ಬೆಂಗಳೂರು: ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲ ಎಂದು ಹೆಂಡತಿಯನ್ನೇ ಕೊಂದ ಗಂಡ

ಗಂಡ ಮುಬಾರಕ್, ಶಿರೀನ್​ರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಚಿಕ್ಕಬಾಣಾವರ ಕೆರೆಗೆ ಎಸೆದಿದ್ದ. ಮೃತ ದೇಹವನ್ನ ಬೈಕ್ ನಲ್ಲಿ ಸಾಗಿಸಿ ಕೆರೆಗೆ ಎಸೆದಿದ್ದ ಎಂದು ಮಾಹಿತಿ ಲಭ್ಯವಾಗಿದೆ.

ಬೆಂಗಳೂರು: ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲ ಎಂದು ಹೆಂಡತಿಯನ್ನೇ ಕೊಂದ ಗಂಡ
ಮುಬಾರಕ್, ಶಿರೀನ್ ಬಾನು
Follow us
TV9 Web
| Updated By: guruganesh bhat

Updated on:Aug 23, 2021 | 7:13 PM

ಬೆಂಗಳೂರು: ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲ ಎಂದು ಪತ್ನಿಯನ್ನೇ ಹತ್ಯೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಇದೀಗ ಆರೋಪಿ ಪತಿ ಮುಬಾರಕ್‌ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಆಗಸ್ಟ್ 5ರಂದು ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದ. ಬಳಿಕ, ಚಿಕ್ಕಬಾಣಾವರ ಕೆರೆಗೆ ಎಸೆದಿದ್ದ. ಪತ್ನಿ ಶಿರೀನ್ ಬಾನು (25) ಎಂಬಾಕೆಯನ್ನು ಪತಿ ಮುಬಾರಕ್ ಕೊಲೆ ಮಾಡಿದ್ದ.

ಶಿರೀನ್ ಬಾನು ಹತ್ಯೆಗೈದು ಆಕೆಯ ಮೃತದೇಹವನ್ನು ಸ್ವತಃ ಪತಿಯೇ ಚಿಕ್ಕಬಾಣಾವರ ಕೆರೆಗೆ ಎಸೆದಿದ್ದ. ಈ ವಿಷಯ ತಿಳಿಯದೆ ಶಿರೀನ್ ಬಾನುಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಬಳಿಕ, ಶಿರೀನ್ ಪತಿ ಮುಬಾರಕ್ ಮೇಲೆ ಪೋಷಕರಿಗೆ ಅನುಮಾನ ಉಂಟಾಗಿತ್ತು. ಹೀಗಾಗಿ ಮುಬಾರಕ್‌ನನ್ನು ಬಂಧಿಸಿ ವಿಚಾರಿಸುವಂತೆ, ಶಿರೀನ್ ಬಾನು ಪೋಷಕರು ಒತ್ತಡ ಹಾಕಿದ್ದರು. ಬಳಿಕ, ಇಂದು (ಆಗಸ್ಟ್ 23) ವಕೀಲರೊಂದಿಗೆ ಮುಬಾರಕ್ ಠಾಣೆಗೆ ಹಾಜರಾಗಿದ್ದಾರೆ. ಸೋಲದೇವನಹಳ್ಳಿ ಪೊಲೀಸರ ವಿಚಾರಣೆ ವೇಳೆ ಮುಬಾರಕ್ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ.

ಮುಬಾರಕ್ (32) ಕೊಲೆ ಮಾಡಿದ ಪತಿ, ಆತ ಹಾಸಿಗೆ ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಎರಡು ವರ್ಷದ ಹಿಂದೆ ದಾವಣಗೆರೆಯಿಂದ ಬಂದು ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ಗಂಡನ ಹೇಯಕೃತ್ಯದಿಂದ ಊಟದ ವಿಷಯವಾಗಿ ಮಡದಿಯ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.

ಗಂಡ ಮುಬಾರಕ್, ಶಿರೀನ್​ರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಚಿಕ್ಕಬಾಣಾವರ ಕೆರೆಗೆ ಎಸೆದಿದ್ದ. ಮೃತ ದೇಹವನ್ನ ಬೈಕ್ ನಲ್ಲಿ ಸಾಗಿಸಿ ಕೆರೆಗೆ ಎಸೆದಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಈಗ ಪೊಲೀಸರಿಂದ ಕೆರೆಯಲ್ಲಿ ಶವ ಹುಡುಕಾಡಲು ಸಿದ್ದತೆ ನಡೆಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಹಾಡಹಗಲೇ ವೃದ್ಧ ದಂಪತಿಯ ಕೊಲೆ; ಪೊಲೀಸರಿಂದ ಚುರುಕಿನ ತನಿಖೆ

Crime News: ಕತ್ತು ಸೀಳಿ ಮಗನ ಕೊಂದ ತಾಯಿ: ವಿಚಾರಣೆ ವೇಳೆ ಬಯಲಾಯ್ತು ಎರಡು ಕೊಲೆ ರಹಸ್ಯ

Published On - 4:06 pm, Mon, 23 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ