಪಡಿಸಿದೆ.

ಐಸಿಸಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಇಡೀ ಟೂರ್ನಿಯ ಒಟ್ಟು ಲೈವ್ ವೀಕ್ಷಣೆ ಅವಧಿ 1 ಟ್ರಿಲಿಯನ್ (ಒಂದು ಲಕ್ಷ ಕೋಟಿ) ನಿಮಿಷ ಎನ್ನಲಾಗಿದೆ. ಭಾರತದಲ್ಲಿ ಈ ಹಿಂದೆ ನಡೆದಿದ್ದ ವಿಶ್ವಕಪ್ ಟೂರ್ನಿಗಿಂತ ಶೇ. 38ರಷ್ಟು ಹೆಚ್ಚು ಲೈವ್ ವೀಕ್ಷಣೆ ಈ ಬಾರಿಯದ್ದಕ್ಕೆ ಸಿಕ್ಕಿದೆ.

ಇನ್ನು, ಹಾಟ್​ಸ್ಟಾರ್ ಇತ್ಯಾದಿ ಡಿಜಿಟಲ್ ಸ್ಟ್ರೀಮಿಂಗ್​ನಲ್ಲಿ 17,700 ಕೋಟಿ ನಿಮಿಷಗಳ ವೀಕ್ಷಣೆ ಆಗಿದೆ. ಒಟ್ಟಾರೆ ವೀಕ್ಷಣೆಯಲ್ಲಿ ಡಿಜಿಟಲ್ ವೀಕ್ಷಣೆ ಶೇ. 23ರಷ್ಟು ಇದೆ.

ಇದನ್ನೂ ಓದಿ: BBL 2023: ಕೇವಲ 5 ರನ್​ಗೆ 7 ವಿಕೆಟ್ ಪತನ: ಆದ್ರೂ ಪಂದ್ಯ ಗೆದ್ರು..!

ಫೈನಲ್ ಪಂದ್ಯದ ದಾಖಲೆ

2023ರ ಒಡಿಐ ವಿಶ್ವಕಪ್ ಟೂರ್ನಿಯನ್ನು 209 ದೇಶಗಳಲ್ಲಿ 20 ಬ್ರಾಡ್​ಕ್ಯಾಸ್ಟ್ ಪಾರ್ಟ್ನರ್​ಗಳ ಮೂಲಕ ಪ್ರಸಾರ ಆಗಿತ್ತು. ಚಾಂಪಿಯನ್ ಆಸ್ಟ್ರೇಲಿಯ ಮತ್ತು ರನ್ನರ್ ಅಪ್ ಭಾರತದ ನಡುವೆ ನಡೆದ ಟೂರ್ನಿ ಫೈನಲ್ ಪಂದ್ಯಕ್ಕೆ 87,600 ಕೋಟಿ ನಿಮಿಷಗಳ ವೀಕ್ಷಣೆ ಆಗಿದೆ. 2011ರಲ್ಲಿ ಭಾರತ ಚಾಂಪಿಯನ್ ಆದಾಗ ಕಂಡಿದ್ದಕ್ಕಿಂತ ಶೇ. 46ರಷ್ಟು ಹೆಚ್ಚು ವೀಕ್ಷಣೆ ಈ ಬಾರಿ ಆಗಿದೆ. ಈ ಪಂದ್ಯದ ಲೈವ್ ವೀಕ್ಷಕರ ಸಂಖ್ಯೆ 5.9 ಕೋಟಿ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಇದು ಹೊಸ ದಾಖಲೆಯಾಗಿದೆ.

ಈ ಪರಿ ವೀಕ್ಷಣೆಗೆ ಏನು ಕಾರಣ?

ನವೆಂಬರ್ ಮತ್ತು ಡಿಸೆಂಬರ್​ನಲ್ಲಿ ನಡೆದ ಐಸಿಸಿ ವರ್ಲ್ಡ್ ಕಪ್ ಈ ಪರಿ ವೀಕ್ಷಣೆ ಪಡೆಯಲು ಭಾರತದ ಆರಂಭಿಕ ಗೆಲುವಿನ ನಾಗಾಲೋಟವೇ ಕಾರಣ ಇರಬಹುದು. ಫೈನಲ್ ಪಂದ್ಯದವರೆಗೂ ಭಾರತ ಭರ್ಜರಿ ಪ್ರದರ್ಶನ ನೀಡಿ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. ಫೈನಲ್​ನಲ್ಲಿ ಭಾರತವೇ ಫೇವರಿಟ್ ಎನಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಸೋಲು ಅನಿರೀಕ್ಷಿತ ಮಾತ್ರವಲ್ಲ, ಹೀನಾಯ ಕೂಡ ಆಗಿತ್ತು. ಆದರೆ, ಭಾರತ ಫೇವರಿಟ್ ಎನಿಸಿದ್ದರಿಂದ ಆ ಪಂದ್ಯಕ್ಕೆ ದಾಖಲೆಯ ವೀಕ್ಷಣೆ ಸಿಕ್ಕಿತ್ತು.

ಇದನ್ನೂ ಓದಿ: IND vs SA 1st test: ದಕ್ಷಿಣ ಆಫ್ರಿಕಾದಲ್ಲಿ ಭಾರತ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆಲ್ಲದಿರಲು ಏನು ಕಾರಣ ಗೊತ್ತೇ?

ಅತಿ ಹೆಚ್ಚು ವೀಕ್ಷಣೆ ಕಂಡ 2023ರ ವಿಶ್ವಕಪ್ ಪಂದ್ಯಗಳು

  • ಭಾರತ ಆಸ್ಟ್ರೇಲಿಯಾ ಫೈನಲ್: 59 ಮಿಲಿಯನ್ ಲೈವ್ ವೀಕ್ಷಕರು
  • ಭಾರತ ನ್ಯೂಜಿಲೆಂಡ್ ಸೆಮಿಫೈನಲ್: 53 ಮಿಲಿಯನ್ ಲೈವ್ ವೀಕ್ಷಕರು
  • ಭಾರತ ಸೌತ್ ಆಫ್ರಿಕಾ ಗ್ರೂಪ್ ಪಂದ್ಯ: 44 ಮಿಲಿಯನ್ ಲೈವ್ ವೀಕ್ಷಕರು
  • ಭಾರತ ನ್ಯೂಜಿಲೆಂಡ್ ಗ್ರೂಪ್ ಪಂದ್ಯ: 43 ಮಿಲಿಯನ್ ಲೈವ್ ವೀಕ್ಷಕರು
  • ಭಾರತ ಪಾಕಿಸ್ತಾನ ಗ್ರೂಪ್ ಪಂದ್ಯ: 35 ಮಿಲಿಯನ್ ಲೈವ್ ವೀಕ್ಷಕರು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Wed, 27 December 23