PF Survey: ಯಾವ ಕಾರಣಕ್ಕೆ ಭಾರತೀಯರು ತಮ್ಮ ಉಳಿತಾಯ ಹಣ ಹಿಂಪಡೆಯುತ್ತಿದ್ದಾರೆ?

Money9 Personal Finance Survey: ಮನಿ9 ದೇಶದ ಅತಿದೊಡ್ಡ ಪರ್ಸನಲ್ ಫೈನಾನ್ಸ್ ಸಮೀಕ್ಷೆ ನಡೆಸಿದೆ. ಭಾರತೀಯರ ಉಳಿತಾಯ, ಖರ್ಚು ವೆಚ್ಚದ ಮಾಹಿತಿಯನ್ನು ಹೆಕ್ಕಿ ತೆಗೆದಿದೆ. ಕಳೆದ ವರ್ಷ ಮತ್ತು ಈ ವರ್ಷಕ್ಕೆ ಆಗಿರುವ ವ್ಯತ್ಯಾಸವನ್ನು ಈ ಸಮೀಕ್ಷೆ ನಮ್ಮ ಮುಂದೆ ಇಟ್ಟಿದೆ. ಪರ್ಸನಲ್ ಫೈನಾನ್ಸ್ ಸರ್ವೇ ಪ್ರಕಾರ ಕಳೆದ 5 ವರ್ಷಗಳಲ್ಲಿ ಶೇ. 67 ಕುಟುಂಬಗಳು ತಮ್ಮ ಉಳಿತಾಯ ಹಣವನ್ನು ಬಳಕೆ ಮಾಡಬೇಕಾಗಿ ಬಂದಿದೆ.

PF Survey: ಯಾವ ಕಾರಣಕ್ಕೆ ಭಾರತೀಯರು ತಮ್ಮ ಉಳಿತಾಯ ಹಣ ಹಿಂಪಡೆಯುತ್ತಿದ್ದಾರೆ?
ಉಳಿತಾಯ ಹಣ ಬಳಕೆ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Dec 29, 2023 | 2:20 PM

ಭಾರತೀಯ ಕುಟುಂಬಗಳಿಗೆ ಹಣದುಬ್ಬರ, ಅಂದರೆ ಬೆಲೆ ಏರಿಕೆ ಸಂಕಟ ಕಾಡುತ್ತಿದೆ. ಆಹಾರ ಪದಾರ್ಥಗಳ ಖರ್ಚು ಜೇಬಿಗೆ ಕನ್ನ ಹಾಕುತ್ತಿದೆ. ಇದು ಅಲ್ಲದೆ ಕೋವಿಡ್ ಮಹಾಮಾರಿ ಕುಟುಂಬಗಳ ಗಳಿಕೆಗೆ (earnings) ದೊಡ್ಡ ಹೊಡೆತವನ್ನು ನೀಡಿದೆ. ಇದು ಭಾರತೀಯ ಕುಟುಂಬಗಳ ಉಳಿತಾಯದ ಮೇಲೂ ಪರಿಣಾಮ ಬೀರಿದೆ. ಅಗತ್ಯ ವೆಚ್ಚಗಳನ್ನು ಪೂರೈಸಲು ಕುಟುಂಬಗಳು ತಮ್ಮ ಉಳಿತಾಯ ಖರ್ಚು ಮಾಡುವಂತಹ ಸ್ಥಿತಿಯಲ್ಲಿವೆ. ಭಾರತದ ಪಲ್ಸ್ ಪರ್ಸನಲ್ ಫೈನಾನ್ಸ್ ಸರ್ವೆ (Money9 Personal Finance Survey) ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದೆ. ಇಲ್ಲಿ ದೊರೆತ ಅಂಕಿ ಅಂಶಗಳು ಸರ್ಕಾರ ಮತ್ತು ಪಾಲಿಸಿ ಮೇಕರ್​ಗಳು ಮುಂದೆ ಯಾವ ಹೆಜ್ಜೆ ಇಡಬೇಕು ಎಂದು ತಿಳಿಸುತ್ತಿವೆ.

ಪರ್ಸನಲ್ ಫೈನಾನ್ಸ್ ಸರ್ವೇ ಪ್ರಕಾರ ಕಳೆದ 5 ವರ್ಷಗಳಲ್ಲಿ ಶೇ. 67 ಕುಟುಂಬಗಳು ತಮ್ಮ ಉಳಿತಾಯ ಹಣವನ್ನು ಬಳಕೆ ಮಾಡಬೇಕಾಗಿ ಬಂದಿದೆ. ಶೇ. 33 ರಷ್ಟು ಕುಟುಂಬಗಳು ತಮ್ಮ ಗಳಿಕೆಯನ್ನು ಬಳಸಿಕೊಂಡು ಸರಿದೂಗಿಸಿಕೊಂಡು ಬಂದಿವೆ. ಕಳೆದ ಐದು ವರ್ಷಗಳಲ್ಲಿ ಕುಟುಂಬಗಳು ಕೋವಿಡ್‌ನಂತಹ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿವೆ. ವೇತನ ಕಡಿತದಿಂದ ಕುಟುಂಬಗಳ ಆದಾಯ ಕಡಿಮೆಯಾದಾಗ ಅಥವಾ ಉದ್ಯೋಗ ಕಡಿತದಿಂದ ಸ್ಥಗಿತಗೊಂಡಾಗ, ವೈದ್ಯಕೀಯ ವೆಚ್ಚ ಭಾರೀ ಏರಿಕೆ ಕಂಡಿದೆ.

ಇದನ್ನೂ ಓದಿ: Fear of Job Loss: ಜಾಬ್ ಲಾಸ್ ಭಯ ನಿಮ್ಮನ್ನೂ ಕಾಡ್ತಿದೆಯಾ? ಜಾಬ್ ಕಳೆದುಕೊಳ್ಳುವ ಭಯದಲ್ಲಿರುವ ದೇಶದ ಜನರೆಷ್ಟು?

ಹಾಗಿದ್ದರೆ ಉಳಿತಾಯ ಹಣ ಯಾವ ಕಾರಣಕ್ಕೆ ಹಿಂಪಡೆಯಲಾಗಿದೆ?

Money9ನ ಸಮೀಕ್ಷೆಯು ತಮ್ಮ ಉಳಿತಾಯ ಹಣವನ್ನು ಹಿಂಪಡೆದ ಶೇ. 67 ಜನರಿಗೆ ಕಾಡಿರುವುದು ವೈದ್ಯಕೀಯ ವೆಚ್ಚದ ಹೊರೆ. ಸುಮಾರು 22.3 ಪ್ರತಿಶತ ಜನರು ಚಿಕಿತ್ಸೆಯ ವೆಚ್ಚ ಪೂರೈಸಲು ತಮ್ಮ ಉಳಿತಾಯವನ್ನು ಮುರಿದಿದ್ದಾರೆ. ಅದೇ ಸಮಯದಲ್ಲಿ, 15.2 ಪ್ರತಿಶತ ಜನರು ಉದ್ಯೋಗ ನಷ್ಟ ಅಥವಾ ಗಳಿಕೆಯ ಸ್ಥಗಿತದಿಂದಾಗಿ ತಮ್ಮ ಉಳಿತಾಯ ಹಿಂಪಡೆದಿದ್ದಾರೆ. ಇದಲ್ಲದೆ, ಹೆಚ್ಚುತ್ತಿರುವ ಶಿಕ್ಷಣದ ವೆಚ್ಚವು ಜನರು ತಮ್ಮ ಉಳಿತಾಯ ಹಣವನ್ನು ಬಳಕೆ ಮಾಡಬೇಕಾದ ಸ್ಥಿತಿಗೆ ತಂದಿದೆ. ಸುಮಾರು 11 ಪ್ರತಿಶತ ಕುಟುಂಬಗಳು ಶಿಕ್ಷಣದ ವೆಚ್ಚವನ್ನು ಪೂರೈಸಲು ತಮ್ಮ ಉಳಿತಾಯವನ್ನು ಮುರಿಯಬೇಕಾಗಿದೆ.

ಇದಲ್ಲದೆ, ಮದುವೆಯು ಉಳಿತಾಯವನ್ನು ಮುರಿಯಲು ಒಂದು ಕಾರಣವಾಗಿದೆ. ಕಳೆದ 5 ವರ್ಷಗಳಲ್ಲಿ 8.2 ಪ್ರತಿಶತ ಭಾರತೀಯ ಕುಟುಂಬಗಳು ಮದುವೆಯ ವೆಚ್ಚವನ್ನು ಪೂರೈಸಲು ತಮ್ಮ ಉಳಿತಾಯವನ್ನು ಖಾಲಿ ಮಾಡಿದ್ದಾರೆ. ಸರಿಸುಮಾರು ಅದೇ ಸಂಖ್ಯೆಯ ಕುಟುಂಬಗಳು, ಅಂದರೆ ಶೇಕಡಾ 8.2, ಸಾಲಗಳನ್ನು ಮರುಪಾವತಿಸಲು ತಮ್ಮ ಉಳಿತಾಯವನ್ನು ಮುರಿಯಲು ನಿರ್ಧರಿಸಿದ್ದಾರೆ. ಕರೋನಾ ಬಿಕ್ಕಟ್ಟಿನಲ್ಲಿ, ಅನೇಕ ಕುಟುಂಬಗಳು ತಮ್ಮ ದುಡಿಯುವ ಸದ್ಯಸನನ್ನು ಕಳೆದುಕೊಂಡವು. 2.3 ರಷ್ಟು ಕುಟುಂಬಗಳು ಕುಟುಂಬದ ಆದಾಯದ ಸದಸ್ಯರ ಸಾವಿನಿಂದ ತಮ್ಮ ಉಳಿತಾಯವನ್ನು ಕಳೆದುಕೊಂಡಿವೆ.

80% ಕುಟುಂಬಗಳಿಗೆ ಉದ್ಯೋಗ ನಷ್ಟದ ಭಯ

ಸಮೀಕ್ಷೆಯ ಪ್ರಕಾರ, ಶೇಕಡಾ 24 ರಷ್ಟು ಉದ್ಯೋಗಿಗಳು ಯಾವಾಗಲೂ ತಮ್ಮ ಕೆಲಸವನ್ನು ಕಳೆದುಕೊಳ್ಳುವ ಭೀತಿಯಲ್ಲೇ ಇದ್ದಾರೆ. ಇದನ್ನು ಹೊರತುಪಡಿಸಿ, 56 ಪ್ರತಿಶತದಷ್ಟು ಜನರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಭಯವಿದ್ದರೂ ಸ್ವಲ್ಪ ಧೈರ್ಯದಿಂದಿದ್ದಾರೆ. ಅಂದರೆ ದೇಶದ ಶೇ. 80ರಷ್ಟು ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ. ಉದ್ಯೋಗ ಕಳೆದುಕೊಳ್ಳುವ ಭಯ ಇಲ್ಲದ ಉದ್ಯೋಗಿಗಳು ಶೇ. 20 ರಷ್ಟು ಮಾತ್ರ.

ಇದನ್ನೂ ಓದಿ: Indians and Loans: ಭಾರತದ ಸಾಲಗಾರರ ಸಂಖ್ಯೆ ದ್ವಿಗುಣ! ಭಾರತೀಯರು ಅತಿ ಹೆಚ್ಚು ಸಾಲ ಮಾಡುತ್ತಿರೋದೇಕೆ?

ಶೇ. 56ರಷ್ಟು ಕುಟುಂಬಗಳು 2 ತಿಂಗಳು ಬದುಕಬಹುದು!

ಜಾಬ್ ಕಳೆದುಕೊಳ್ಳುವ ಭಯದಲ್ಲಿರುವ ಶೇಕಡಾ 24 ರಷ್ಟು ಜನರು ತಮ್ಮ ಉದ್ಯೋಗ ಹೋದರೂ 6 ತಿಂಗಳವರೆಗೆ ಬದುಕಬಲ್ಲಷ್ಟು ಉಳಿತಾಯವನ್ನು ಹೊಂದಿದ್ದಾರೆ ಎನ್ನುವ ಸಂಗತಿಯೂ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಶೇ. 56 ರಷ್ಟು ಕುಟುಂಬಗಳು ಕೆಲಸ ಕಳೆದುಕೊಂಡರೆ 2 ತಿಂಗಳಿಗೆ ಸಾಕಾವಷ್ಟು ಉಳಿತಾಯ ಹೊಂದಿವೆ. ಆದರೆ ಇವರಿಗೆ ಕೆಲಸ ಕಳೆದುಕೊಳ್ಳುವ ಭಯ ಕಡಿಮೆ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Fri, 29 December 23