ಬಾದಾಮಿಯಲ್ಲಿ ಪಿಕ್​ನಿಕ್​ಗೆಂದು ಬಂದಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

ಕೈ ತೊಳೆಯಲು ಹೋದ ಶ್ರೀದೇವಿ ಮಾವಿನಮರದ ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ಮೈದುನ ವಿಶ್ವನಾಥ ಹಾಗೂ ವಿಶ್ವನಾಥ ಅವರ ಮಗಳು ನಂದಿನಿ ಸಹ ಜಾರಿ ನದಿಗೆ ಬಿದ್ದಿದ್ದಾರೆ.

ಬಾದಾಮಿಯಲ್ಲಿ ಪಿಕ್​ನಿಕ್​ಗೆಂದು ಬಂದಿದ್ದ ಒಂದೇ ಕುಟುಂಬದ ಮೂವರು ನೀರುಪಾಲು
ನೀರುಪಾಲಾದ ಸ್ಥಳ ಮತ್ತು ವಿಶ್ವನಾಥ್
Follow us
TV9 Web
| Updated By: guruganesh bhat

Updated on:Aug 22, 2021 | 6:01 PM

ಬಾಗಲಕೋಟೆ: ಪಿಕ್ನಿಕ್​ಗೆಂದು ಬಾದಾಮಿಗೆ ಬಂದಿದ್ದ ಒಂದೇ ಕುಟುಂಬದ ಮೂವರು ಶಿವಯೋಗಮಂದಿರ ಬಳಿಯ ನದಿಯಲ್ಲಿ ನೀರುಪಾಲಾದ ದುರ್ಘಟನೆ ನಡೆದಿದೆ. ವಿಶ್ವನಾಥ ಮಾವಿನಮರದ (40), ಶ್ರೀದೇವಿ ಮಾವಿನಮರದ (32), ನಂದಿನಿ ಮಾವಿನಮರದ (12) ನದಿಯಲ್ಲಿ ಕೊಚ್ಚಿಹೋದ ದುರ್ದೈವಿಗಳು. ಶ್ರೀದೇವಿ ಮಾವಿನಮರದ ಮೃತದೇಹ ಪತ್ತೆಯಾಗಿದ್ದು, ಬಾದಾಮಿ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಉಳಿದವರ ಶೋಧ ನಡೆಸುತ್ತಿದ್ದಾರೆ. ಮೃತರು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾಗಿದ್ದು, ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದರು. ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ದರು. ನಂತರ ಬಾದಾಮಿ ತಾಲೂಕಿನ ಶಿವಯೋಗಮಂದಿರಕ್ಕೆ ತೆರಳಿದ್ದರು. ಉಪಹಾರ ಸೇವಿಸಲು ಶಿವಯೋಗಮಂದರ ನದಿ ದಡದಲ್ಲಿ ಕೂತಿದ್ದರು. ಈ ಸಂದರ್ಭದಲ್ಲಿ ಕೈ ತೊಳೆಯಲು ಹೋದ ಶ್ರೀದೇವಿ ಮಾವಿನಮರದ ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ಮೈದುನ ವಿಶ್ವನಾಥ ಹಾಗೂ ವಿಶ್ವನಾಥ ಅವರ ಮಗಳು ನಂದಿನಿ ಸಹ ಜಾರಿ ನದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: 

ಯಾರದ್ದೋ ಚೆಕ್, ಎಲ್ಲಿಯದ್ದೋ ಬ್ಯಾಂಕ್: ಕಂತೆ ಕಂತೆ ಹಣ ಎಣಿಸಬೇಕಾದವರು ಧಾರವಾಡದಲ್ಲಿ ಪೊಲೀಸರ ಬಲೆಗೆ

ಅಫ್ಘಾನಿಸ್ತಾನದಿಂದ ಬಂದವರಿಗೆ ಭಾರತದಲ್ಲಿ ಉಚಿತ ಪೋಲಿಯೊ ಲಸಿಕೆ: ಕೇಂದ್ರ ಆರೋಗ್ಯ ಸಚಿವ

(Bagalkot Badami 3 of the same family who came to picnic are missing in the river)

Published On - 4:39 pm, Sun, 22 August 21