- Kannada News Photo gallery Cricket photos India vs South Africa First Test SuperSport Park, Centurion Pitch and Weather Report
IND vs SA 1st Test Weather: ಇತಿಹಾಸ ಸೃಷ್ಟಿಸಲು ಹೊರಟಿರುವ ಭಾರತಕ್ಕೆ ಪಿಚ್-ಮಳೆಯದ್ದೇ ದೊಡ್ಡ ಚಿಂತೆ
South Africa vs India Pitch Report: ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ಸೃಷ್ಟಿಸುವ ಕನಸಿನೊಂದಿಗೆ ಭಾರತ ಇಂದು ಮೊದಲ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿದೆ. ಆದರೆ, ಈ ಪಂದ್ಯಕ್ಕೆ ಸೆಂಚುರಿಯನ್ ಹವಾಮಾನವು ಅಡ್ಡಿ ಪಡಿಸುವುದು ದಟ್ಟವಾಗಿದೆ. ಜೊತೆಗೆ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿನ ಪಿಚ್ ಕಠಿಣವಾಗಿದ್ದು ವೇಗ ಮತ್ತು ಬೌನ್ಸಿಯಾಗಿದೆ.
Updated on:Dec 26, 2023 | 7:47 AM

ಟೆಸ್ಟ್ ಕ್ರಿಕೆಟ್ನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಮಾತ್ರ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಇದೀಗ ಇತಿಹಾಸ ಸೃಷ್ಟಿಸಲು ಹೊರಟಿರುವ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಇಂದು ಇಂಡೋ-ಆಫ್ರಿಕಾ ಪ್ರಥಮ ಟೆಸ್ಟ್ ಪಂದ್ಯ ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಪ್ರಾರಂಭವಾಗುತ್ತದೆ.

ಆದರೆ, ಸೆಂಚುರಿಯನ್ ಹವಾಮಾನವು ಈ ಟೆಸ್ಟ್ ಪಂದ್ಯಕ್ಕೆ ಅಡ್ಡಿ ಪಡಿಸುವುದು ದಟ್ಟವಾಗಿದೆ. ಕಳೆದ ಕೆಲವು ದಿನಗಳಿಂದ ದಕ್ಷಿಣ ಆಫ್ರಿಕಾದ ಈ ನಗರದಲ್ಲಿ ಹವಾಮಾನವು ಸ್ಪಷ್ಟ ಮತ್ತು ಬಿಸಿಲಿನಿಂದ ಕೂಡಿದೆ. ಆದರೆ ಮಂಗಳವಾರದಂದು, ಪಂದ್ಯ ಆರಂಭವಾಗುವ ದಿನ ಹವಾಮಾನವು ಫೌಲ್ ಎಂದು ಹೇಳಲಾಗುತ್ತದೆ.

ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ, ಡಿಸೆಂಬರ್ 26 ರಂದು ಸೆಂಚುರಿಯನ್‌ನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಸಾಧ್ಯತೆ ಶೇಕಡಾ 96 ರಷ್ಟಿದೆ. ಪಿಟಿಐ ಜೊತೆ ಮಾತನಾಡಿದ ಕ್ಯುರೇಟರ್ ಬ್ಲೋಯ್, ಮುಂದಿನ ದಿನಗಳಲ್ಲಿ ತಾಪಮಾನವು 20 ಡಿಗ್ರಿಗಳಿಗೆ ಇಳಿಯಬಹುದು ಮತ್ತು ಮೊದಲ ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಮೊದಲ ದಿನ ಅಂದರೆ ಡಿಸೆಂಬರ್ 26 ರಂದು ಯಾವುದೇ ರೀತಿಯ ಕ್ರಿಕೆಟ್ ಪಂದ್ಯ ನೋಡುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಕ್ಯುರೇಟರ್ ಹೇಳಿದ್ದಾರೆ. ಡಿ. 26ರಂದು ಮಾತ್ರವಲ್ಲದೆ ಡಿಸೆಂಬರ್ 27ರಂದು ಮಳೆಯಾಗುವ ನಿರೀಕ್ಷೆಯಿದ್ದು, ಇಂತಹ ಪರಿಸ್ಥಿತಿಯಲ್ಲಿ ನಿಗದಿತ ಸಮಯಕ್ಕೆ ಆಟ ಆರಂಭವಾಗುವ ಅಥವಾ ಮುಗಿಯುವ ಸಾಧ್ಯತೆ ಇಲ್ಲ.

ಇನ್ನು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿನ ಪಿಚ್ ಕಠಿಣವಾಗಿದ್ದು ವೇಗ ಮತ್ತು ಬೌನ್ಸಿಯಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ವೇಗವಾದ ಪಿಚ್ ಎಂದು ಲೇಬಲ್ ಮಾಡಲಾಗಿದೆ. ಪಿಚ್ ಬೌಲರ್‌ಗಳಿಗೆ (ವಿಶೇಷವಾಗಿ ವೇಗಿಗಳಿಗೆ) ಹೆಚ್ಚು ಅನುಕೂಲಕರವಾಗಿದ್ದು, ಬ್ಯಾಟರ್‌ಗಳು ಅಲ್ಪ ಮಟ್ಟಿಗೆ ಯಶಸ್ಸು ಸಾಧಿಸುತ್ತಾರೆ. ಇಲ್ಲಿ ಸ್ಪಿನ್ನರ್‌ಗಳು ಎಂದಿಗೂ ಉತ್ತಮ ಪ್ರದರ್ಶನ ನೀಡಿಲ್ಲ.

ಈ ಪಿಚ್ನಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 330 ಆಗಿದೆ. ಇಲ್ಲಿ ಬ್ಯಾಟ್ ಮಾಡಲು ಮೊದಲ ಇನ್ನಿಂಗ್ಸ್ ಸಹಾಯ ಮಾಡುತ್ತದೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ಅತ್ಯಂತ ಕಷ್ಟಕರವಾಗಿದೆ. ಇಲ್ಲಿ ಆಡಿದ 28 ಪಂದ್ಯಗಳಲ್ಲಿ ಯಾವುದೇ ತಂಡವು ಇಲ್ಲಿಯವರೆಗೆ 250 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಗುರಿಯನ್ನು ಬೆನ್ನಟ್ಟಿಲ್ಲ.
Published On - 7:46 am, Tue, 26 December 23



















