Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA 1st test: ದಕ್ಷಿಣ ಆಫ್ರಿಕಾದಲ್ಲಿ ಭಾರತ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆಲ್ಲದಿರಲು ಏನು ಕಾರಣ ಗೊತ್ತೇ?

India vs South Africa 1st Test: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಪಂದ್ಯ ಮಂಗಳವಾರದಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯು ಟೀಮ್ ಇಂಡಿಯಾಗೆ ಬಹಳ ಮುಖ್ಯ. ಏಕೆಂದರೆ ಕಳೆದ 31 ವರ್ಷಗಳಲ್ಲಿ ಭಾರತ ದಕ್ಷಿಣ ಆಫ್ರಿಕಾದ ಅಭೇದ್ಯ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.

IND vs SA 1st test: ದಕ್ಷಿಣ ಆಫ್ರಿಕಾದಲ್ಲಿ ಭಾರತ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆಲ್ಲದಿರಲು ಏನು ಕಾರಣ ಗೊತ್ತೇ?
Team India
Follow us
Vinay Bhat
|

Updated on:Dec 26, 2023 | 10:15 AM

ದಕ್ಷಿಣ ಆಫ್ರಿಕಾ ನೆಲದಲ್ಲಿ ಇಂಗ್ಲೆಂಡ್, ನ್ಯೂಝಿಲೆಂಡ್‌, ಆಸ್ಟ್ರೇಲಿಯಾದ ಹೀಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಪಾರುಪತ್ಯ ಮೆರೆದಿರುವ ತಂಡಗಳು ಟೆಸ್ಟ್ ಸರಣಿ ಜಯಿಸಿದೆ. ಆದರೆ ಕಳೆದ 31 ವರ್ಷಗಳಿಂದ ಹರಿಣಗಳ ನಾಡಲ್ಲಿ ಟೀಮ್ ಇಂಡಿಯಾ (Team India) ಒಂದೇ ಒಂದು ಟೆಸ್ಟ್ ಸರಣಿ ವಶಪಡಿಸಿಕೊಂಡಿಲ್ಲ. ಸೌರವ್ ಗಂಗೂಲಿ, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯಂತಹ ನಾಯಕರೂ ಸಹ ಭಾರತವನ್ನು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇದೀಗ ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ದಕ್ಷಿಣ ಆಫ್ರಿಕಾ ವಿರುದ್ಧ ಅವರದ್ದೇ ನೆಲದಲ್ಲಿ ಸೆಣಸಲಿದೆ.

ಮಂಗಳವಾರದಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಪಂದ್ಯ ಸೆಂಚುರಿಯನ್​ನ ಸೂಪರ್ ಸ್ಪೋರ್ಟ್ಸ್ ಪಾರ್ಕ್​ನಲ್ಲಿ ಆರಂಭವಾಗಲಿದೆ. ಈ ಬಾರಿಯಾದರೂ ಭಾರತ ಇತಿಹಾಸ ಸೃಷ್ಟಿಸಲಿ ಎಂಬುದು ಅಭಿಮಾನಿಗಳ ಹಾರೈಕೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಗೆಲ್ಲದಿರಲು ಏನು ಕಾರಣ ಇರಬಹುದು?.

ದಕ್ಷಿಣ ಆಫ್ರಿಕಾದ ಪಿಚ್‌ಗಳು ಎಲ್ಲಾ ಸ್ಥಳಗಳಿಗಿಂತ ಭಿನ್ನವಾಗಿವೆ. ಪ್ರಪಂಚದ ಎಲ್ಲಾ ಪಿಚ್‌ಗಳಿಗಿಂತ ಇಲ್ಲಿ ಹೆಚ್ಚು ಬೌನ್ಸ್ ಇರುತ್ತದೆ. ಇದರ ಜೊತೆಗೆ ಇಲ್ಲಿ ಚೆಂಡು ಸ್ವಿಂಗ್ ಮತ್ತು ಸೀಮ್ ಕೂಡ ಆಗುತ್ತದೆ. ಅಂದರೆ ಚೆಂಡು ಗಾಳಿಯಲ್ಲಿ ಚಲಿಸುತ್ತದೆ. ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅಂತಹ ಪಿಚ್‌ಗಳಿಗೆ ಒಗ್ಗಿಕೊಂಡಿಲ್ಲ. ಇದರ ಪರಿಣಾಮವಾಗಿ ದಕ್ಷಿಣ ಆಫ್ರಿಕಾದಲ್ಲಿ ಆಗಾಗ್ಗೆ ವಿಫಲರಾಗುತ್ತಾರೆ.

ಇದನ್ನೂ ಓದಿ
Image
Rohit Sharma: ಧೋನಿಯ ದಾಖಲೆ ಮುರಿಯುವ ಹೊಸ್ತಿಲಲ್ಲಿ ರೋಹಿತ್ ಶರ್ಮಾ
Image
ಇತಿಹಾಸ ಸೃಷ್ಟಿಸಲು ಹೊರಟಿರುವ ಭಾರತಕ್ಕೆ ಪಿಚ್-ಮಳೆಯದ್ದೇ ದೊಡ್ಡ ಚಿಂತೆ
Image
India Squad: ಭಾರತ ಮಹಿಳಾ ತಂಡ ಪ್ರಕಟ: ಕನ್ನಡತಿ ಆಯ್ಕೆ
Image
ಇಂದು ಭಾರತ-ದ. ಆಫ್ರಿಕಾ ಮೊದಲ ಟೆಸ್ಟ್ ಪಂದ್ಯ ಆರಂಭ: ಎಷ್ಟು ಗಂಟೆಗೆ?

IPL 2024: ಯಶ್ ದಯಾಳ್ RCB ಗೆ ಪಂದ್ಯ ಗೆಲ್ಲಿಸಿ ಕೊಡ್ತಾರೆ..!

ಭಾರತದ ಸೋಲಿಗೆ ಪ್ರಮುಖ ಕಾರಣ ಒಬ್ಬ ಬ್ಯಾಟ್ಸ್‌ಮನ್ ಮೇಲೆ ಮಾತ್ರ ಅವಲಂಬಿತವಾಗಿರುವುದು. ಆಫ್ರಿಕಾದ ನೆಲದಲ್ಲಿ 50 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಇವರನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳ ಸರಾಸರಿ 40ಕ್ಕಿಂತ ಮೇಲಿಲ್ಲ. ಅಂದರೆ ಭಾರತದ ಇತರ ಬ್ಯಾಟ್ಸ್‌ಮನ್‌ಗಳ ತಂತ್ರದಲ್ಲಿ ಕೊರತೆಯಿದೆ. ಇದರಿಂದಾಗಿ ಅವರು ದಕ್ಷಿಣ ಆಫ್ರಿಕಾದಲ್ಲಿ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ.

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಬೌಲರ್‌ಗಳು ಯಾವಾಗಲೂ ಉತ್ತಮ ಪ್ರದರ್ಶನ ನೀಡುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ದಕ್ಷಿಣ ಆಫ್ರಿಕಾದ ಬೌಲರ್‌ಗಳು ತಮ್ಮ ಪಿಚ್‌ಗಳಲ್ಲಿ ಒಂದು ವಿಶೇಷವಾದ ಪ್ರಯೋಜನವನ್ನು ಪಡೆಯುತ್ತಾರೆ. ಅದು ಅವರ ಹೈಟ್. ಆಫ್ರಿಕನ್ ಬೌಲರ್‌ಗಳು ಭಾರತದ ಬೌಲರ್‌ಗಳಿಗಿಂತ ಸ್ವಲ್ಪ ಎತ್ತರವಾಗಿದ್ದಾರೆ. ಇದರಿಂದಾಗಿ ಅವರು ತಮ್ಮ ಪಿಚ್‌ಗಳಲ್ಲಿ ಹೆಚ್ಚುವರಿ ಬೌನ್ಸ್ ಪಡೆಯುತ್ತಾರೆ. ತವರಿನಲ್ಲಿ ಆಫ್ರಿಕಾ ತಂಡದ ಉತ್ತಮ ದಾಖಲೆಗೆ ಇದು ಪ್ರಮುಖ ಕಾರಣವಾಗಿದೆ.

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ತಮ್ಮ ಮನೆಯ ಪಿಚ್‌ಗಳನ್ನು ಚೆನ್ನಾಗಿ ತಿಳಿದಿದ್ದಾರೆ. ಅವರು ಈ ಪಿಚ್‌ಗಳಲ್ಲಿ ದೀರ್ಘಕಾಲ ದೇಶೀಯ ಕ್ರಿಕೆಟ್‌ ಆಡಿರುವುದರಿಂದ ಆ ಕಲೆಯನ್ನು ಕಲಿತಿದ್ದಾರೆ. ಆದ್ದರಿಂದ ನಿಸ್ಸಂಶಯವಾಗಿ ಅವರು ಎದುರಾಳಿ ಬೌಲರ್‌ಗಳನ್ನು ಉತ್ತಮವಾಗಿ ಆಡಲು ಸಮರ್ಥರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 am, Tue, 26 December 23