ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣಾಧೀನ ಗಾಯಾಳು ಖೈದಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು

ಆರೋಪಿ ಡಾಲಿನನ್ನು ಸರಗಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಂಧನಕ್ಕೂ ಮೊದಲೇ ಗಜೇಂದ್ರ ತೀವ್ರ ಕಾಲುಬೇನೆಯಿಂದ ಬಳಲುತಿದ್ದ. ಈ ವೇಳೆ ಪೊಲೀಸರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣಾಧೀನ ಗಾಯಾಳು ಖೈದಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು
ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣಾಧಿನ ಗಾಯಾಳು ಖೈದಿ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 19, 2021 | 12:31 PM

ಬೆಂಗಳೂರು: ಗಾಯಗೊಂಡಿದ್ದ ವಿಚಾರಣಾಧೀನ ಖೈದಿ, ಕುಖ್ಯಾತ ಕಳ್ಳ ಗಜೇಂದ್ರ ಅಲಿಯಾಸ್ ಡಾಲಿ (24) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಚಂದ್ರ ಲೇಔಟ್ ಪೊಲೀಸರು ಡಾಲಿನನ್ನು ಬಂಧಿಸಿದ್ದರು.

ಆರೋಪಿ ಡಾಲಿನನ್ನು ಸರಗಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಂಧನಕ್ಕೂ ಮೊದಲೇ ಗಜೇಂದ್ರ ತೀವ್ರ ಕಾಲುಬೇನೆಯಿಂದ ಬಳಲುತಿದ್ದ. ಈ ವೇಳೆ ಪೊಲೀಸರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಗಜೇಂದ್ರನನ್ನು ಇದೇ ತಿಂಗಳ 17 ರಂದು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಜೈಲಿನಲ್ಲೂ ಸಹ ತೀವ್ರ ಕಾಲು ನೋವಿನಿಂದ ಗಜೇಂದ್ರ ಬಳಲುತಿದ್ದ. ನಿನ್ನೆ ಬೆಳಿಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಆತನನ್ನು ಶಿಫ್ಟ್ ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಗಜೇಂದ್ರ ಕೊನೆಯುಸಿರೆಳೆದಿದ್ದಾನೆ.

ಡಾಲಿ ಗಜೇಂದ್ರನ ಹಿನ್ನೆಲೆ ಡಾಲಿ ಗಜೇಂದ್ರ ಸರಗಳ್ಳತನ, ದರೋಡೆ, ಚೈನ್ ಸ್ನ್ಯಾಚ್ ಸೇರಿದಂತೆ 35ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಡಾಲಿ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ದಿನವೇ ಆರು ಸರಗಳ್ಳತನ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದ. ಬಳಿಕ ಇದೇ ತಿಂಗಳ 12 ರಂದು ಮೂರು ಸರಗಳ್ಳತನ ಕೃತ್ಯಗಳನ್ನು ಎಸಗಿದ್ದ. ಚಂದ್ರಾ ಲೇಔಟ್ ನಲ್ಲಿ ನಡೆದಿದ್ದ ಸರಗಳ್ಳತನ ಕೃತ್ಯದ ಸಂಬಂಧ ಬಂಧಿಸಲ್ಪಟ್ಟಿದ್ದ. ಕೆಪಿ ಅಗ್ರಹಾರ ನಿವಾಸಿಯಾಗಿದ್ದ ಗಜೇಂದ್ರನ ಮೃತದೇಹವನ್ನು ಈಗ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

(gajendra a chain snatcher in judicial custody died in victoria hospital)

Published On - 12:23 pm, Thu, 19 August 21