Sign In

By signing in or creating an account, you agree with Associated Broadcasting Company's Terms & Conditions and Privacy Policy.

Savings In Gold: ಭಾರತದ ಚಿನ್ನದ ಗಣಿಯಾದ ಬೆಂಗಳೂರು! ಚಿನ್ನದ ಮೇಲೆ ಹೂಡಿಕೆ ಮಾಡೋದ್ರಲ್ಲಿ ಬೆಂಗಳೂರೇ ಫಸ್ಟ್!

Money9 Pulse Personal Finance Survey 2023: ಮನಿ9 ದೇಶದ ಅತಿದೊಡ್ಡ ಪರ್ಸನಲ್ ಫೈನಾನ್ಸ್ ಸಮೀಕ್ಷೆ ನಡೆಸಿದೆ. ಭಾರತೀಯರ ಉಳಿತಾಯ, ಖರ್ಚು ವೆಚ್ಚದ ಮಾಹಿತಿಯನ್ನು ಹೆಕ್ಕಿ ತೆಗದಿದೆ. ಕಳೆದ ವರ್ಷ ಮತ್ತು ಈ ವರ್ಷಕ್ಕೆ ಆಗಿರುವ ವ್ಯತ್ಯಾಸವನ್ನು ನಮ್ಮ ಮುಂದೆ ಇಟ್ಟಿದೆ. ಚಿನ್ನದ ಮೇಲಿನ ಹೂಡಿಕೆ ಪ್ರವೃತ್ತಿಯನ್ನು ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಲಾಗಿದೆ. ಈ ವಿಚಾರದಲ್ಲಿ ಉತ್ತರ ಭಾರತವನ್ನು ದಕ್ಷಿಣ ಭಾರತ ಮೀರಿಸಿದೆ.

Savings In Gold: ಭಾರತದ ಚಿನ್ನದ ಗಣಿಯಾದ ಬೆಂಗಳೂರು! ಚಿನ್ನದ ಮೇಲೆ ಹೂಡಿಕೆ ಮಾಡೋದ್ರಲ್ಲಿ ಬೆಂಗಳೂರೇ ಫಸ್ಟ್!
ಚಿನ್ನ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Dec 29, 2023 | 4:48 PM

ಭಾರತೀಯರಿಗೆ ಚಿನ್ನದ ಮೇಲೆ ಮೊದಲಿನಿಂದಲೂ ಹೆಚ್ಚಿನ ಮೋಹ. ಸೌಂದರ್ಯ ಇಮ್ಮಡಿಗೊಳಿಸುವ ಚಿನ್ನ ಮುಂದಿನ ಭವಿಷ್ಯ ರೂಪಿಸುವ ಕೆಲಸವನ್ನು ರೂಪಿಸಿಕೊಳ್ಳಲು ಇದು ಅತ್ಯಂತ ಉಪಯುಕ್ತವಾಗಿದೆ. ಭಾರತೀಯ ಕುಟುಂಬಗಳು ಯಾವಾಗಲೂ ತಮ್ಮ ಉಳಿತಾಯವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿವೆ. ಆದರೆ ಕಳೆದ ಒಂದು ವರ್ಷದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. Money9 ನ ಭಾರತದ ಪಲ್ಸ್ ಪರ್ಸನಲ್ ಫೈನಾನ್ಸ್ ಸಮೀಕ್ಷೆಯು (Money9 Pulse Personal Finance Survey 2023) 2022 ರಲ್ಲಿ ಶೇ. 15 ರಷ್ಟು ಕುಟುಂಬಗಳು ಚಿನ್ನದ ಮೇಲೆ ಉಳಿತಾಯ ಮಾಡುತ್ತಿದ್ದರೆ 2023 ರಲ್ಲಿಈ ಪ್ರಮಾಣ ಶೇ. 21ಕ್ಕೆ ಏರಿದೆ. ಚಿನ್ನದ ದರ ನಿರಂತರವಾಗಿ ಏರುತ್ತಿರುವುದು ಈ ಆಕರ್ಷಣೆಗೆ ಒಂದು ಪ್ರಮುಖ ಕಾರಣ. ಕಳೆದ ಒಂದು ವರ್ಷದಲ್ಲಿ ಚಿನ್ನ ಅತ್ಯುತ್ತಮ ಆದಾಯವನ್ನು ನೀಡಿದೆ. ಸರ್ಕಾರ ಸಾವರಿನ್ ಗೋಲ್ಡ್ ಬಾಂಡ್ ಪರಿಚಯಿಸಿದ್ದು ಚಿನ್ನದತ್ತ ಒಲವು ಹೆಚ್ಚಲು ಇನ್ನೊಂದು ಕಾರಣವಾಗಿದೆ.

ಹಿಂದೆ ಉಳಿದಿರುವ ಉತ್ತರ ಭಾರತ

ಚಿನ್ನದ ಖರೀದಿ ಟ್ರೆಂಡ್ ಗಮನಿಸಿದರೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಕಳೆದ ವರ್ಷ ಪಶ್ಚಿಮ ಭಾರತದ ಪ್ರಾಬಲ್ಯ ಚಿನ್ನ ಖರೀದಿಯಲ್ಲಿತ್ತು. 2022 ರ ಸಮೀಕ್ಷೆಯಲ್ಲಿ, ಸೂರತ್ ನಂಬರ್ 1 ನಗರವಾಗಿತ್ತು. ಶೇ. 51ರಷ್ಟು ಕುಟುಂಬಗಳು ಚಿನ್ನದ ಮೇಲೆ ಉಳಿತಾಯ ಮಾಡುತ್ತಿದ್ದವು ಎನ್ನುವ ಅಂಶ ಗೊತ್ತಾಗಿತ್ತು. ಕೃಷ್ಣಾ ಮತ್ತು ಥಾಣೆ ಹೆಸರುಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದವು. ಆದರೆ ಈ ವರ್ಷ ಟಾಪ್ 3 ನಗರಗಳು ಬದಲಾಗಿವೆ.

ಇದನ್ನೂ ಓದಿ: PF Survey: ಯಾವ ಕಾರಣಕ್ಕೆ ಭಾರತೀಯರು ತಮ್ಮ ಉಳಿತಾಯ ಹಣ ಹಿಂಪಡೆಯುತ್ತಿದ್ದಾರೆ?

ಚಿನ್ನದ ಮೇಲಿನ ಉಳಿತಾಯದಲ್ಲಿ ಬೆಂಗಳೂರು ಅಗ್ರಸ್ಥಾನ

ಬೆಂಗಳೂರಿನ ಶೇ. 69 ರಷ್ಟು ಕುಟುಂಬಗಳು ತಮ್ಮ ಉಳಿತಾಯ ಹಣವನ್ನು ಚಿನ್ನದ ಮೇಲೆ ಹಾಕುತ್ತಿವೆ. ತಿರುವನಂತಪುರಂ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಶೇ. 66ರಷ್ಟು ಕುಟುಂಬಗಳು ಚಿನ್ನದ ಮೇಲೆ ಉಳಿತಾಯ ಮಾಡಿಕೊಂಡು ಬಂದಿವೆ. ಮೂರನೇ ಸ್ಥಾನದಲ್ಲಿ ಡಾರ್ಜಿಲಿಂಗ್‌ ಬಂದಿದ್ದು ಅಚ್ಚರಿ ಮೂಡಿಸಿದೆ. ಇದು ಡಾರ್ಜಿಲಿಂಗ್‌ನ ಜನರ ಆದಾಯದಲ್ಲಿ ಹೇಗೆ ಏರಿಕೆಯಾಗಿದೆ ಎನ್ನುವ ಅಂಶವನ್ನು ಎತ್ತಿ ತೋರಿಸಿದೆ.

ಚಿನ್ನದ ಮೇಲಿನ ಹೂಡಿಕೆ ಮೇಲೆ ಪೂರ್ವ ಮತ್ತು ದಕ್ಷಿಣ ಭಾರತದ ಪ್ರಾಬಲ್ಯ

ಚಿನ್ನದಲ್ಲಿ ಹೂಡಿಕೆ ಮಾಡುವ ನಗರಗಳ ಪಟ್ಟಿ ನೋಡಿದಾಗ ಪೂರ್ವ ಮತ್ತು ದಕ್ಷಿಣ ಭಾರತದ ಸ್ಪಷ್ಟ ಪ್ರಾಬಲ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ಶೇ. 57 ಪ್ರತಿಶತ ಕುಟುಂಬಗಳು ಚಿನ್ನದ ಮೇಲೆ ಹೂಡಿಕೆ ಮಾಡುವ ಮೂಲಕ ಜಲ್ಪಾಗುರಿ ನಾಲ್ಕನೇ ನಗರವಾಗಿ ಹೊರಹೊಮ್ಮಿದೆ. ಕರ್ನಾಟಕದ ಶಿವಮೊಗ್ಗ ಮತ್ತು ಬಂಗಾಳದ ಪಶ್ಚಿಮ ಮೇದಿನಿಪುರ ನಂತರದ ಸ್ಥಾನ ಆಕ್ರಮಿಸಿಕೊಂಡಿವೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಟಾಪ್ 10 ನಗರಗಳಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಕೂಡ ಸೇರಿದೆ. ಅಗ್ರ 10ರಲ್ಲಿ ರಾಜ್‌ಕೋಟ್, ಕೊಯಮತ್ತೂರು, ಫರಿದಾಬಾದ್ ಸಹ ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ: Indians and Loans: ಭಾರತದ ಸಾಲಗಾರರ ಸಂಖ್ಯೆ ದ್ವಿಗುಣ! ಭಾರತೀಯರು ಅತಿ ಹೆಚ್ಚು ಸಾಲ ಮಾಡುತ್ತಿರೋದೇಕೆ?

ಪ್ರತಿಷ್ಠಿತ ಜಾಗತಿಕ ಏಜೆನ್ಸಿ ಆರ್‌ಟಿಐ ಇಂಟರ್‌ನ್ಯಾಷನಲ್ ಈ ಸಮೀಕ್ಷೆ ಮಾಡಿದೆ. ವಿಶ್ವಬ್ಯಾಂಕ್‌ನಂತಹ ದೊಡ್ಡ ಸಂಸ್ಥೆಗಳಿಗಾಗಿ ಈ ಸಂಸ್ಥೆ ಇಂತಹ ಸಮೀಕ್ಷೆಗಳನ್ನು ನಡೆಸಿಕೊಂಡು ಬಂದಿದ್ದು ಈಗ ಮನಿ9 ಜತೆಗೂಡಿ ಸಮೀಕ್ಷೆ ನಡೆಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ