Chicken Pepper Fry: ರೆಸ್ಟೋರೆಂಟ್ ಸ್ಟೈಲ್ ಸೂಪರ್ ಟೇಸ್ಟಿ ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ ಇಲ್ಲಿದೆ
ನೀವು ಕೂಡ ಯಾವುದೇ ರೆಸ್ಟೋರೆಂಟ್ಗೆ ಹೋಗದೇ ಮನೆಯಲ್ಲಿಯೇ ರೆಸ್ಟೋರೆಂಟ್ ಸ್ಟೈಲ್ ರುಚಿ ನೀಡುವ ಚಿಕನ್ ಪೆಪ್ಪರ್ ಫ್ರೈ ತಯಾರಿಸಿ. ಬಾಯಲ್ಲಿ ನೀರೂರಿಸುವ ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್‍ನಲ್ಲೇ ವಿಭಿನ್ನವಾಗಿ ರೆಸಿಪಿ ಮಾಡುವ ಆಲೋಚನೆ ಮಾಡುವವರಿಗೆ ಚಿಕನ್ ಪೆಪ್ಪರ್ ಫ್ರೈ ಉತ್ತಮ ಆಯ್ಕೆ. ಈ ವಿಧಾನ ನಿಮಗೆ ರೆಸ್ಟೋರೆಂಟ್ ಸ್ಟೈಲ್ ರುಚಿಯನ್ನು ನೀಡುತ್ತದೆ. ಹೊರಗೆ ಗರಿಗರಿಯಾಗಿ, ಒಳಭಾಗದಲ್ಲಿ ಮೃದುವಾದ ಕೋಳಿ ಮಾಂಸ, ಕಾಳು ಮೆಣಸಿನ ಸುವಾಸನೆಯೊಂದಿಗೆ ನಾಲಿಗೆಗೆ ಉತ್ತಮ ರುಚಿಯನ್ನು ನೀಡುತ್ತದೆ. ಆದ್ದರಿಂದ ನೀವು ಕೂಡ ಯಾವುದೇ ರೆಸ್ಟೋರೆಂಟ್ಗೆ ಹೋಗದೇ ಮನೆಯಲ್ಲಿಯೇ ರೆಸ್ಟೋರೆಂಟ್ ಸ್ಟೈಲ್ ರುಚಿ ನೀಡುವ ಚಿಕನ್ ಪೆಪ್ಪರ್ ಫ್ರೈ ತಯಾರಿಸಿ. ಬಾಯಲ್ಲಿ ನೀರೂರಿಸುವ ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್ ಪೆಪ್ಪರ್ ಫ್ರೈಗೆ ಬೇಕಾಗುವ ಸಾಮಾಗ್ರಿಗಳು:
- ಕೋಳಿ ಮಾಂಸ
- ಕರಿಮೆಣಸಿನ ಪುಡಿ
- ಉಪ್ಪು
- ಮೆಣಸಿನಕಾಯಿ
- ಅರಿಶಿನ
- ಎಣ್ಣೆ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಲವಂಗ, ಏಲಕ್ಕಿ, ದಾಲ್ಚಿನ್ನಿ, ಜೀರಿಗೆ
- ಸಣ್ಣದಾಗಿ ಕೊಚ್ಚಿದ ಶುಂಠಿ, ಬೆಳ್ಳುಳ್ಳಿ.
ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ:
ಇದಕ್ಕಾಗಿ ಮೊದಲು ಕೋಳಿ ಮಾಂಸವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅದರ ನಂತರ, ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಚಿಕನ್, ಉಪ್ಪು, ಅರಿಶಿನ, ಮೆಣಸಿನಕಾಯಿ, ಬಿಸಿ ಎಣ್ಣೆ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮ್ಯಾರಿನೇಟ್ ಮಾಡಿ. ಒಂದು ಗಂಟೆ ಫ್ರಿಡ್ಜ್ ನಲ್ಲಿಟ್ಟರೆ ರುಚಿ ಚೆನ್ನಾಗಿರುತ್ತದೆ. ಸಾಧ್ಯವಾದರೆ ರಾತ್ರಿಯಿಡೀ ಫ್ರಿಜ್ ನಲ್ಲಿಡಿ. ಈಗ ಕಡಾಯಿಯನ್ನು ತೆಗೆದುಕೊಂಡು ಅದರಲ್ಲಿ ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆಯನ್ನು ಹಾಕಿ. ಎಣ್ಣೆ ತುಂಬಾ ಬಿಸಿಯಾದಾಗ, ಚಿಕನ್ ಸೇರಿಸಿ. ಎಣ್ಣೆಯಲ್ಲಿ ಚೆನ್ನಾಗಿ ಡೀಪ್ ಫ್ರೈ ಮಾಡಿ.
ಇದನ್ನೂ ಓದಿ: ಬೆಳಗಿನ ತಿಂಡಿಗೆ ಆರೋಗ್ಯಕರವಾದ ರಾಗಿ ರೊಟ್ಟಿ ಮಾಡಿ, ಇಲ್ಲಿದೆ ಸುಲಭ ಪಾಕವಿಧಾನ
ಈಗ ಸ್ವಲ್ಪ ಕಾಳುಮೆಣಸನ್ನು ತೆಗೆದುಕೊಂಡು ಹಸಿಯಾಗಿ ರುಬ್ಬಿಕೊಳ್ಳಿ. ಅದರ ನಂತರ ಇನ್ನೊಂದು ಕಡಾಯಿಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ. ಅದು ಬಿಸಿಯಾದ ನಂತರ ಅದಕ್ಕೆ ಕೊಚ್ಚಿದ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಜೀರಿಗೆ, ಲವಂಗ, ದಾಲ್ಚಿನ್ನಿ, ಏಲಕ್ಕಿ ಸೇರಿಸಿ ಮತ್ತು ಒಂದು ನಿಮಿಷ ಹುರಿಯಿರಿ. ನಂತರ ಈಗಾಗಲೇ ಫ್ರೈ ಮಾಡಿದ ಚಿಕನ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಚಿಕನ್ ಹಾಕುವ ಮೊದಲು ಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಿ ಸ್ಟವ್ ಆಫ್ ಮಾಡಿ. ಅಷ್ಟೇ ಟೇಸ್ಟಿ ಚಿಕನ್ ಪೆಪ್ಪರ್ ಫ್ರೈ ರೆಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:15 pm, Sun, 10 December 23