Fear of Job Loss: ಜಾಬ್ ಲಾಸ್ ಭಯ ನಿಮ್ಮನ್ನೂ ಕಾಡ್ತಿದೆಯಾ? ಜಾಬ್ ಕಳೆದುಕೊಳ್ಳುವ ಭಯದಲ್ಲಿರುವ ದೇಶದ ಜನರೆಷ್ಟು?

Money9 Personal Finance Survey: ಮನಿ9 ದೇಶದ ಅತಿದೊಡ್ಡ ಪರ್ಸನಲ್ ಫೈನಾನ್ಸ್ ಸಮೀಕ್ಷೆ ನಡೆಸಿದೆ. ಭಾರತೀಯರ ಉಳಿತಾಯ, ಖರ್ಚು ವೆಚ್ಚದ ಮಾಹಿತಿಯನ್ನು ಹೆಕ್ಕಿ ತೆಗದಿದೆ. ಕಳೆದ ವರ್ಷ ಮತ್ತು ಈ ವರ್ಷಕ್ಕೆ ಆಗಿರುವ ವ್ಯತ್ಯಾಸವನ್ನು ನಮ್ಮ ಮುಂದೆ ಇಟ್ಟಿದೆ. ಭಾರತದಲ್ಲಿ ಶೇ. 80ರಷ್ಟು ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಬದುಕುತ್ತಿದ್ದಾರಂತೆ. ಈ ಸಮೀಕ್ಷೆ ವಿವರ ಈ ಲೇಖನದಲ್ಲಿದೆ...

Fear of Job Loss: ಜಾಬ್ ಲಾಸ್ ಭಯ ನಿಮ್ಮನ್ನೂ ಕಾಡ್ತಿದೆಯಾ? ಜಾಬ್ ಕಳೆದುಕೊಳ್ಳುವ ಭಯದಲ್ಲಿರುವ ದೇಶದ ಜನರೆಷ್ಟು?
ನಿರುದ್ಯೋಗ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Dec 29, 2023 | 2:17 PM

ರಾಷ್ಟ್ರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಒಂದು ಕಡೆಯಾದರೆ ಇನ್ನೊಂದು ಕಡೆ ಉದ್ಯೋಗ ಕಳೆದುಕೊಳ್ಳುವ (fear of job loss) ಭಯದಲ್ಲಿರುವ ಉದ್ಯೋಗಿಗಳ ದೊಡ್ಡ ವರ್ಗವಿದೆ. ದೇಶದ 20 ರಾಜ್ಯಗಳ 115 ಜಿಲ್ಲೆಗಳಲ್ಲಿ ಭಾರತೀಯ ಕುಟುಂಬಗಳ ಮೇಲೆ ನಡೆಸಲಾದ Money9 ನ ವೈಯಕ್ತಿಕ ಹಣಕಾಸು ಸಮೀಕ್ಷೆಯ ಪ್ರಕಾರ ಶೇಕಡಾ 24 ರಷ್ಟು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ ಎನ್ನುವುದು ಗೊತ್ತಾಗಿದೆ. ಇನ್ನು ಶೇ. 56 ಶೇಕಡಾ ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿದ್ದರೂ ಅಷ್ಟೇನೂ ತಲೆ ಕೆಡಿಸಿಕೊಂಡಿಲ್ಲ. ಅಂದರೆ ದೇಶದ ಶೇ. 80ರಷ್ಟು ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಬದುಕುತ್ತಿದ್ದಾರೆ. 20 ರಷ್ಟು ಜನರು ಮಾತ್ರ ತಮ್ಮ ಉದ್ಯೋಗ ಕಳೆದುಕೊಳ್ಳುವ ಭಯ ಹೊಂದಿಲ್ಲ ಎನ್ನುವ ಫಲಿತಾಂಶ ನಮಗೆ ಗೊತ್ತಾಗುತ್ತದೆ.

ಸಮೀಕ್ಷೆಯ ಪ್ರಕಾರ, ಶೇಕಡಾ 24 ರಷ್ಟು ಉದ್ಯೋಗಿಗಳು ಯಾವಾಗಲೂ ತಮ್ಮ ಕೆಲಸವನ್ನು ಕಳೆದುಕೊಳ್ಳುವ ಭೀತಿಯಲ್ಲೇ ಇದ್ದಾರೆ. ಇದನ್ನು ಹೊರತುಪಡಿಸಿ, 56 ಪ್ರತಿಶತದಷ್ಟು ಜನರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಭಯವಿದ್ದರೂ ಸ್ವಲ್ಪ ಧೈರ್ಯದಿಂದಿದ್ದಾರೆ. ಅಂದರೆ ದೇಶದ ಶೇ.80ರಷ್ಟು ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ. ಇನ್ನುಳಿದ ಶೇ. 20 ರಷ್ಟು ಜನರಿಗೆ ಮಾತ್ರ ಉದ್ಯೋಗ ಕಳೆದುಕೊಳ್ಳುವ ಭಯ ಇಲ್ಲ.

Money9 ಸಮೀಕ್ಷೆ ಹೇಳುವಂತೆ ಹೆಚ್ಚಿನ ಭಾರತೀಯ ಕುಟುಂಬಗಳು ಆರ್ಥಿಕವಾಗಿ ಸುಭದ್ರವಾಗಿಲ್ಲ, ಕೇವಲ 6 ಪ್ರತಿಶತ ಕುಟುಂಬಗಳು ಸಂಪೂರ್ಣವಾಗಿ ಆರ್ಥಿಕವಾಗಿ ಸುಭದ್ರವಾಗಿವೆ, ಸುಮಾರು 20 ಪ್ರತಿಶತ ಕುಟುಂಬಗಳು ಕಡಿಮೆ ಸುರಕ್ಷತೆ ಹೊಂದಿವೆ, 36 ಪ್ರತಿಶತ ಕುಟುಂಬಗಳು ಆರ್ಥಿಕವಾಗಿ ಅಭದ್ರವಾಗಿವೆ ಎನ್ನುವ ಅಂಶ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಶೇ. 38 ರಷ್ಟು ಕುಟುಂಬಗಳು ಆರ್ಥಿಕ ಬಿಕ್ಕಟ್ಟಿನಲ್ಲಿವೆ. ಶೇ. 7ರಷ್ಟು ಕುಟುಂಬಗಳು ಒಂದು ತಿಂಗಳಿಗೆ ಸಂಪಾದನೆ ಮಾಡುವುದು ಅಂದರೆ ಅವುಗಳ ಮಾಸಿಕ ಆದಾಯವು ಅವರ ತಿಂಗಳ ವೆಚ್ಚ ಭರಿಸಲು ಸಾಕಾಗುತ್ತಿಲ್ಲ ಎನ್ನುವುದನ್ನು ಸಮೀಕ್ಷೆ ಹೇಳಿದೆ.

ಇದನ್ನೂ ಓದಿ: PF Survey: ಯಾವ ಕಾರಣಕ್ಕೆ ಭಾರತೀಯರು ತಮ್ಮ ಉಳಿತಾಯ ಹಣ ಹಿಂಪಡೆಯುತ್ತಿದ್ದಾರೆ?

ಬಿಹಾರ, ಒಡಿಶಾ, ಜಾರ್ಖಂಡ್, ಅಸ್ಸಾಂ ಮತ್ತು ಪಶ್ಚಿಮ ಬಂಗಾಳವು ಭಾರತೀಯ ಕುಟುಂಬಗಳ ಮಾಸಿಕ ಆದಾಯ ಅತಿ ಕಡಿಮೆ ಇರುವ ರಾಜ್ಯ ಎನ್ನುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಸಮೀಕ್ಷೆಯ ಪ್ರಕಾರ, ಭಾರತದಲ್ಲಿನ 39 ಪ್ರತಿಶತ ಕುಟುಂಬಗಳು ಮಾಸಿಕ ಆದಾಯ 15 ರೂ. ಗಿಂತ ಕಡಿಮೆ ಇದೆ. 10 ಭಾಷೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ಭಾರತೀಯ ಕುಟುಂಬಗಳನ್ನು ಗಣನೆಗೆ ತೆಗೆದುಕೊಂಡು ಮನಿ9 ಸಮೀಕ್ಷೆ ನಡೆಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್