BBL 2023: ಕೇವಲ 5 ರನ್​ಗೆ 7 ವಿಕೆಟ್ ಪತನ: ಆದ್ರೂ ಪಂದ್ಯ ಗೆದ್ರು..!

BBL 2023: ಮೊದಲ ಓವರ್​ನ 5ನೇ ಎಸೆತದಲ್ಲಿ ಆರಂಭಿಕ ಆಟಗಾರ ಝಾಕ್ ಕ್ರಾಲಿ (1) ಔಟಾದರೆ, ಇದರ ಬೆನ್ನಲ್ಲೇ ಕೂಪರ್ ಕೊನೊಲಿ (0) ವಿಕೆಟ್ ಒಪ್ಪಿಸಿದ್ದರು. ಕೇವಲ 4 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪರ್ತ್​ ಸ್ಕಾಚರ್ಸ್​ ತಂಡಕ್ಕೆ ಈ ಹಂತದಲ್ಲಿ ನಾಯಕ ಆರೋನ್ ಹಾರ್ಡಿ ಹಾಗೂ ಜೋಶ್ ಇಂಗ್ಲಿಸ್ ಆಸರೆಯಾದರು.

BBL 2023: ಕೇವಲ 5 ರನ್​ಗೆ 7 ವಿಕೆಟ್ ಪತನ: ಆದ್ರೂ ಪಂದ್ಯ ಗೆದ್ರು..!
Perth Scorchers
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 27, 2023 | 9:43 AM

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನ ​(BBL 2023) 15ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಪರ್ತ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್​ ಸ್ಕಾಚರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಮೆಲ್ಬೋರ್ನ್​ ತಂಡದ ನಾಯಕ ನಿಕ್ ಮ್ಯಾಡಿನ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ಪರ್ತ್​ ಸ್ಕಾಚರ್ಸ್​ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಮೊದಲ ಓವರ್​ನ 5ನೇ ಎಸೆತದಲ್ಲಿ ಆರಂಭಿಕ ಆಟಗಾರ ಝಾಕ್ ಕ್ರಾಲಿ (1) ಔಟಾದರೆ, ಇದರ ಬೆನ್ನಲ್ಲೇ ಕೂಪರ್ ಕೊನೊಲಿ (0) ವಿಕೆಟ್ ಒಪ್ಪಿಸಿದ್ದರು. ಕೇವಲ 4 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪರ್ತ್​ ಸ್ಕಾಚರ್ಸ್​ ತಂಡಕ್ಕೆ ಈ ಹಂತದಲ್ಲಿ ನಾಯಕ ಆರೋನ್ ಹಾರ್ಡಿ ಹಾಗೂ ಜೋಶ್ ಇಂಗ್ಲಿಸ್ ಆಸರೆಯಾದರು.

ಮೂರನೇ ವಿಕೆಟ್​ಗೆ ಜೊತೆಯಾದ ಹಾರ್ಡಿ (57) ಹಾಗೂ ಜೋಶ್ ಇಂಗ್ಲಿಸ್ (64) ಶತಕದ ಜೊತೆಯಾಟವಾಡಿದರು. ಆ ಬಳಿಕ ಬಂದ ಲಾರಿ ಇವಾನ್ಸ್​ 24 ರನ್​ಗಳ ಕೊಡುಗೆ ನೀಡಿದರು. ಅಷ್ಟರಲ್ಲಾಗಲೇ ತಂಡದ ಮೊತ್ತ 150 ರನ್​ಗಳ ಗಡಿದಾಟಿತು.

ಕೇವಲ 5 ರನ್​ಗಳಿಗೆ 7 ವಿಕೆಟ್​ ಪತನ:

16 ಓವರ್​ಗಳಲ್ಲಿ 155 ರನ್​ಗಳ ಗಡಿದಾಟಿದ್ದ ಪರ್ತ್​ ಸ್ಕಾಚರ್ಸ್​ ತಂಡವು ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿತ್ತು. ಆದರೆ ಡೆತ್ ಓವರ್​ಗಳಲ್ಲಿ ಮಿಂಚಿನ ಬೌಲಿಂಗ್ ದಾಳಿ ಸಂಘಟಿಸಿದ ಮೆಲ್ಬೋರ್ನ್​ ರೆನೆಗೇಡ್ಸ್ ಬೌಲರ್​ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದರು.

ಪರಿಣಾಮ ಪರ್ತ್​ ತಂಡವು ಕೇವಲ 5 ರನ್​ ಕಲೆಹಾಕುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ 19.4 ಓವರ್​ಗಳಲ್ಲಿ 162 ರನ್​ಗಳಿಸಿ ಪರ್ತ್​ ಸ್ಕಾಚರ್ಸ್​ ತಂಡ ಆಲೌಟ್ ಆಗಿದೆ.

ಪಂದ್ಯ ಗೆದ್ದ ಪರ್ತ್​ ಸ್ಕಾಚರ್ಸ್:

ಪರ್ತ್​ ಸ್ಕಾಚರ್ಸ್ ನೀಡಿದ 163 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಮೆಲ್ಬೋರ್ನ್​ ರೆನೆಗೇಡ್ಸ್ ತಂಡವು ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ಕುಸಿತಕ್ಕೊಳಗಾಯಿತು.

4ನೇ ಕ್ರಮಾಂಕದಲ್ಲಿ ಶಾನ್ ಮಾರ್ಷ್ 36 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 59 ರನ್ ಬಾರಿಸಿದರೂ ಉಳಿದ ಬ್ಯಾಟರ್​ಗಳಿಂದ ಸಾಥ್ ಸಿಕ್ಕಿರಲಿಲ್ಲ. ಅಂತಿಮವಾಗಿ ಮೆಲ್ಬೋರ್ನ್​ ರೆನೆಗೇಡ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 149 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಪರ್ತ್ ಸ್ಕಾಚರ್ಸ್ ತಂಡ 13 ರನ್​ಗಳ ರೋಚಕ ಜಯ ಸಾಧಿಸಿದೆ.

ಪರ್ತ್​ ಸ್ಕಾಚರ್ಸ್​ ಪ್ಲೇಯಿಂಗ್ ಇಲೆವೆನ್: ಕೂಪರ್ ಕೊನೊಲಿ , ಝಾಕ್ ಕ್ರಾಲಿ , ಆರೋನ್ ಹಾರ್ಡಿ (ನಾಯಕ) , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಲಾರಿ ಇವಾನ್ಸ್ , ನಿಕ್ ಹಾಬ್ಸನ್ , ಆಷ್ಟನ್ ಅಗರ್ , ಜ್ಯೆ ರಿಚರ್ಡ್ಸನ್ , ಆಂಡ್ರ್ಯೂ ಟೈ , ಜೇಸನ್ ಬೆಹ್ರೆನ್ಡಾರ್ಫ್ , ಲ್ಯಾನ್ಸ್ ಮೋರಿಸ್.

ಇದನ್ನೂ ಓದಿ: Virat Kohli: ಭರ್ಜರಿ ದಾಖಲೆ ಬರೆದ ಕಿಂಗ್ ಕೊಹ್ಲಿ

ಮೆಲ್ಬೋರ್ನ್​ ರೆನೆಗೇಡ್ಸ್​ ಪ್ಲೇಯಿಂಗ್ ಇಲೆವೆನ್: ಜೋ ಕ್ಲಾರ್ಕ್ , ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ಜೇಕ್ ಫ್ರೇಸರ್- ಮೆಕ್‌ಗುರ್ಕ್ , ನಿಕ್ ಮ್ಯಾಡಿನ್ಸನ್ (ನಾಯಕ) , ಶಾನ್ ಮಾರ್ಷ್ , ಜೊನಾಥನ್ ವೆಲ್ಸ್ , ವಿಲ್ ಸದರ್ಲ್ಯಾಂಡ್ , ಟಾಮ್ ರೋಜರ್ಸ್ , ಕೇನ್ ರಿಚರ್ಡ್ಸನ್ , ಆ್ಯಡಂ ಝಂಪಾ , ಮುಜೀಬ್ ಉರ್ ರೆಹಮಾನ್.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ