ಶಿವಮೊಗ್ಗದಲ್ಲಿ ಕಾರಿಗೆ ಖಾಸಗಿ ಬಸ್ ಡಿಕ್ಕಿ; ಕಾರು ಚಾಲಕ ಸ್ಥಳದಲ್ಲೇ ಸಾವು
ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನೂ ಇಬ್ಬರಿಗೆ ಅಪಘಾತದಲ್ಲಿ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ: ಖಾಸಗಿ ಬಸ್ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಶಿವಮೊಗ್ಗದ ಕುಂಚೇನಹಳ್ಳಿ ಸಮೀಪ ನಡೆದಿದೆ. ಶಿಕಾರಿಪುರ ನಿವಾಸಿ ರಾಕೇಶ್(35) ಮೃತಪಟ್ಟ ಕಾರು ಚಾಲಕ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನೂ ಇಬ್ಬರಿಗೆ ಅಪಘಾತದಲ್ಲಿ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಉಡುಪಿ: ಅಪಘಾತವಾದರೂ ಆಂಬುಲೆನ್ಸ್ನಲ್ಲಿಯೇ ಕಾಲೇಜಿಗೆ ಆಗಮಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅಪಘಾತದಲ್ಲಿ ಗಾಯಗೊಂಡರೂ ಛಲಬಿಡದೇ ಆಂಬುಲೆನ್ಸ್ನಲ್ಲಿಯೇ ಆಗಮಿಸಿದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಡಪಾಡಿಯಲ್ಲಿ ಬೈಕ್ ಅಪಘಾತದಲ್ಲಿ ಇಬ್ಬರು ಪದವಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಕುಂದಾಪುರದ ಭಂಡಾರ್ಸ್ಕರ್ ಕಾಲೇಜಿನ ಮಸಾಯಿದ್ ಮತ್ತು ವಾಜಿದ್ ಎಂಬುವವರೇ ಅಪಘಾತದಲ್ಲಿ ಗಾಯಗೊಂಡ ಪದವಿ ವಿದ್ಯಾರ್ಥಿಗಳು. ಪ್ರಥಮ ವರ್ಷದ ಪದವಿ ಪರೀಕ್ಷೆ ಬರೆಯಲು ಶಿರೂರಿನಿಂದ ಬೈಕ್ನಲ್ಲಿ ಬಂದಿದ್ದ ಮಸಾಯಿದ್, ಗಂಗೊಳ್ಳಿಗೆ ತೆರಳಿ ಅಲ್ಲಿಂದ ಸ್ನೇಹಿತ ವಾಜಿದ್ ಅವರನ್ನು ಕರೆದುಕೊಂಡು ಕಾಲೇಜಿಗೆ ತೆರಳುತ್ತಿದ್ದರು.
ಇದೇ ವೇಳೆ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ವಿದ್ಯಾರ್ಥಿಗಳಿದ್ದ ಬೈಕ್ ಢಿಕ್ಕಿಯಾಗಿದೆ. ವಿದ್ಯಾರ್ಥಿಗಳಿಗೆ ಅಪಘಾತವಾಗಿರುವುದನ್ನು ಗಮನಿಸಿದ ಗಂಗೊಳ್ಳಿಯ ಆಪತ್ಬಾಂಧವ ಎಂದೇ ಖ್ಯಾತರಾದ ಆಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡ ತೀವ್ರ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆನಂತರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆಂಬುಲೆನ್ಸ್ನಲ್ಲಿಯೇ ಭಂಡಾರ್ಕರ್ ಕಾಲೇಜು ವಿದ್ಯಾರ್ಥಿಗಳು ತೆರಳಿದ್ದಾರೆ. ಇಬ್ಬರೂ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬರೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ:
ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಆಡಳಿತ ಇರುವುದಿಲ್ಲ; ತಾಲಿಬಾನ್ ನಾಯಕ ಹೇಳಿದ್ದೇನು?
(Shivamogga Private bus and car accident car driver killed at the spot)