Indians and Loans: ಭಾರತದ ಸಾಲಗಾರರ ಸಂಖ್ಯೆ ದ್ವಿಗುಣ! ಭಾರತೀಯರು ಅತಿ ಹೆಚ್ಚು ಸಾಲ ಮಾಡುತ್ತಿರೋದೇಕೆ?

Money9 Personal Finance Survey: ಮನಿ9 ದೇಶದ ಅತಿದೊಡ್ಡ ಪರ್ಸನಲ್ ಫೈನಾನ್ಸ್ ಸಮೀಕ್ಷೆ ನಡೆಸಿದೆ. ಭಾರತೀಯರ ಉಳಿತಾಯ, ಖರ್ಚು ವೆಚ್ಚದ ಮಾಹಿತಿಯನ್ನು ಹೆಕ್ಕಿ ತೆಗದಿದೆ. ಕಳೆದ ವರ್ಷ ಮತ್ತು ಈ ವರ್ಷಕ್ಕೆ ಆಗಿರುವ ವ್ಯತ್ಯಾಸವನ್ನು ನಮ್ಮ ಮುಂದೆ ಇಟ್ಟಿದೆ.

Indians and Loans: ಭಾರತದ ಸಾಲಗಾರರ ಸಂಖ್ಯೆ ದ್ವಿಗುಣ! ಭಾರತೀಯರು ಅತಿ ಹೆಚ್ಚು ಸಾಲ ಮಾಡುತ್ತಿರೋದೇಕೆ?
ಮನಿ9 ಪರ್ಸನಲ್ ಫೈನಾನ್ಸ್ ಸಮೀಕ್ಷೆ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Dec 29, 2023 | 2:21 PM

ಕೊರೋನಾ ನಂತರ ಭಾರತೀಯರ ಸಾಲಗಳ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಅಂಕಿಅಂಶಗಳು ಸಹ ಇದನ್ನೇ ಹೇಳಿವೆ. ಮನಿ9 ಪರ್ಸನಲ್ ಫೈನಾನ್ಸ್ ಸರ್ವೆ (Money9 Personal Finance Survey) ಸಹ ಇದೇ ವಿಚಾರವನ್ನು ನಿಮ್ಮ ಮುಂದೆ ಇಟ್ಟಿದೆ.

ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಸಾಲ ಪಡೆಯುವ ಭಾರತೀಯ ಕುಟುಂಬಗಳ ಸಂಖ್ಯೆ ದ್ವಿಗುಣಗೊಂಡಿದೆ. ಈ ವರ್ಷದ ಆಗಸ್ಟ್ ಮತ್ತು ನವೆಂಬರ್ ನಡುವೆ ನಡೆಸಿದ ಸಮೀಕ್ಷೆಯು ಭಾರತದಲ್ಲಿ ಶೇ. 22 ಕುಟುಂಬಗಳು ಸಾಲ ಪಡೆದಿವೆ. 2022ರ ಇದೇ ಅವಧಿಯಲ್ಲಿ ಸಾಲ ಪಡೆಯುವ ಭಾರತೀಯ ಕುಟುಂಬಗಳ ಸಂಖ್ಯೆ ಶೇ. 11ರಷ್ಟಿತ್ತು.

ಕಳೆದ ಒಂದು ವರ್ಷ ಶೇ. 11ರಷ್ಟು ಸಾಲ ಪಡೆದುಕೊಂಡವರಲ್ಲಿ ಶೇ. 8ರಷ್ಟು ಕುಟುಂಬಗಳು ಗೃಹ ಸಾಲವನ್ನು ತೆಗೆದುಕೊಂಡಿದೆ. ಇನ್ನು ಶೇ. 4 ರಷ್ಟು ಜನರ ವೆಹಿಕಲ್ ಲೋನ್ ತೆಗೆದುಕೊಂಡಿದ್ದಾರೆ. 2 ಪ್ರತಿಶತದಷ್ಟು ಜನರು ಶಿಕ್ಷಣ ಸಾಲವನ್ನು ತೆಗೆದುಕೊಂಡಿದ್ದಾರೆ. ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಪರ್ಸನಲ್ ಲೋನ್ ತೆಗೆದುಕೊಳ್ಳುತ್ತವೆ. ವಾಹನ ಸಾಲದಲ್ಲಿ ಮಹಾರಾಷ್ಟ್ರ, ಚಂಡೀಗಢ, ಹರಿಯಾಣ, ಪಂಜಾಬ್ ಮತ್ತು ದೆಹಲಿ ಮುಂದಿವೆ.

ಇದನ್ನೂ ಓದಿ: PF Survey: ಯಾವ ಕಾರಣಕ್ಕೆ ಭಾರತೀಯರು ತಮ್ಮ ಉಳಿತಾಯ ಹಣ ಹಿಂಪಡೆಯುತ್ತಿದ್ದಾರೆ?

ಸುಮಾರು 21 ಪ್ರತಿಶತ ಭಾರತೀಯ ಕುಟುಂಬಗಳು ಮುಂದಿನ ವರ್ಷ ಸಾಲ ತೆಗೆದುಕೊಳ್ಳುವ ಪ್ಲಾನ್ ಮಾಡುತ್ತಿವೆ ಎಂದು ಸಮೀಕ್ಷೆ ಹೇಳಿದೆ. ಮುಂದಿನ ವರ್ಷ, 10 ಪ್ರತಿಶತ ಭಾರತೀಯ ಕುಟುಂಬಗಳು ಗೃಹ ಸಾಲವನ್ನು ತೆಗೆದುಕೊಳ್ಳಲು ಯೋಜಿಸುತ್ತಿವೆ, ಇದರಲ್ಲಿ ದೆಹಲಿ, ಕರ್ನಾಟಕ, ಛತ್ತೀಸ್‌ಗಢ, ಜಮ್ಮು-ಕಾಶ್ಮೀರ ಮತ್ತು ಹಿಮಾಚಲಗಳು ಮುಂದಿವೆ. ಮುಂದಿನ ವರ್ಷ, ಶೇಕಡಾ 5 ರಷ್ಟು ಜನರು ವಾಹನ ಸಾಲಕ್ಕಾಗಿ ಯೋಜಿಸುತ್ತಿದ್ದಾರೆ, ಇದರಲ್ಲಿ ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಛತ್ತೀಸ್‌ಗಢ ಮತ್ತು ರಾಜಸ್ಥಾನವು ಮುಂದಿದೆ.

ಮನಿ9 ಸಮೀಕ್ಷೆ ನೀಡಿರುವ ಅಂಕಿಅಂಸಗಳು ರಿಸರ್ವ್ ಬ್ಯಾಂಕ್‌ನ ಅಂಕಿಅಂಶಗಳೊಂದಿಗೆ ಹೊಂದಿಕೆಯಾಗುತ್ತದೆ. ರಿಸರ್ವ್ ಬ್ಯಾಂಕ್ ಪ್ರಕಾರ, ಈ ವರ್ಷದ ಅಕ್ಟೋಬರ್ ಅಂತ್ಯದವರೆಗೆ ಪರ್ಸನಲ್ ಲೋನ್ ಬೆಳವಣಿಗೆಯು ಶೇಕಡಾ 30 ರಷ್ಟಿದೆ, ಈ ಪೈಕಿ ಗೃಹ, ಕ್ರೆಡಿಟ್ ಕಾರ್ಡ್ ಸಾಲಗಳು ಮತ್ತು ವಾಹನ ಸಾಲಗಳಲ್ಲಿ ಹೆಚ್ಚಿನ ಬೆಳವಣಿಗೆ ದಾಖಲಾಗಿದೆ.

ಇದನ್ನೂ ಓದಿ: Fear of Job Loss: ಜಾಬ್ ಲಾಸ್ ಭಯ ನಿಮ್ಮನ್ನೂ ಕಾಡ್ತಿದೆಯಾ? ಜಾಬ್ ಕಳೆದುಕೊಳ್ಳುವ ಭಯದಲ್ಲಿರುವ ದೇಶದ ಜನರೆಷ್ಟು?

ಆಗಸ್ಟ್‌ನಿಂದ ನವೆಂಬರ್‌ವರೆಗೆ ದೇಶದ 20 ರಾಜ್ಯಗಳ 115ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಸಮೀಕ್ಷೆಯನ್ನು 10 ವಿವಿಧ ಭಾಷೆಗಳಲ್ಲಿ ನಡೆಸಲಾಯಿತು, ಇದು ದೇಶದ 1,140 ಹಳ್ಳಿಗಳು ಅಥವಾ ನಗರ ವಾರ್ಡ್‌ಗಳನ್ನು ಒಳಗೊಂಡಿತ್ತು. ಈ ಸಮೀಕ್ಷೆಯು ಭಾರತೀಯರ ಗಳಿಕೆ, ವೆಚ್ಚಗಳು, ಉಳಿತಾಯ ಮತ್ತು ಹೂಡಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದೆ ಇಟ್ಟಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Fri, 29 December 23