Crime News: ರಾಕ್ಷಸರಾಗುತ್ತಾರೆ ಎಂದು ಪುಟ್ಟ ಮಕ್ಕಳನ್ನೇ ಕೊಂದ ಪಾಪಿ ತಂದೆ..!

Crime News In Kannada: ಈ ವೇಳೆ ಆತ ಹೇಳಿದ ಮಾತುಗಳನ್ನು ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿ ನಿಂತು ಬಿಟ್ಟರು. ಹೌದು, ನನ್ನ ಮಕ್ಕಳಿಬ್ಬರದು ಸರ್ಪ ಡಿಎನ್​ಎ.

Crime News: ರಾಕ್ಷಸರಾಗುತ್ತಾರೆ ಎಂದು ಪುಟ್ಟ ಮಕ್ಕಳನ್ನೇ ಕೊಂದ ಪಾಪಿ ತಂದೆ..!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 18, 2021 | 9:21 PM

ಮಾನವ ಎಷ್ಟೇ ಆಧುನಿಕತೆಯತ್ತ ವಾಲಿದರೂ ಎಲ್ಲೋ ಒಂದು ಕಡೆ ಮೂಢನಂಬಿಕೆ ಎಂಬ ಮೌಢ್ಯದಲ್ಲಿ ಸಿಲುಕಿರುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಾವು ಸಾಮಾನ್ಯವಾಗಿ ನಿಧಿಗಾಗಿ ಮಕ್ಕಳನ್ನೇ ಬಲಿಕೊಟ್ಟಿರುವ ಘಟನೆಗಳ ಬಗ್ಗೆ ಓದಿರುತ್ತೀವಿ. ಇಲ್ಲ ದೇವರಿಗೆ ಮಕ್ಕಳನ್ನೇ ಬಲಿ ನೀಡಿರುವ ನೀಚ ಕುಕೃತ್ಯದ ಬಗ್ಗೆ ಕೇಳಿರುತ್ತೀರಿ. ಇದೆಲ್ಲವೂ ಭಾರತದ ಅಜ್ಞಾನಿಗಳ ವಿಷಯ ಎನ್ನಬಹುದು. ಆದರೆ ಆಧುನಿಕತೆಯ ಜನಕರೆಂದೇ ಕರೆಸಿಕೊಳ್ಳುವ ಅಮೆರಿಕದಲ್ಲೂ ಇಂತಹ ಘಟನೆಗಳು ನಡೆಯುತ್ತವೆ ಎಂದರೆ ನಂಬಲೇಬೇಕು. ಅದು ಕೂಡ ಮಕ್ಕಳು ಮುಂದೆ ರಾಕ್ಷಸರಾಗುತ್ತಾರೆ ಎಂಬ ಭಯದಲ್ಲಿ ಕೊಲ್ಲುವುದೆಂದರೆ…!

ಹೌದು, ಅಂತಹದೊಂದು ಘಟನೆ ಅಮೆರಿಕಾದ ಲಾಸ್ ಏಂಜಲೀಸ್​ನ ಮ್ಯಾಥ್ಯೂ ಟೇಲರ್ ಕೋಲ್ಮನ್ ಎಂಬ ವ್ಯಕ್ತಿಯು ಇತ್ತೀಚೆಗೆ ಮನೆಯಿಂದ ತನ್ನ ಕಾರಿನಲ್ಲಿ ಹೊರಟಿದ್ದ. ಇದೇ ವೇಳೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದ. ಕೇವಲ 2 ಮತ್ತು 10 ವಯಸ್ಸಿನ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂಬ ಹೆಂಡ್ತಿಯ ಪ್ರಶ್ನೆಗೂ ಆತ ನಿರುತ್ತರ ನೀಡಿದ್ದ.

ಇತ್ತ ಸಂಜೆಯಾದರೂ ಪತಿ ಮತ್ತು ಮಕ್ಕಳು ಮನೆಗೆ ಬಂದಿರಲಿಲ್ಲ. ಇದರಿಂದ ಏನೋ ಅನಾಹುತ ಸಂಭವಿಸಿದೆ ಎಂದು ಕೋಲ್ಮನ್ ಹೆಂಡ್ತಿ ಅನುಮಾನಗೊಂಡಿದ್ದಾಳೆ. ಅಷ್ಟೇ ಅಲ್ಲದೆ ರಾತ್ರಿಯಾದರೂ ಮನೆಗೆ ಹಿಂತಿರುಗದ ಪತಿ ಹಾಗೂ ಮಕ್ಕಳ ವಿವರಗಳೊಂದಿಗೆ ಮರುದಿನ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ ದೂರು ದಾಖಲಿಸಿದ ಪೊಲೀಸರು ಮೊಬೈಲ್ ಫೋನ್ ಟ್ರ್ಯಾಕ್ ಮಾಡಿದ್ದಾರೆ. ಈ ವೇಳೆ ಕೋಲ್ಮನ್ ಬಳಿಯಿದ್ದ ಫೋನ್ ಮೆಕ್ಸಿಕೋ ಗಡಿಭಾಗದಲ್ಲಿರುವುದು ತಿಳಿದು ಬಂದಿದೆ.

ಹೀಗಾಗಿ ಪೊಲೀಸರು ಕೂಡ ಆ ಭಾಗದತ್ತ ಮುಖ ಮಾಡಿದ್ದಾರೆ. ಅಷ್ಟರಲ್ಲಾಗಲೇ ಕೋಲ್ಮನ್ ಮೆಕ್ಸಿಕೋ ಭಾಗದಿಂದ ಅಮೆರಿಕಕ್ಕೆ ಹಿಂತಿರುಗುತ್ತಿದ್ದ. ಹೀಗಾಗಿ ಆತನನ್ನು ಗಡಿಯಲ್ಲೇ ಬಂಧಿಸಲಾಯಿತು. ಈ ವೇಳೆ ಕಾರನ್ನು ಪರಿಶೀಲಿಸಿದಾಗ ಮಕ್ಕಳಿಬ್ಬರೂ ಇರಲಿಲ್ಲ. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ಕೋಲ್ಮನ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವೇಳೆ ಆತ ಹೇಳಿದ ಮಾತುಗಳನ್ನು ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿ ನಿಂತು ಬಿಟ್ಟರು. ಹೌದು, ನನ್ನ ಮಕ್ಕಳಿಬ್ಬರದು ಸರ್ಪ ಡಿಎನ್​ಎ. ಅವರು ಮುಂದೆ ರಾಕ್ಷಸರಾಗುತ್ತಾರೆ. ಹೀಗಾಗಿ ರಾಕ್ಷಸರಿಂದ ಈ ಜಗತ್ತನ್ನು ರಕ್ಷಿಸಲು ತಾನು ಇಬ್ಬರನ್ನೂ ಕೊಂದಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ. ಈ ವೇಳೆ ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ, ಮೆಕ್ಸಿಕೋದ ರೆಸಾರಿಟೊ ಪ್ರದೇಶದಲ್ಲಿ ಮೀನು ಹಿಡಿಯುವ ಬಂದೂಕಿನಿಂದ ಮಕ್ಕಳನ್ನು ಸಾಯಿಸಿದ್ದು, ಅವರ ದೇಹವನ್ನು ಅಲ್ಲೇ ಎಸೆದು ಬಂದಿರುವುದಾಗಿ ತಿಳಿಸಿದ್ದಾನೆ. ಇತ್ತ 40 ವರ್ಷದ ಕೋಲ್ಮನ್​ ಮಾತುಗಳನ್ನು ಕೇಳಿ ಕ್ಯಾಲಿಫೋರ್ನಿಯಾ ಅಧಿಕಾರಿಗಳೇ ದಂಗಾಗಿ ಹೋದರು.

ಇನ್ನು ಮಾಥ್ಯೂ ಕೋಲ್ಮನ್ ಕ್ಯೂನಾನ್ ಮತ್ತು ಇಲ್ಯುಮಿನಾಟಿ ಸಿದ್ಧಾಂತಗಳಿಂದ ಪ್ರೇರಿತನಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ತನ್ನ ಮಕ್ಕಳು ಮುಂದೆ ರಾಕ್ಷಸರಾಗುತ್ತಾರೆ ಎಂಬ ಮೌಢ್ಯವನ್ನು ನಂಬಿ ಇಂತಹ ನೀಚ ಕೃತ್ಯ ಎಸೆಗಿದ್ದಾನೆ ಎಂದು ಫೆಡರಲ್ ಏಜೆಂಟ್ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮಾನವ ಎಷ್ಟೇ ಆಧುನಿಕತೆಯಲ್ಲಿ ಮುಂದುವರೆದರೂ ಎಲ್ಲೋ ಒಂದು ಕಡೆ ಮೂಢನಂಬಿಕೆ ಎಂಬ ಮೌಢ್ಯದಲ್ಲಿ ಸಿಲುಕಿರುತ್ತಾನೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ.

ಇದನ್ನೂ ಓದಿ: ICC Test Rankings: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌: ಟಾಪ್​ 10 ರಲ್ಲಿ ಮೂವರು ಭಾರತೀಯರು

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

(US Man Killed His 2 Children Over Serpent DNA)

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ