Crime News: ಕತ್ತು ಸೀಳಿ ಮಗನ ಕೊಂದ ತಾಯಿ: ವಿಚಾರಣೆ ವೇಳೆ ಬಯಲಾಯ್ತು ಎರಡು ಕೊಲೆ ರಹಸ್ಯ

Crime News Kannada: ಈ ಸುಳಿವು ಹಿಡಿದು ಹೊರಟ ಪೊಲೀಸರು ಗೌರಿಯ ನಡೆಯ ಬಗ್ಗೆ ಸಂಶಯ ಮೂಡಿತು. ಹೀಗಾಗಿ ಹಲವು ಬಾರಿ ಪೊಲೀಸ್ ಸ್ಟೇಷನ್​ಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಿದರು.

Crime News: ಕತ್ತು ಸೀಳಿ ಮಗನ ಕೊಂದ ತಾಯಿ: ವಿಚಾರಣೆ ವೇಳೆ ಬಯಲಾಯ್ತು ಎರಡು ಕೊಲೆ ರಹಸ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 18, 2021 | 10:29 PM

ಅಮ್ಮ ಎಂದರೆ ಪ್ರೀತಿ, ಮಮತೆ, ಕರುಣೆ…ಆದರೆ ಕೆಲವರ ಪಾಲಿಗೆ ಅದು ತದ್ವಿರುದ್ಧ. ಏಕೆಂದರೆ ಇಲ್ಲೊಬ್ಬಳು ತಾಯಿ ತನ್ನ ಇಬ್ಬರು ಮಕ್ಕಳನ್ನು ಕೊಂದಿದ್ದಾಳೆ. ಹೀಗೆ ಸಾವನ್ನಪ್ಪಿದ ಒಬ್ಬನಿಗೆ ಆಕೆ ತಾಯಿಯಾಗಿದ್ದರೆ, ಮತ್ತೊಬ್ಬನಿಗೆ ಮಲತಾಯಿ. ಇಂತಹದೊಂದು ಆಘಾತಕಾರಿ ಘಟನೆ ನಡೆದದ್ದು ಗುಜರಾತ್​ನ ಅಹಮದಾಬಾದ್​ನಲ್ಲಿ. 7 ವರ್ಷಗಳ ಹಿಂದೆ ರಜನಿಕಾಂತ್ ಎಂಬ ವ್ಯಕ್ತಿ ಗೌರಿ ಪಟೇಲ್ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದ. ಆದರೆ ಅದಾಗಲೇ ತೀರಿಕೊಂಡಿದ್ದ ಮೊದಲ ಹೆಂಡ್ತಿಯಲ್ಲಿ ರಜನಿಕಾಂತ್​ಗೆ ಇಬ್ಬರು ಮಕ್ಕಳಿದ್ದರು. ಎಲ್ಲರೂ ಅಹಮದಾಬಾದ್​ನ ದಸ್ಕರೊಯ್​ ಗ್ರಾಮದಲ್ಲಿ ನೆಲೆಸಿದ್ದರು.

ಆದರೆ ಮಂಗಳವಾರ ಬೆಳಿಗ್ಗೆ ಮಲತಾಯಿ ಗೌರಿ ಪಟೇಲ್ ಪತಿಯ ಮೊದಲ ಹೆಂಡ್ತಿಯ ಹಿರಿ ಮಗ ಹಾರ್ದಿಕ್​ನ ಮನೆಗೆ ಬಂದಿದ್ದಾಳೆ. ಈ ವೇಳೆ ಹಾರ್ದಿಕ್ ಮನೆಯಲ್ಲಿ ಒಬ್ಬರೇ ಮಲಗಿದ್ದ. ಅಷ್ಟೇ ಅಲ್ಲದೆ ತಮ್ಮ ಉಮಂಗ್ ಕೆಲಸಕ್ಕೆ ಹೋಗಿದ್ದ. ಈ ಸಂದರ್ಭವನ್ನು ಬಳಸಿಕೊಂಡ ಗೌರಿ ತನ್ನ ಮೂವರು ಸಂಬಂಧಿಕರೊಂದಿಗೆ (ಸಂಜಯ್, ಅನಿಲ್ ಮತ್ತು ದಿನೇಶ್) ಸೇರಿ ಹಾರ್ದಿಕ್​ನ ಕತ್ತು ಸೀಳಿ ಕೊಲೆ ಮಾಡಿದ್ದಳು. ಬಳಿಕ ಆತನ ಮೃತ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಊರ ಹೊರಗಿನ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾಳೆ.

ತಮ್ಮ ಉಮಂಗ್ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ, ಅಣ್ಣ ಇರಲಿಲ್ಲ. ಹೀಗಾಗಿ ಮಲತಾಯಿ ಗೌರಿಯನ್ನು ವಿಚಾರಿಸಿದ್ದಾನೆ. ಆದರೆ ಆಕೆ ತನ್ನ ಪ್ರಶ್ನೆಗೆ ಸರಿಯಾದ ಉತ್ತರ ನೀಡಿರಲಿಲ್ಲ. ಇದರಿಂದ ಅನುಮಾನಗೊಂಡ ಉಮಂಗ್ ತನ್ನ ನೆರೆಹೊರೆಯವರಲ್ಲಿ ಕೇಳಿದ್ದಾನೆ. ಇದೇ ವೇಳೆ ನಿಮ್ಮ ತಾಯಿ ಹಾಗೂ ಮೂವರು ಸಂಬಂಧಿಕರು ಏನನ್ನೋ ಚೀಲದಲ್ಲಿ ಸಾಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಈ ಮಾತನ್ನು ಕೇಳಿ ಮತ್ತಷ್ಟು ಸಂಶಯಗೊಂಡ ಉಮಂಗ್ ಪಟೇಲ್ ಸಹೋದರ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಅಲ್ಲದೆ ಮಲತಾಯಿ ಗೌರಿ ಮತ್ತು ಆಕೆಯ ಸಹೋದರು ಹಾರ್ದಿಕ್ ಜೊತೆ ಯಾವಾಗಲೂ ಹಣಕ್ಕಾಗಿ ಜಗಳವಾಡುತ್ತಿದ್ದರು. ಅಲ್ಲದೆ ತಂದೆಗೆ ಸುಳ್ಳು ಹೇಳಿ ಮಲತಾಯಿ ನಮ್ಮಿಬ್ಬರಿಂದ 25 ಲಕ್ಷದವರೆಗೆ ಸಾಲ ಪಡೆದಿದ್ದಾರೆ. ಕೊರೋನಾ, ಲಾಕ್‌ಡೌನ್ ಮತ್ತು ಕರ್ಫ್ಯೂ ಕಾರಣದಿಂದಾಗಿ ನಮ್ಮ ಡೈರಿ ವ್ಯವಹಾರದಲ್ಲಿ ಸಾಕಷ್ಟು ನಷ್ಟವಾಗಿತ್ತು. ಹೀಗಾಗಿ ಸಾಲವಾಗಿ ನೀಡಿದ್ದ ಹಣವನ್ನು ಅಣ್ಣ ಕೇಳುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದ.

ಈ ಸುಳಿವು ಹಿಡಿದು ಹೊರಟ ಪೊಲೀಸರು ಗೌರಿಯ ನಡೆಯ ಬಗ್ಗೆ ಸಂಶಯ ಮೂಡಿತು. ಹೀಗಾಗಿ ಹಲವು ಬಾರಿ ಪೊಲೀಸ್ ಸ್ಟೇಷನ್​ಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಿದರು. ಈ ವೇಳೆ ಹಾರ್ದಿಕ್ ಪಟೇಲ್​ನನ್ನು ಕೊಂದಿರುವುದನ್ನು ಒಪ್ಪಿಕೊಂಡಳು. ಕೊಲೆ ಮಾಡಿದ ಬಳಿಕ ಮಗನ ದೇಹವನ್ನು ಗೋಣಿಚೀಲದಲ್ಲಿ ಹಾಕಿ ಅಹಮದಾಬಾದ್‌ನ ದಸ್ಕರೊಯ್​ನ ಕುಂಜದ್ ಗ್ರಾಮದಲ್ಲಿ ಎಸೆದಿರುವುದಾಗಿ ತಿಳಿಸಿದಳು. ಅಷ್ಟೇ ಅಲ್ಲದೆ ಪೊಲೀಸರು ಮತ್ತಷ್ಟು ಬೆಂಡೆತ್ತಿದಾಗ 15 ವರ್ಷಗಳ ಹಿಂದಿನ ಘಟನೆಯನ್ನು ಬಾಯಿಬಿಟ್ಟಿದ್ದಾಳೆ. 2014 ರಲ್ಲಿ ತನ್ನ 11 ವರ್ಷದ ಮಗನನ್ನೂ ನಾನೇ ಕೊಂದಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಆ ವೇಳೆ ಕಟ್ಟು ಕಥೆ ಕಟ್ಟಿ ಮಗ ಕಾಣೆಯಾಗಿರುವುದಾಗಿ ತಿಳಿಸಿ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು ಎಂದು ದಸ್ಕರೊಯ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ICC Test Rankings: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌: ಟಾಪ್​ 10 ರಲ್ಲಿ ಮೂವರು ಭಾರತೀಯರು

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

(Mother killed stepson and kept her dead body in a bag and thrown away)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ