IPL 2024: ಅಫ್ಘಾನಿಸ್ತಾನ್ ತಂಡದ ಮೂವರು ಆಟಗಾರರು ಐಪಿಎಲ್ಗೆ ಅನುಮಾನ
IPL 2024: ನವೀನ್ ಉಲ್ ಹಕ್ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದಾರೆ. ಹಾಗೆಯೇ ಫಝಲ್ಹಕ್ ಫಾರೂಖಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಇನ್ನು ಮುಜೀಬ್ ಉರ್ ರೆಹಮಾನ್ ಈ ಬಾರಿಯ ಹರಾಜಿನ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಗಾಗಿ ಭರ್ಜರಿ ಸಿದ್ಧತೆಯಲ್ಲಿದ್ದ ಮೂವರು ಆಟಗಾರರಿಗೆ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಬಿಗ್ ಶಾಕ್ ನೀಡಿದೆ. ನವೀನ್ ಉಲ್ ಹಕ್, ಮುಜೀಬ್ ಉರ್ ರೆಹಮಾನ್ ಹಾಗೂ ಫಝಲ್ಹಕ್ ಫಾರೂಖಿಗೆ ಐಪಿಎಲ್ ಆಡಲು ನಿರಾಕ್ಷೇಪಣಾ ಪತ್ರ ನೀಡಲು ಎಸಿಬಿ ನಿರಾಕರಿಸಿದೆ.
ಈ ಮೂವರು ಆಟಗಾರರು ಅಫ್ಘಾನ್ ತಂಡದ ಕೇಂದ್ರೀಯ ಒಪ್ಪಂದದಿಂದ ಬಿಡುಗಡೆಯಾಗಲು ಬಯಸಿದ್ದರು. ಫ್ರಾಂಚೈಸಿ ಲೀಗ್ನಲ್ಲಿ ಭಾಗವಹಿಸಲು ಇಂತಹ ನಿರ್ಧಾರಕ್ಕೆ ಬಂದಿದ್ದರು. ಆದರೆ ರಾಷ್ಟ್ರೀಯ ತಂಡಕ್ಕಿಂತ ಫ್ರಾಂಚೈಸಿ ಲೀಗ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮುಂದಾಗಿದ್ದಾರೆಂಬ ಕಾರಣಕ್ಕೆ ಇದೀಗ ಈ ಮೂವರು ಆಟಗಾರರಿಗೆ ಎನ್ಒಸಿ ನೀಡದಿರಲು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.
ಅದರಂತೆ ನವೀನ್ ಉಲ್ ಹಕ್, ಫಝಲ್ಹಕ್ ಫಾರೂಖಿ ಹಾಗೂ ಮುಜೀಬ್ ಉರ್ ರೆಹಮಾನ್ಗೆ ಮುಂದಿನ 2 ವರ್ಷಗಳ ಕಾಲ ನಿರಾಕ್ಷೇಪಣಾ ಪತ್ರ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಅಂದರೆ ಈ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಬೇಕಿದ್ದರೆ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯಿಂದ ಎನ್ಒಸಿ ಪಡೆಯಬೇಕು. ಆದರೆ ಇದೀಗ ಈ ಮೂವರನ್ನು 2 ವರ್ಷಗಳ ಕಾಲ ಫ್ರಾಂಚೈಸಿ ಲೀಗ್ನಿಂದ ಬ್ಯಾನ್ ಮಾಡಿ ಶಿಸ್ತು ಕ್ರಮ ಕೈಗೊಳ್ಳಲು ಎಸಿಬಿ ನಿರ್ಧರಿಸಿದೆ.ಇದರಿಂದಾಗಿ ನವೀನ್ ಉಲ್ ಹಕ್, ಮುಜೀಬ್ ಉರ್ ರೆಹಮಾನ್ ಹಾಗೂ ಫಝಲ್ಹಕ್ ಫಾರೂಖಿ ಮುಂಬರುವ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ.
ನವೀನ್ ಉಲ್ ಹಕ್ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದಾರೆ. ಹಾಗೆಯೇ ಫಝಲ್ಹಕ್ ಫಾರೂಖಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಇನ್ನು ಮುಜೀಬ್ ಉರ್ ರೆಹಮಾನ್ ಈ ಬಾರಿಯ ಹರಾಜಿನ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.
ಇದೀಗ ಈ ಮೂವರು ಆಟಗಾರರ ಮೇಲೆ ಎಸಿಬಿ ಬ್ಯಾನ್ ವಿಧಿಸಿದೆ. ಒಂದು ವೇಳೆ ಈ ಆಟಗಾರರಿಗೆ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಎನ್ಒಸಿ ನೀಡಲು ನಿರಾಕರಿಸಿದರೆ, ಐಪಿಎಲ್ ಫ್ರಾಂಚೈಸಿಗಳು ಇವರ ಬದಲಿ ಆಟಗಾರರನ್ನು ಆಯ್ಕೆ ಮಾಡಲಿದೆ.
ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!
ಐಪಿಎಲ್ನಲ್ಲಿರುವ ಅಫ್ಘಾನಿಸ್ತಾನ್ ಆಟಗಾರರು:
- ರಶೀದ್ ಖಾನ್ (ಗುಜರಾತ್ ಟೈಟಾನ್ಸ್)
- ಮೊಹಮ್ಮದ್ ನಬಿ (ಮುಂಬೈ ಇಂಡಿಯನ್ಸ್)
- ನೂರ್ ಅಹ್ಮದ್ (ಗುಜರಾತ್ ಟೈಟಾನ್ಸ್)
- ರಹಮಾನುಲ್ಲಾ ಗುರ್ಬಾಝ್ (ಕೊಲ್ಕತ್ತಾ ನೈಟ್ ರೈಡರ್ಸ್)
- ನವೀನ್ ಉಲ್ ಹಕ್ (ಲಕ್ನೋ ಸೂಪರ್ ಜೈಂಟ್ಸ್)
- ಫಝಲ್ಹಕ್ ಫಾರೂಖಿ (ಸನ್ರೈಸರ್ಸ್ ಹೈದರಾಬಾದ್)
- ಅಝ್ಮತುಲ್ಲಾ ಒಮರ್ಝಾಹಿ (ಗುಜರಾತ್ ಟೈಟಾನ್ಸ್)
- ಮುಜೀಬ್ ಉರ್ ರೆಹಮಾನ್ (ಕೊಲ್ಕತ್ತಾ ನೈಟ್ ರೈಡರ್ಸ್)